ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಹೊಸ ಆಪ್

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 04 : ಇನ್ನುಮುಂದೆ ಸಂಚಾರಿ ನಿಯಮ ಉಲ್ಲಂಘಿಸುವವರ ಉಪಟಳಕ್ಕೆ ಕೊಂಚ ಮಟ್ಟಿಗೆ ಬ್ರೇಕ್ ಬೀಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ. ಅಂದ್ರೆ ಸಂಚಾರಿ ನಿಯಮ ಉಲ್ಲಂಘನಕಾರರು ಪೇಚಿಗೆ ಸಿಲುಕಿಕೊಳ್ಳುವ ಸಮಯ ಸನ್ನಿಹಿತದಲ್ಲಿಯೇ ಇದೆ.

ನಗರದ ಸಂಚಾರಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರ ಪತ್ತೆಗೆ ನೆರವಾಗಬಲ್ಲ 'ಪಬ್ಲಿಕ್ ಐ' ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿ ಪಡಿಸಿದ್ದು, ಇನ್ ಫ್ರೆಂಟಿ ರಸ್ತೆಯ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ನಗರ ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ಇದಕ್ಕೆ ಚಾಲನೆ ನೀಡಿದರು.[ಚಿಕ್ಕಪೇಟೆ ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]

Bengaluru city traffic police release new mobile application against of traffic rule breakers

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ ಸಲೀಂ ಅವರು ಜನಸಾಮಾನ್ಯರು ಈ ಅಪ್ಲೀಕೇಷನ್ ಬಳಕೆ ಮಾಡುವುದರ ಮೂಲಕ ಸಂಚಾರಿ ನಿಯಮ ಉತ್ಕೃಷ್ಠತೆಯನ್ನು ಸದಾ ಕಾಯ್ದುಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.

ಸಾರ್ವಜನಿಕರು ಏನು ಮಾಡಬೇಕು?

ಈ ಅಪ್ಲೀಕೇಷನ್ ಸಾರ್ವಜನಿಕರಿಗೆ ಉಚಿತವಾಗಿ ದೊರೆಯಲಿದ್ದು, ಇದನ್ನು ಮೊದಲು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಬಳಿಕ ಸಂಚಾರ ಉಲ್ಲಂಘಿಸುವ ದೃಶ್ಯಗಳನ್ನು ಸೆರೆಹಿಡಿದು, ವಾಹನದ ನೋಂದಣಿ ಸಂಖ್ಯೆ, ಸ್ಥಳ, ಘಟನೆ, ದಿನಾಂಕ ಮತ್ತಿತರ ವಿವರಗಳ ಸಮೇತ ಸಂಚಾರ ಪೊಲೀಸರ ವೆಬ್ ಸೈಟ್ ಗೆ ಕಳುಹಿಸಬಹುದು.[ಬೆಂಗಳೂರಿನ ಪುಟ್ಟ ಟ್ರಾಫಿಕ್ ಪೊಲೀಸನಿಗೊಂದು ಸಲಾಂ!]

ಏನಿದು ಪಬ್ಲಿಕ್ ಐ ?

ಇದು ಒಂದು ಮೊಬೈಲ್ ಅಪ್ಲಿಕೇಷನ್. ಇದನ್ನು 2012 ರಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಅನುಕೂಲವಾಗುವಂತೆ ಸಾರ್ವಜನಿಕರ ನೆರವು ಪಡೆಯಲು ಇದನ್ನು ಅನುಷ್ಠಾನಕ್ಕೆ ತರಲಾಗಿತ್ತು.

ಇದನ್ನು ಐ ಚೇಸ್ ಮೈ ಸಿಟಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಆಪ್ ನಿಂದ ಇಂದಿನವರೆಗೂ ಸುಮಾರು 32,000 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.

English summary
Bengaluru city traffic police release new mobile application against of traffic rule breakers. This mobile application name is 'Public i'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X