ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೇರ್‌ ಚಾಟ್‌ನಲ್ಲಿ ಖಾತೆ ತೆರೆದ ಬೆಂಗಳೂರು ಪೊಲೀಸರು

|
Google Oneindia Kannada News

ಬೆಂಗಳೂರು, ಜುಲೈ 25 : ಬೆಂಗಳೂರು ನಗರ ಪೊಲೀಸರು ಶೇರ್ ಚಾಟ್‌ನಲ್ಲಿ ಖಾತೆ ತೆರೆದಿದ್ದಾರೆ. ಜನರು ಈ ಅಪ್ಲಿಕೇಶನ್ ಮೂಲಕ ಕನ್ನಡ ಭಾಷೆಯಲ್ಲಿ ದೂರು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ವಾಟ್ಸಪ್, ಟ್ವೀಟರ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಬೆಂಗಳೂರು ಪೊಲೀಸರು ಸಕ್ರಿಯರಾಗಿದ್ದಾರೆ. ಈಗ ಶೇರ್‌ ಚಾಟ್‌ನಲ್ಲಿ ಖಾತೆಯನ್ನು ತೆರೆಯಲಾಗಿದೆ.

ಕೋರಮಂಗಲ ಪೊಲೀಸರಿಗೆ ಸಿಕ್ಕಿಬಿದ್ದ ರೌಡಿಶೀಟರ್ ಕುಣಿಗಲ್ ಗಿರಿಕೋರಮಂಗಲ ಪೊಲೀಸರಿಗೆ ಸಿಕ್ಕಿಬಿದ್ದ ರೌಡಿಶೀಟರ್ ಕುಣಿಗಲ್ ಗಿರಿ

ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿಗಳನ್ನು ಸಂದೇಶ, ವಿಡಿಯೋ, ಆಡಿಯೋ, ಚಿತ್ರ ಅಥವ ಸದರಿ ಅಪ್ಲಿಕೇಶನ್‌ನಲ್ಲಿ ಲಭ್ಯವಿರುವ ರೂಪದಲ್ಲಿ ನಮ್ಮ ಕನ್ನಡ ಭಾಷೆಯಲ್ಲಿ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರು : ಮೊಬೈಲ್ ಕಳ್ಳತನ ಮಾಡಲು ಒಪ್ಪದ್ದಕ್ಕೆ ಚಾಕು ಇರಿತಬೆಂಗಳೂರು : ಮೊಬೈಲ್ ಕಳ್ಳತನ ಮಾಡಲು ಒಪ್ಪದ್ದಕ್ಕೆ ಚಾಕು ಇರಿತ

Bengaluru city police now in sharechat

ಶೇರ್‌ ಚಾಟ್‌ನಲ್ಲಿ @blrcitypolice #ಬೆಂಗಳೂರು ನಗರ ಪೊಲೀಸ್ ಎಂದು ಖಾತೆ ಇದ್ದು ಕನ್ನಡದಲ್ಲಿಯೇ ಜನರು ದೂರು ನೀಡಬಹುದು ಎಂದು ತಿಳಿಸಲು ಸಂತಸವಾಗುತ್ತದೆ ಎಂದು ಬೆಂಗಳೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 45 ಲಕ್ಷ ವಶಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 45 ಲಕ್ಷ ವಶ

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್ ಜುಲೈ 25ರಂದು ಬೆಂಗಳೂರು ನಗರದ ಘಟಕ ಜನರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಹಾಗೂ ಸಮುದಾಯ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ನಗರ ಪೊಲೀಸ್ ಘಟಕದ ಅಧಿಕೃತ ಶೇರ್ ಚಾಟ್ ಖಾತೆಯನ್ನು ಉದ್ಘಾಟಿಸಿದರು.

ಬೆಂಗಳೂರು ನಗರದ ಜನರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಲಾಗಿದೆ. ಕನ್ನಡ ಭಾಷೆಯ ಮೂಲಕವೇ ಜನರು ದೂರು ನೀಡಬಹುದಾಗಿದೆ.

English summary
After Twitter, Facebook and Instagram Bengaluru City Police now in Sharechat. Police opened Sharechat account. People can file complaint in Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X