ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎನ್‌ಜಿಟಿ ಆದೇಶ ಜಾರಿಯಾದರೆ ಬೆಂಗಳೂರಿನ ಶೇ.95ರಷ್ಟು ಕಟ್ಟಡ ನೆಲಸಮ

|
Google Oneindia Kannada News

ಬೆಂಗಳೂರು, ಜನವರಿ 21: ಎನ್‌ಜಿಟಿ ಆದೇಶ ಜಾರಿಯಾದರೆ ಬೆಂಗಳೂರಿನ ಶೇ.95 ರಷ್ಟು ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಗೆ ತಿಳಿಸಿದೆ.

ಬೆಳ್ಳಂದೂರು ಕೆರೆ: ಸರ್ಕಾರದ ಮಾಹಿತಿ ಪರಿಶೀಲನೆಗೆ ಎನ್‌ಜಿಟಿ ಸಮಿತಿ ಬೆಳ್ಳಂದೂರು ಕೆರೆ: ಸರ್ಕಾರದ ಮಾಹಿತಿ ಪರಿಶೀಲನೆಗೆ ಎನ್‌ಜಿಟಿ ಸಮಿತಿ

2016ರ ಎನ್‌ಜಿಟಿ ಆದೇಶ ಪಾಲನೆ ಮಾಡಿದರೆ ಬೆಂಗಳೂರಿನ ಬಹುತೇಕ ಕಟ್ಟಡಗಳು ನಾಶವಾಗುತ್ತದೆ. ಅಷ್ಟೇ ಅಲ್ಲದೆ ಸಂತ್ರಸ್ತರಿಗೆ 3 ಲಕ್ಷ ಕೋಟಿ ಪರಿಹಾರ ನೀಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಮೂರನೇ ಹಂತದ ರಾಜಕಾಲುವೆ ಪ್ರತಿ ಮನೆ ಕಟ್ಟಡದ ಮುಂದೆ ಇದೆ. ಎನ್‌ಜಿಟಿ ಆದೇಶ ಪಾಲಿಸಿದರೆ ಕೆಲವು ನಿವೇಶನ ಹಾಗೂ ಮನೆಗಳನ್ನು ಬಿಟ್ಟು ಉಳಿದವುಗಳನ್ನು ಕೆಡವಬೇಕಾಗುತ್ತದೆ ಎಂದು ತಿಳಿಸಿದೆ.ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ

ಕೆರೆಗಳು ಹಾಗೂ ರಾಜಕಾಲುವೆಗಳ ಸುತ್ತಮುತ್ತ ಇನ್ನುಮುಂದೆ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಡಬಾರದು ಎಂದು ಎನ್‌ಜಿಟಿ 2016 ಮೇ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಕೆರೆಯ ಅಂಚಿನಿಂದ 75 ಮೀಟರ್ ಅಂದರೆ 225 ಅಡಿ ದೂರದ ಪರಿಧಿ ಯನ್ನು ಬಫರ್ ಜೋನ್ ಅಥವಾ ಹಸಿರು ವಲಯ ಎಂದೂ ಆದೇಶದಲ್ಲಿ ತಿಳಿಸಲಾಗಿತ್ತು.

Bengaluru city buildings will be demolish if NGT order implemented

ಎರಡೂ ರಾಜಕಾಲುವೆಗಳನ್ನು ಸೇರುವ ಮೂರನೇ ಶ್ರೇಣಿಯ ಕಾಲುವೆಗಳ ಎಡ ಮತ್ತು ಬಲದಲ್ಲಿ 25 ಮಿಟರ್ ಬಿಡಬೇಕು ಎಂದು ಸೂಚಿಸಲಾಗಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನ ಮೊರೆ ಹೋಗಿದೆ. ಈ ಕುರಿತು ನ್ಯಾಯಮೂರ್ತಿ ಎಕೆ ಸಿಕ್ರಿ ಅವರಿರುವ ತ್ರಿಸದಸ್ಯ ಪೀಠಕ್ಕೆ ರಾಜ್ಯ ಸರ್ಕಾರದ ವಕೀಲರಾದ ಉದಯ್ ಹೊಳ್ಳ ಅವರು ಲಿಖಿತ ಹೇಳಿಕೆ ಸಲ್ಲಿಸಿದ್ದಾರೆ.

English summary
If the National Green Tribunal’s (NGT) 2016 directions with respect to buffer zones around the lakes and stormwater drains were implemented, it would result in the demolition of 95percent of buildings in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X