ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ನಾಲ್ವರು ಸಿಮಿ ಉಗ್ರರು ನಿಮ್ಮ ಊರಿನಲ್ಲಿದ್ದಾರೆಯೇ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ 31 : ಬೆಂಗಳೂರಿನ ಚರ್ಚ್‌ಸ್ಟ್ರೀಟ್ ಸ್ಫೋಟ ಸೇರಿದಂತೆ ದೇಶದ ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ನಾಲ್ವರು ಸಿಮಿ ಉಗ್ರರ ಭಾವಚಿತ್ರಗಳನ್ನು ರಾಷ್ಟ್ರೀಯ ತನಿಖಾ ದಳ ಬಿಡುಗಡೆ ಮಾಡಿದೆ. ಈ ಉಗ್ರರ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ಒಟ್ಟು 7 ಉಗ್ರರು ಮಧ್ಯ ಪ್ರದೇಶದ ಖಂಡ್ವಾ ಜೈಲಿನಿಂದ ಎರಡು ವರ್ಷಗಳ ಹಿಂದೆ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದರು. ಇವರಲ್ಲಿ ಇಬ್ಬರನ್ನು ಕೆಲವು ತಿಂಗಳ ಹಿಂದೆ ತೆಲಂಗಾಣ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. [ಬೆಂಗಳೂರು ಸ್ಫೋಟ ತನಿಖೆ ಆರಂಭಿಸಿದ ಎನ್ ಐಎ]

simi

ಉಗ್ರರ ತಲೆಗೆ 10 ಲಕ್ಷ ಬಹುಮಾನ : ಈ ನಾಲ್ವರು ಉಗ್ರರ ತಲೆಗೆ ಎನ್‌ಐಎ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ. ಬೆಂಗಳೂರು ಸ್ಫೋಟ, ಜೈಲಿನಿಂದ ಪರಾರಿ, ಉತ್ತರ ಪ್ರದೇಶ ಮತ್ತು ತೆಲಂಗಾಣದ ದರೋಡೆ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಈ ನಾಲ್ವರು ಪಾಲ್ಗೊಂಡಿದ್ದಾರೆ. [ಬೆಂಗಳೂರು ಸ್ಫೋಟದ ಆರೋಪಿಗಳು ಎಲ್ಲಿ?]

ಖಂಡ್ವಾ ಜೈಲಿನಿಂದ ಇವರು ತಪ್ಪಿಸಿಕೊಂಡಾಗಿನಿಂದ ಹುಡುಕಾಟ ನಡೆಯುತ್ತಿದೆ. ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ ಈ ಉಗ್ರರು ದಕ್ಷಿಣ ಭಾರತದಲ್ಲಿದ್ದಾರೆ. ಬೆಂಗಳೂರಿಗೂ ಕೆಲವು ದಿನಗಳ ಹಿಂದೆ ಭೇಟಿ ನೀಡಿರುವ ಸಾಧ್ಯತೆ ಇದೆ. [ಭವಾನಿ ಬದುಕಿನ ಹಳಿ ತಪ್ಪಿಸಿದ ವಿಧಿಯ ಅಟ್ಟಹಾಸ!]

ರಾಷ್ಟ್ರೀಯ ತನಿಖಾ ದಳದ ಪ್ರಕಾರ ಬೇರೆ-ಬೇರೆ ರಾಜ್ಯಗಳನ್ನು ಸುತ್ತುತ್ತಿರುವ ಈ ಉಗ್ರರು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಮೇಲೆ ಗಮನವಿಟ್ಟಿದ್ದಾರೆ. ರಾಜ್ಯ ಮತ್ತು ಕೇಂದ್ರದ ಗುಪ್ತಚರ ಇಲಾಖೆಗಳು ಈ ಉಗ್ರರನ್ನು ಹಿಡಿಯಲು ಪ್ರಯತ್ನ ನಡೆಸುತ್ತಿವೆ. ಈ ಉಗ್ರರ ಬಂಧನಕ್ಕೆ ರಾಷ್ಟ್ರೀಯ ತನಿಖಾ ದಳ ಜನರ ಸಹಾಯ ಕೇಳಿದ್ದು, ಫೋಟೋಗಳನ್ನು ಬಿಡುಗಡೆ ಮಾಡಿದೆ.

ನಾಲ್ವರು ಪರಿಚಯ : ಉಗ್ರರಾದ ಶೇಕ್ ಮಹಬೂಬ್, ಅಜ್ಮದ್ ಖಾನ್, ಸಾಲಿಕ್, ಝಾಕಿರ್ ಎನ್‌ಐಎ ಮೋಸ್ಟ್‌ ವಾಟೆಂಡ್ ಪಟ್ಟಿಯಲ್ಲಿದ್ದಾರೆ. 2013ರ ಅಕ್ಟೋಬರ್‌ 1ರಂದು ಇವರು ಜೈಲಿನಿಂದ ಪರಾರಿಯಾಗಿದ್ದಾರೆ. ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದರೋಡೆ, ಕೊಲೆ ಪ್ರಕರಣದಲ್ಲೂ ಇವರು ಭಾಗಿಯಾಗಿದ್ದಾರೆ ಎಂದು ಎನ್‌ಐಎ ಹೇಳಿದೆ.

ಅಂದು ಏನಾಗಿತ್ತು? : ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ 2014ರ ಡಿ.28ರ ಭಾನುವಾರ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಹೊಸ ವರ್ಷದ ಸಂಭ್ರಮಾಚರಣೆ ಗುಂಗಿನಲ್ಲಿದ್ದ ಉದ್ಯಾನಗರಿಯ ಜನರು ಬಾಂಬ್ ಸ್ಫೋಟದ ಸುದ್ದಿ ಕೇಳಿ ಆತಂಕಗೊಂಡಿದ್ದರು.

English summary
The National Investigation Agency has released the latest pictures of four SIMI activists alleged to be involved in a series of terrorist activities which include inciting hatred and also the Church Street blasts of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X