• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚರ್ಚ್‌ಸ್ಟ್ರೀಟ್‌ ಸ್ಫೋಟಕ್ಕೆ ಸಿಕ್ಕಿತು 12 ಪುಟದ ದಾಖಲೆ

By ವಿಕಾಸ್ ನಂಜಪ್ಪ
|

ಬೆಂಗಳೂರು, ಏಪ್ರಿಲ್ 25 : ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯೊಂದನ್ನು ಎನ್‌ಐಎ ಕಲೆ ಹಾಕಿದೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಅಫ್ರಿದಿ ಅಲಿಯಾಸ್ ಜಾವೇದ್ ರಫೀಕ್‌ನಿಂದ ಈ ಸಾಕ್ಷಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 'ಸುಲಭವಾಗಿ ಬಾಂಬ್ ತಯಾರಿಸುವುದು ಹೇಗೆ?' ಎಂಬ 12 ಪುಟಗಳ ದಾಖಲೆಯನ್ನು ವಶಕ್ಕೆ ಪಡೆದುಕೊಂಡಿದೆ. ಇದನ್ನು ಮುಂದಿಟ್ಟುಕೊಂಡೇ ಅಫ್ರಿದಿ ಬಾಂಬ್ ತಯಾರಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. [ಕೋಕೋನಟ್ ಗ್ರೋವ್ ಹೋಟೆಲ್ ನಲ್ಲಿ ಬಾಂಬ್ ಇಡಬೇಕಿತ್ತು]

2016ರ ಜನವರಿ ಕೊನೆಯ ವಾರದಲ್ಲಿ ರಾಷ್ಟ್ರೀಯ ತನಿಖಾ ದಳ ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಐಎಸ್‌ಐಎಸ್ ಬೆಂಬಲಿಸುತ್ತಿದ್ದ ಶಂಕಿತ ಉಗ್ರರನ್ನು ಬಂಧಿಸಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಬಳಿ ರಫೀಕ್ ಅಲಿಯಾಸ್ ಅಫ್ರಿದಿಯನ್ನು ಬಂಧಿಸಲಾಗಿತ್ತು. [ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ತನಿಖೆ ಆರಂಭಿಸಿದ ಎನ್ ಐಎ]

ಈ ಎಲ್ಲಾ ಬಂಧಿತ ಉಗ್ರರ ಬಳಿ ಸುಲಭವಾಗಿ ಬಾಂಬ್ ತಯಾರಿಸುವುದು ಹೇಗೆ? ಎಂಬ 12 ಪುಟಗಳ ದಾಖಲೆ ಸಿಕ್ಕಿದೆ.

12 ಪುಟಗಳ ದಾಖಲೆಯಲ್ಲಿ ಬಾಂಬ್ ಜೋಡಣೆ, ಮನೆಯಲ್ಲೇ ಸಿಗುವ ವಸ್ತುಗಳ ಮೂಲಕ ಬಾಂಬ್ ತಯಾರಿ ಮಾಡುವುದು ಮುಂತಾದ ಮಾಹಿತಿಗಳನ್ನು ನೀಡಲಾಗಿದೆ. [Church Street ಸ್ಫೋಟಕ್ಕೆ ಒಂದು ವರ್ಷ]

ಇಂತಹ ದಾಖಲೆಗಳನ್ನೇ ವಿಶ್ವದ ವಿವಿಧ ಭಯೋತ್ಪಾದಕ ಸಂಘಟನೆಗಳು ಬಳಸುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೊದಲು ಯುವಕರನ್ನು ಸೆಳೆಯುತ್ತಿದ್ದ ಉಗ್ರ ಸಂಘಟನೆಗಳು ಅವರಿಗೆ ಬಾಂಬ್ ತಯಾರಿ ಮಾಡುವ ಬಗ್ಗೆ ತರಬೇತಿ ನೀಡುತ್ತಿದ್ದವು. ಈಗ ಎಲ್ಲಾ ಸಂಘಟನೆಗಳು ಇಂತಹ ದಾಖಲೆಗಳನ್ನು ಬಳಸುತ್ತಿವೆ.

ಚರ್ಚ್‌ಸ್ಟ್ರೀಟ್‌ ಬಾಂಬ್ ಸ್ಫೋಟದಲ್ಲಿ ಪೋಟಾಷಿಯಂ ಮತ್ತು ಸಲ್ಫರ್ ಬಳಕೆ ಮಾಡಲಾಗಿತ್ತು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಇದನ್ನು ಸಾಕ್ಷಿ ಎಂದು ಪರಿಗಣಿಸಿದ್ದಾರೆ.

ಅಂದಹಾಗೆ 2014ರ ಡಿಸೆಂಬರ್ 28ರಂದು ಚರ್ಚ್‌ಸ್ಟ್ರೀಟ್‌ನಲ್ಲಿನ ಕೋಕೋನಟ್ ಗ್ರೋವ್ ಹೋಟೆಲ್‌ ಬಳಿ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟಗೊಂಡಿತ್ತು. ಒಬ್ಬ ಮಹಿಳೆ ಈ ಸ್ಫೋಟದಿಂದಾಗಿ ಸಾವನ್ನಪ್ಪಿದ್ದರು. ಬೆಂಗಳೂರು ಪೊಲೀಸರು ಮೊದಲು ಸ್ಫೋಟದ ತನಿಖೆ ಕೈಗೊಂಡರು. ನಂತರ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಎನ್‌ಐಎಗೆ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 12 page document titled an easy way to make a bomb is now part of the evidence that the National Investigation Agency has placed on record in connection with the Bengaluru Church Street Blasts. The NIA took over the Church Street blasts case from the Bengaluru police following a notification by the Union Home Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more