ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು:35 ವರ್ಷಗಳಲ್ಲಿ 200 ಬಾರಿ ರಕ್ತದಾನ ಮಾಡಿದ್ದಾರೆ 56 ವರ್ಷದ ಎಂಜಿನಿಯರ್

|
Google Oneindia Kannada News

ಬೆಂಗಳೂರು,ಫೆಬ್ರವರಿ 25: 35 ವರ್ಷಗಳಿಂದ ವರ್ಷಕ್ಕೆ ಒಂದು ಬಾರಿ ಅಂದರೂ ಬರೋಬ್ಬರಿ 35 ಬಾರಿ ರಕ್ತದಾನ ಮಾಡಬಹುದು.

ಆದರೆ ಬೆಂಗಳೂರಿನ ಈ ಎಂಜಿನಿಯರ್ 35 ವರ್ಷಗಳಿಂದ 200 ಬಾರಿ ರಕ್ತದಾನ ಮಾಡಿದ್ದಾರೆ. ಹೌದು 56 ವರ್ಷದ ಎಂಜಿನಿಯರ್ ಚಂದ್ರಕಾಂತ ಕೆವಿ ಎಂಬುವವರು ಇಲ್ಲಿಯವರೆಗೆ 200 ಬಾರಿ ರಕ್ತದಾನ ಮಾಡಿದ್ದಾರಂತೆ..

ಮೈಸೂರಿನಲ್ಲಿ ಯುವಕರಿಂದ ಸ್ವಯಂ ರಕ್ತದಾನಮೈಸೂರಿನಲ್ಲಿ ಯುವಕರಿಂದ ಸ್ವಯಂ ರಕ್ತದಾನ

ರಕ್ಷಣಾ ಸಚಿವಾಲಯದ ಕ್ವಾಲಿಟಿ ಆಫ್ ಅಸ್ಯುರೆನ್ಸ್ ರಡಾರ್‌ನ ಕಂಟ್ರೋಲರೇಟ್ ಆಗಿ ಕೆಲಸ ಮಾಡುತ್ತಿದ್ದಾರೆ.ಅವರು ರಕ್ತದ ಮಾದರಿ 0+veಆಗಿದೆ.ಸರ್ಕಾರದ ನಿಯಮ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ನೀಡಬಹುದು. ಆದರೆ ನಾನು ಒಂದು ವಾರಕ್ಕೆ ಎರಡು ಬಾರಿ ರಕ್ತ ನೀಡುತ್ತಿದ್ದೆ, ಯಾವ್ಯಾಗ ಅವಶ್ಯಕತೆ ಇರುತ್ತದೋ ಅಂದು ರಕ್ತ ನೀಡುತ್ತಿದ್ದೆ.ಕಳೆದ 10 ವರ್ಷಗಳಿಂದ ಕನಿಷ್ಠವೆಂದರೂ 100 ಬಾರಿ ರಕ್ತದಾನ ಮಾಡಿದ್ದೇನೆ ಎಂದು ಚಂದ್ರಕಾಂತ್ ತಿಳಿಸಿದ್ದಾರೆ.

Bengaluru: Chandrakantha KV,56 Year Old Engineer Donates Blood For 200th Time In 35 Years

ಚಂದ್ರಕಾಂತ್ ಅವರುಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿದ್ದಾಗ, ತಮಗೆ 21 ವರ್ಷವಿದ್ದಾಗಿನಿಂದ ರಕ್ತದಾನ ಮಾಡಲು ಶುರು ಮಾಡಿದರು.
1986 ರಲ್ಲಿ ಎನ್‌ಸಿಸಿ ರಕ್ತದಾನ ಶಿಬಿರ ಆಯೋಜಿಸಿತ್ತು. ಅಂದು ಮೊದಲ ಬಾರಿಗೆ ರಕ್ತ ನೀಡಿದ್ದೆ, ಬಳಿಕ ಯಾವಾಗ ನನ್ನ ರಕ್ತದ ಅಗತ್ಯವಿತ್ತೋ ಆಗೆಲ್ಲಾ ರಕ್ತ ನೀಡಿದ್ದೇನೆ ಎಂದರು.

ಅವರ ಪ್ರೀತಿಪಾತ್ರರನ್ನು ಉಳಿಸಿಕೊಳ್ಳಲು ಆಸ್ಪತ್ರೆಯಲ್ಲಿ ಜನರು ಕಣ್ಣೀರು ಹಾಕುತ್ತಿರುವುದನ್ನು ನೋಡಿದ್ದೇನೆ, ಇದರಿಂದ ಅಂತಹವರ ಜೀವವನ್ನು ಉಳಿಸಲೇ ಬೇಕು ಎಂದು ಪಣತೊಟ್ಟಿದ್ದೆ, ರಕ್ತದಾನದ ಮೇಲೆ ಸಮಾಜದಲ್ಲಿ ಅಪನಂಬಿಕೆ ಇದೆ ಅದನ್ನು ದೂರ ಮಾಡಬೇಕಿದೆ.

Recommended Video

ಇಂದು ಭಾರತ್ ಬಂದ್-ಡೀಸೆಲ್-ಪೆಟ್ರೋಲ್ ದರ ಹೆಚ್ಚಳ, ಟೋಲ್ ನೀತಿಗೆ ವಿರೋಧ | Oneindia Kannada

ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿ ಇಲ್ಲ,ಹೊಸ ಹಾರ್ಮೋನ್‌ಗಳು ಉತ್ಪತ್ತಿಯಾಗುತ್ತವೆ, ಹೇಗೆ 18 ವರ್ಷಕ್ಕೆ ಚಾಲನಾ ಪರವಾನಗಿ ದೊರೆಯುತ್ತದೆಯೋ,ಮತದಾರರ ಗುರುತಿನ ಚೀಟಿ ಸಿಗುತ್ತದೆಯೋ ಹಾಗೆಯೇ ರಕ್ತದಾನ ಮಾಡಲು ಶುರು ಮಾಡಿ, ಇದರಿಂದ ಸಾಕಷ್ಟು ಮಂದಿ ಜೀವವನ್ನು ಉಳಿಸಬಹುದು ಎಂದು ಯುವಜನತೆಗೆ ಕರೆ ನೀಡಿದ್ದಾರೆ.

English summary
How many times can one donateblood in a lifetime? Ask Chandrakantha KV, a 56 year old engineer who donated blood for the 200th time in 35 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X