ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ವಿಸ್ ಅಪಾರ್ಟಮೆಂಟ್ ಹೆಸರು ಹೇಳಿಕೊಂಡು ಹೈಟೆಕ್ ವೇಶ್ಯಾವಾಟಿಕೆ!

|
Google Oneindia Kannada News

ಬೆಂಗಳೂರು, ಫೆಬ್ರವರಿ 21; ಸರ್ವಿಸ್ ಅಪಾರ್ಟ್‌ಮೆಂಟಿನ ಹೆಸರು ಹೇಳಿಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೆಬ್ಬಾಳದ ಕಟ್ಟಡವೊಂದರ ಮೇಲೆ ಗುರುವಾರ ದಾಳಿ ಮಾಡಿ ಬೆಂಗಳೂರು ಸಿಸಿಬಿ ಪೊಲೀಸ್ ಇಬ್ಬರನ್ನು ಬಂಧಿಸಿದ್ದಾರೆ.

ಸಂಜಯ್‌ಕುಮಾರ್ ಊರ್ಪ್ ದೀಪ ನಾರಾಯಣ ಹಾಗೂ ಸುದೀಪ್‌ಸಿಂಗ್ ಎಂಬುವವನನ್ನು ಪೊಲೀಸರು ಬಂಧಿಸಿದ್ದು, ಒಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಮಹಿಳಾ ರಕ್ಷಣಾ ದಳ ಈ ಕಾರ್ಯಾಚರಣೆ ಮಾಡಿತ್ತು.

ಆರೋಪಿಗಳು ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆ ಬಳಿ ಒಂದನೇ ಮಹಡಿಯ ಮನೆ ಬಾಡಿಗೆ ಪಡೆದುಕೊಂಡು ಸರ್ವಿಸ್ ಅಪಾರ್ಟಮೆಂಟ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಹೊರ ರಾಜ್ಯದಿಂದ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು, ಗಿರಾಕಿಗಳನ್ನು ಕರೆಯಿಸಿ ಅವರಿಂದ ಎರಡರಿಂದ ಮೂರು ಸಾವಿರ ರುಪಾಯಿ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದರು.

ಓಯೋ ಕಂಪೆನಿ ಹೆಸರು ಬಳಕೆ

ಓಯೋ ಕಂಪೆನಿ ಹೆಸರು ಬಳಕೆ

ಇನ್ನು ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳು ಹೋಟೆಲ್ ರೂಮ್ ಮತ್ತು ಸರ್ವಿಸ್ ಅಪಾರ್ಟಮೆಂಟ್ ಬುಕ್ ಮಾಡಿ ಕೊಡುವ ಸಂಸ್ಥೆಯಾದ ಓಯೋ ಹೆಸರಿನಲ್ಲಿ ಅಕ್ರಮ ದಂದೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಓಯೋ ಕಂಪೆನಿಗೂ ನೋಟಿಸ್ ನೀಡಿದ್ದಾರೆ.

ಕೋರಮಂಗಲದಲ್ಲೂ ಇದೇ ರೀತಿ

ಕೋರಮಂಗಲದಲ್ಲೂ ಇದೇ ರೀತಿ

ಇತ್ತೀಚೆಗೆ ಕೋರಮಂಗಲದ ಕೆಬಿಎಚ್ ಕಾಲೋನಿಯ ಜಾಕ್ ಸಲೂನ್ ಮತ್ತು ವೆಲ್‌ನೆಸ್ ಸ್ಪಾ ಮೇಲೆ ದಾಳಿ ನಡೆಸಿ ಸಿಸಿಬಿ ಪೊಲೀಸರು ಆರು ಯುವತಿಯರನ್ನು ರಕ್ಷಿಸಿದ್ದರು. ಪ್ರಕರಣದಲ್ಲಿ ಮೋನಾಲಿ ಘೋಷ್ (32) ಎಂಬವನನ್ನು ಬಂಧಿಸಲಾಗಿದ್ದು, ಸಿದ್ದಾರ್ಥ ಎಂಬುವ ನಾಪತ್ತೆಯಾಗಿದ್ದ. ಬಂಧಿತನಿಂದ ಒಂದು ಒಪ್ಪೋ ಮೊಬೈಲ್ ಹಾಗೂ ಐದು ಸಾವಿರ ರುಪಾಯಿ ನಗದನ್ನು ವಶಪಡಿಸಿಕೊಂಡಿದ್ದರು.

ಯುವತಿಯರಿಗೆ ಕೆಲಸದ ಆಮಿಷ

ಯುವತಿಯರಿಗೆ ಕೆಲಸದ ಆಮಿಷ

ಕೆಲಸದ ಆಮೀಷ ಒಡ್ಡಿ ಉತ್ತರ ಭಾರದತ ಯುವತಿಯರನ್ನು ಕರೆ ತಂದು ಸ್ಪಾ ಮತ್ತು ಸಲೂನ್ ಹೆಸರಿನಲ್ಲಿ ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇಂಟರನೆಟ್, ಮೊಬೈಲ್ ಆಪ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ, ಹಣ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿ ಹದ್ದಿನ ಕಣ್ಣು

ಸಿಸಿಬಿ ಹದ್ದಿನ ಕಣ್ಣು

ಬೆಂಗಳೂರು ನಗರದಲ್ಲಿ ಅಕ್ರಮ ದಂದೆಗಳ ಮೇಲೆ ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ ಕೆಲವರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬೇರೆ ಬೇರೆ ಮಾರ್ಗದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದಕ್ಕೆ ಇವೆರಡು ಪ್ರಕರಣ ಉದಾಹರಣೆಯಾಗಿವೆ. ಸಿಸಿಬಿ ದಾಳಿಗಳನ್ನು ಮುಂದುವರೆಸಿದೆ.

English summary
Bengaluru CCB Police Seized illegal Service Apartments In Hebbal Police station limits. 2 person arrested and 2 womens rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X