ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಹೆಸರಲ್ಲೂ ನಕಲಿ ಸಿಮ್ ಕಾರ್ಡ್ ತಗೊಂಡಿರಬಹುದು!

|
Google Oneindia Kannada News

ಬೆಂಗಳೂರು, ಜು. 15: ನಕಲಿ ಸಿಮ್ ಕಾರ್ಡ್ ಜಾಲವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. ಸಿಮ್ ಖರೀದಿಸಿದ ಗ್ರಾಹಕರ ದಾಖಲೆಯನ್ನು ಬಳಸಿಕೊಂಡು ಅದೇ ಹೆಸರಿನಲ್ಲಿ ಮತ್ತೆ ಸಿಮ್ ಕಾರ್ಡ್ ಗಳನ್ನು ಪಡೆದುಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಹನುಂತನಗರದ ಮೂರು ಅಂಗಡಿಗಳ ಮೇಲೆ ದಾಳಿ ಮಾಡಿ, ಮಾಗಡಿ ತಾಲೂಕಿನ ನಾಗರಾಜು, ಹನುಮಂತನಗರದ ರಮೇಶ್, ಎನ್ ಜಗದೀಶ್ ಮತ್ತು ರವಿಕುಮಾರ್ ಎಂಬುವರನ್ನು ಬಂಧಿಸಿದ್ದಾರೆ.[ಬೆಂಗಳೂರಿಗೂ ಕಾಲಿಟ್ಟಿತೆ ರಕ್ತ ಚಂದನ ಕಳ್ಳ ಸಾಗಣೆ?]

ccb

ಆರೋಪಿಗಳಿಂದ 58 ಸಾವಿರ ರೂ. ನಗದು 19 ಮೊಬೈಲ್, ಸ್ಕ್ಯಾನರ್ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮೊಬೈಲ್ ಕಂಪನಿ ಏಜೆಂಟರೊಂದಿಗೆ ಸಂಬಂಧ ಇರಿಸಿಕೊಂಡಿದ್ದು ತನಿಖೆ ವೇಳೆ ತಿಳಿದು ಬಂದಿದೆ.

ಬೆಂಗಳೂರಿನಲ್ಲಿ ನಡೆದ ಉಗ್ರ ಚಟುವಟಿಕೆ ಮತ್ತು ಕಾನೂನು ಬಾಹಿರ ವ್ಯವಹಾರಗಳಿಗೆ ದುಷ್ಕರ್ಮಿಗಳು ಇಂಥ ಸಿಮ್ ಬಳಕೆ ಮಾಡಿಕೊಂಡ ಶಂಕೆಯಿದೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಹನುಮಂತನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Bengaluru: CCB Police raided a duplicate Sim Card activation shop in Hanumanthangara PS limits, arrested 4 persons. Seized 2,310 activation sim cards, 19 Mobiles, 2 Scanners, 2 CPU,1 Printer and Rs. 58,850 cash recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X