• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಲ್ಲೇಶ್ವರದಲ್ಲಿ ಐಪಿಎಲ್ ಬೆಟ್ಟಿಂಗ್, 6 ಮಂದಿ ಬಂಧನ

|

ಬೆಂಗಳೂರು, ಸೆ. 23: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರ ಪಂದ್ಯದ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದ ಗುಂಪೊಂದನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಒಟ್ಟು ಆರು ಮಂದಿಯನ್ನು ಬಂಧಿಸಿದ್ದು, ಅವರ ಬಳಿ ಇದ್ದ 6 ಮೊಬೈಲ್ ಜಪ್ತಿ ಮಾಡಲಾಗಿದೆ. 6 ಲಕ್ಷ ರು ನಗದು ಕೂಡಾ ಸಿಕ್ಕಿದೆ.

ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಪ್ರತಿ ಓವರ್, ಪ್ರತಿ ಎಸೆತ, ಪ್ರತಿ ರನ್ ಮೇಲೆ ಬೆಟ್ ಕಟ್ಟಲಾಗುತ್ತಿದೆ. ಸ್ಟಾರ್ ಆಟಗಾರರ ಮೇಲೆ ಹೆಚ್ಚಿನ ಬೆಟ್ಟಿಂಗ್ ಇದೆ. ಅತಿ ಕಡಿಮೆ ಮೊತ್ತದಿಂದ ದೊಡ್ಡ ಮೊತ್ತದವರೆಗೂ ದಂಧೆ ನಡೆಸುತ್ತಿದ್ದರು. ಮೊಬೈಲ್ ಅಪ್ಲಿಕೇಷನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಹಣ ವ್ಯವಹಾರ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?ಐಪಿಎಲ್ 2020: ಬುಕ್ಕಿಗಳ ಪ್ರಕಾರ ಕಪ್ ಗೆಲ್ಲೋ ಫೇವರಿಟ್ ತಂಡ?

ಸೆ. 19ರಿಂದ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಆರಂಭವಾಗಿದೆ. ಭಾರತದಲ್ಲಿ ವಾರ್ಷಿಕ 10 ಲಕ್ಷ ಕೋಟಿ ರು ಮೊತ್ತದ ಬೆಟ್ಟಿಂಗ್ ನಡೆದರೆ ಅದರಲ್ಲಿ ಕ್ರಿಕೆಟ್ ನದ್ದೇ ಸಾವಿರಾರು ಕೋಟಿ ರು ಇರುತ್ತದೆ. ಬೆಂಗಳೂರು ಕೂಡಾ ಅಕ್ರಮ ಬೆಟ್ಟಿಂಗ್ ದಂಧೆಗೆ ಪ್ರಮುಖ ಅಡ್ಡಾ ಎನಿಸಿಕೊಂಡಿದೆ.

ಭಾರತದಲ್ಲಿ ಎಲ್ಲಾ ರೀತಿಯ ಬೆಟ್ಟಿಂಗ್ ನಿಷೇಧವಾಗಿದೆ. ಬೆಟ್ಟಿಂಗ್ ನಲ್ಲಿ ತೊಡಗಿರುವುದು ಕಂಡು ಬಂದರೆ ಗೂಂಡಾ ಕಾಯ್ದೆ, ಕೋಕಾ ಕಾಯ್ದೆಯಡಿಯಲ್ಲಿ ಬಂಧಿಸಿ ಜಾಮೀನು ರಹಿತ ಸೆಕ್ಷನ್ ಗಳಡಿಯಲ್ಲಿ ಕೇಸು ದಾಖಲಿಸಬಹುದಾಗಿದೆ.

ಐಪಿಎಲ್ ಮಹಾಸಮರ 2020 ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

English summary
Central Crime Branch police busted 2 cricket betting rackets related to ongoing IPL 2020. Six persons arrested cash worth Rs 6 Lakhs seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X