ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಉದ್ಯಮಿಗೆ ಕಾರ್ ಬಾನೆಟ್ ತೋರಿಸಿ 15 ಲಕ್ಷ ದೋಚಿದ!

|
Google Oneindia Kannada News

ಬೆಂಗಳೂರು, ಅಕ್ಟೋಬರ್. 15: ಬೆಂಗಳೂರಿನ ಪರಿಸ್ಥಿತಿ ನಿಜಕ್ಕೂ ಬಿಗಡಾಯಿಸಿದೆ. ಒಂದೆಡೆ ಮುಂಜಾನೆಯೇ ಮಹಿಳೆಯರನ್ನು ದೋಚುವ ಸರಗಳ್ಳರು, ಇನ್ನೊಂದೆಡೆ ಗಮನ ಬೇರೆಡೆ ಸೆಳೆದು ಹಣ ದೋಚುವ ಚೋರರು.

ಅಕ್ಟೋಬರ್ 14 ಎಂದು ಗಿರಿನಗರ ಸೀತಾ ಸರ್ಕಲ್ ಬಳಿ ಉದ್ಯಮಿಯೊಬ್ಬರಿಂದ 15 ಲಕ್ಷ ದೋಚಿದ್ದ ಪ್ರಕರಣದ ಜಾಡನ್ನು ಪೊಲೀಸರು ಹುಡುಕಲು ಯತ್ನ ಮಾಡುತ್ತಿರುವಾಗಲೇ ಮಲ್ಲೆಶ್ವರಂ ಬಳಿ ಉದ್ಯಮಿಯೊಬ್ಬರು 15 ಲಕ್ಷ ರು. ಕಳೆದುಕೊಂಡಿದ್ದಾರೆ.

bengaluru

ಬ್ಯಾಂಕ್ ನಲ್ಲಿ ಹಣ ಎಣಿಕೆ ಮಾಡುತ್ತಿದ್ದಾಗ ಮೈ ಮೇಲೆ ಶಾಯಿ ಬಿದ್ದಿದೆ ಎಂದು ಹೇಳಿ ಗಮನ ಬೇರೆಡೆಗೆ ಸೆಳೆಎದು ಹಣ ಲಪಟಾಯಿಸುವ, ಹಣ ಕೆಳಕ್ಕೆ ಬಿದ್ದಿದೆ ಎಂದು ಹೇಳಿ ಮರುಳು ಮಾಡುವ, ಅಡ್ರೆಸ್ ಕೇಳುವ ನೆಪದಲ್ಲಿ ಹಣ ದೋಚುವ ಸುದ್ದಿಯನ್ನು ಕಂಡಿದ್ದೇವೆ ಕೇಳಿದ್ದೇವೆ. ಅದಕ್ಕೆ ಕೆಲ ಹೊಸ ಸೇರ್ಪಡೆ ಮಾಡಿಕೊಳ್ಳಬಹುದು.

ಅದೆಲ್ಲ ಮುಗಿದು ಹೊಸ ತಂತ್ರಗಳನ್ನು ದುಷ್ಕರ್ಮಿಗಳು ಹುಡುಕಿಕೊಂಡಿದ್ದಾರೆ. ಕಾರ್ ಬಾನೆಟ್ ಮೇಲೆ ಆಯಿಲ್ ಲೀಕ್ ಆಗಿದೆ ಎಂದು ಹೇಳಿದ ದುಷ್ಕರ್ಮಿ ಉದ್ಯಮಿಯ ಗಮನವನ್ನು ಅತ್ತ ಕಡೆ ಹೋಗುವಂತೆ ಮಾಡಿದ್ದಾನೆ. ಈ ವೇಳೆ ಕಾರ್ ಒಳಗೆ ಇದ್ದ 15 ಲಕ್ಷ ರು. ಲಪಟಾಯಿಸಿಕೊಂಡು ಪರಾರಿಯಾಗಿದ್ದಾನೆ. ಬೆಂಗಳೂರಿನ ಮಲ್ಲೇಶ್ವರಂ ಬಳಿಕ ಕೆಫೆ ಕಾಫಿ ಡೇ ಬಳಿ ಗುರುವಾರ ಬೆಳಗ್ಗೆ ಪ್ರಕರಣ ನಡೆದಿದ್ದು ಉದ್ಯಮಿ ದೂರು ಸಲ್ಲಿಸಿದ್ದಾರೆ.

English summary
Bengaluru: A businessmen is robbed at Malleshwarm on 15 October Thursday morning. Total Worth of 15 lackh rupees stolen which is placed inside the car.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X