ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಒಂದೆರೆಡು ಮಳೆಗೆ ಈ ಅವಸ್ಥೆ, ಮಳೆಗಾಲ ಕಳೆಯೋದ್ಹೇಗೆ?

|
Google Oneindia Kannada News

ಬೆಂಗಳೂರು, ಮೇ 14: ರಾಜಧಾನಿಯದ್ದು ಎಂಥಾ ಅವಸ್ಥೆ ಸ್ವಾಮಿ, ಒಂದು ಮಳೆ ಬರುವ ಹಾಗಿಲ್ಲ ನೀರೆಲ್ಲಾ ನಿಂತಲ್ಲೇ ನಿಂತು ಬಿಡುತ್ತದೆ. ಇನ್ನು ಕರೆಂಟ್ ಬಗ್ಗೆ ಅಂತೂ ಮಾತಾಡೋ ಹಾಗೆ ಇಲ್ಲ. ಯಾವಾಗ ಬೆಸ್ಕಾಂಗೆ ಕರೆ ಮಾಡಿದ್ರೂ ಈಗ ಒಂದರ್ಧ ಗಂಟೇಲಿ ಬರುತ್ತೆ ಎಂದು ಹೇಳಿ 2 ತಾಸು ಆದ್ರೂ ಕರೆಂಟ್ ಪತ್ತೇನೆ ಇರೊಲ್ಲ.

ಇನ್ನೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ ಎಂದರೆ ಮಳೆಗಾಲ ನಿರ್ವಹಣೆ ಮಾಡುವುದಂತೂ ತುಂಬಾನೆ ಕಷ್ಟ. ಮಳೆಯ ನೀರು ಯಾವುದೂ ಚರಂಡಿ ನೀರು ಯಾವುದು ಎಂದು ಗುರುತು ಸಿಗುವುದಿಲ್ಲ ಎಲ್ಲವೂ ಮಿಶ್ರಣವಾಗಿ ರಸ್ತೆಯಲ್ಲಿ ತುಂಬಿಕೊಂಡಿದೆ.

ಬೆಂಗಳೂರಲ್ಲಿ ಗಾಳಿ ಸಹಿತ ಮಳೆ, ವಾಹನ ಸವಾರರೇ ಎಚ್ಚರಬೆಂಗಳೂರಲ್ಲಿ ಗಾಳಿ ಸಹಿತ ಮಳೆ, ವಾಹನ ಸವಾರರೇ ಎಚ್ಚರ

ಸೋಮವಾರ ನಗರದ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಗಾಳಿ ಸಮೇತ ಸುರಿದ ಧಾರಾಕಾರ ಮಳೆಗೆ ಬಿಟಿಂಎ ಲೇಔಟ್‌ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ನೀರು ನುಗ್ಗುವುದು ಹೊಸತೇನಲ್ಲ 2016ರ ಮಳೆಯಲ್ಲಿಯೂ ಬಿಟಿಎಂ ಲೇಔಟ್ ಸಂಪೂರ್ಣ ಜಲಾವೃತವಾಗಿತ್ತು.

Bengaluru BTM layout inundated after Monday rain

ಬಿಟಿಎಂ ಲೇಔಟ್‌ನ ಆರನೇ ಹಂತ 29ನೇ ಮುಖ್ಯರಸ್ತೆ, ಬಿಳೇಕಳ್ಳಿ ಮುಖ್ಯರಸ್ತೆ ಸೇರಿದಂತೆ ಅನೇಕ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಸುಮಾರು 2 ಅಡಿಗಳಷ್ಟು ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ಸಮಸ್ಯೆಗಳು ಹೊಸದಲ್ಲ ಆದರೆ ಅದಕ್ಕೆ ಶಾಶ್ವತ ಪರಿಹಾರವನ್ನು ಕೊಡಿಸುವಲ್ಲಿ ಬಿಬಿಎಂಪಿ ಸೋತಿದೆ ಅಷ್ಟೆ.

ಬಿಬಿಎಂಪಿಯಲ್ಲಿ ಮಳೆ ಹಾನಿ ನಿರ್ವಹಣೆಗೆ ಪ್ರತ್ಯೇಕ ತಂಡ ರಚನೆಬಿಬಿಎಂಪಿಯಲ್ಲಿ ಮಳೆ ಹಾನಿ ನಿರ್ವಹಣೆಗೆ ಪ್ರತ್ಯೇಕ ತಂಡ ರಚನೆ

ಕೋಡಿ ಚಿಕ್ಕನಹಳ್ಳಿಯಲ್ಲಿ ಸುರಿದ ಮಳೆಯಿಂದ ಅಂಗನವಾಡಿಯೊಂದು ಜಲಾವೃತಗೊಂಡಿದೆ. ಆಹಾರ ಪದಾರ್ಥಗಳೆಲ್ಲವೂ ನೀರು ಪಾಲಾಗಿದೆ.

English summary
Heavy rains of close to half an hour on Monday afternoon in Bengaluru saw the upscale neighbourhood of BTM Layout flooded with rainwater mixed with sewage. Water entered homes in some low lying areas while basements of apartment complexes saw water entering parked cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X