ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಬೃಂದಾವನ್ ಪ್ರಾಪರ್ಟೀಸ್ ಹೂಡಿಕೆದಾರರಿಗೆ ಮಾಲೀಕರ ಹೊಸ ಭರವಸೆ

|
Google Oneindia Kannada News

ಬೆಂಗಳೂರು, ಆಗಸ್ಟ್ 1: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಲಾಕ್‌ಡೌನ್‌ ಆರ್ಥಿಕ ಕ್ಷೇತ್ರಕ್ಕೆ ಭಾರಿ ಪೆಟ್ಟು ಕೊಟ್ಟಿದೆ. ರಿಯಲ್ ಎಸ್ಟೇಟ್ ಉದ್ಯಮ ಕೂಡ ಇದರಿಂದ ಹೊರತಾಗಿಲ್ಲ. ಈ ನಿಟ್ಟಿನಲ್ಲಿ ಇತ್ತೀಚಿಗೆ ಸುದ್ದಿಯಾಗಿದ್ದ ಬೃಂದಾವನ್ ಪ್ರಾಪರ್ಟಿಸ್ ಮಾಲೀಕರು ತಮ್ಮ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದಾರೆ.
"ಕಳೆದ ಎರಡು ವರ್ಷಗಳ ಆರ್ಥಿಕ ಹಿಂಜರಿತದಿಂದಾಗಿ ನಮ್ಮ ಮಾರುಕಟ್ಟೆ ಮತ್ತು ಆರ್ಥಿಕತೆಯ ಸರಪಳಿ ಹಳಿ ತಪ್ಪಿದೆ. ಈ ಹಳಿತಪ್ಪಿರುವ ಹಣದ ಮತ್ತು ಮಾರುಕಟ್ಟೆಯ ಸರಪಳಿ ಇನ್ನೇನು ಕೆಲವೇ ದಿನಗಳಲ್ಲಿ ಸರಿಹೋಗಲಿದೆ. ಯಾವುದೇ ಅನ್ಯಾಯವಿಲ್ಲದ ರೀತಿಯಲ್ಲಿ ಎಲ್ಲಾ ಹೂಡಿಕೆದಾರರಿಗೂ ಸೈಟುಗಳನ್ನು / ಅಥವಾ ಹಣವನ್ನು ಹಿಂದಿರುಗಿಸಲಿದ್ದೇವೆ," ಎಂದು ಬೃಂದಾವನ್ ಪ್ರಾಪರ್ಟೀಸ್ ಸಂಸ್ಥೆಯ ಮಾಲೀಕ ದಿನೇಶ್‌ ಗೌಡ ಸ್ಪಷ್ಟನೆ ನೀಡಿದ್ದಾರೆ.

ಬೃಂದಾವನ್ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಿದವರಿಗೆ ಮಹಾ ಮೋಸಬೃಂದಾವನ್ ಪ್ರಾಪರ್ಟಿಯಲ್ಲಿ ಹೂಡಿಕೆ ಮಾಡಿದವರಿಗೆ ಮಹಾ ಮೋಸ

ಬೆಂಗಳೂರು ಹೊರ ವಲಯದಲ್ಲಿ ಅತಿಕಡಿಮೆ ಬೆಲೆಗೆ ನಿವೇಶನ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಬೃಂದಾವನ ಪ್ರಾಪರ್ಟೀಸ್ ಸಾವಿರಾರು ಜನರಿಗೆ ಉಂಡೆ ನಾಮ ಹಾಕಿರುವ ಆರೋಪ ಕೇಳಿ ಬಂದಿತ್ತು. ರಾಜಾಜಿನಗರದಲ್ಲಿ ತೆರೆದಿದ್ದ ಕಚೇರಿಯನ್ನು ಬಂದ್ ಮಾಡಿದ್ದು, ಹಣ ಕಳೆದುಕೊಂಡ ಸಾವಿರಾರು ಜನರು ಕಳೆದ ಜುಲೈ 29ರಂದು ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.

ರಾಜಾಜಿನಗರದಲ್ಲಿ ಕಾರ್ಪೋರೇಟ್ ಮಾದರಿ ಕಚೇರಿ ತೆರೆದಿದ್ದ ಬೃಂದವನ್ ಪ್ರಾಪರ್ಟಿ ಕೇವಲ ಐದು ಲಕ್ಷ, ಆರು ಲಕ್ಷ ರೂಪಾಯಿಗೆ ಬೆಂಗಳೂರು ವಲಯದಲ್ಲಿನಿವೇಶನ ನೀಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿತ್ತು ಸುಮಾರು ಐದು ವರ್ಷದಿಂದ ಬೃಂದಾವನ್ ಪ್ರಾಪರ್ಟಿ ನಿವೇಶನ ಕೊಡುವ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆ ಕಂಪನಿ ಮಾಲೀಕನನ್ನು ಬಂಧಿಸುವಂತೆ ಕೂಗು ಕೇಳಿ ಬರುತ್ತಿರುವುದರ ಮಧ್ಯೆ ಗ್ರಾಹಕರಿಗೆ ವಂಚಿಸುವುದಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ. ಈ ಕುರಿತು ಬೃಂದಾವನ್ ಪ್ರಾಪರ್ಟೀಸ್ ಕಂಪನಿಯ ಮಾಲೀಕ ದಿನೇಶ್ ಗೌಡ ನೀಡಿರುವ ಸ್ಪಷ್ಟನೆಯ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

Bengaluru Brindavan Properties Cheating Case; Owner Dinesh Gowda Clarification

ಕೊರೊನಾವೈರಸ್ ಸಂಕಷ್ಟದಿಂದ ಹೈರಾಣು:
ಪ್ರಪಂಚದ ಎಲ್ಲಾ ಜನರು ಕಳೆದ ಎರಡು ವರ್ಷಗಳಿಂದ ವಿಶ್ವದಲ್ಲಿ ತಾಂಡವವಾಡುತ್ತಿರುವ ಕೊರೊನಾವೈರಸ್ ಮಹಾಮಾರಿಯಿಂದ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಗೀಡಾಗಿದ್ದಾರೆ. ಇದಕ್ಕೆ ನಾವು ಕೂಡಾ ಹೊರತಾಗಿಲ್ಲ, ಹಾಗೆಯೇ ಬೇರೆ ಎಲ್ಲಾ ಡೆವಲಪರ್‌ಗಳು ಕೂಡಾ ಸಂಕಷ್ಟದಲ್ಲಿದ್ದಾರೆ. ಕಳೆದೊಂದು ದಶಕದಿಂದ ಬೃಂದಾವನ್ ಪ್ರಾಪರ್ಟೀಸ್ ಸಂಸ್ಥೆಯ ವತಿಯಿಂದ ನೂರಾರು ಕುಟುಂಬಗಳ ಕನಸನ್ನು ನನಸಾಗಿಸುವ ಕಾರ್ಯವನ್ನು ಮಾಡಿದ್ದೇವೆ. ಆದರೆ ಕೊರೊನಾವೈರಸ್ ಮಹಾಮಾರಿಯ ಹೊಡೆತದ ಪರಿಣಾಮ ಭೂ ಪರಿವರ್ತನೆ ಸರಿಯಾದ ಸಮಯದಲ್ಲಿ ಆಗದೆ ಕೆಲವಷ್ಟು ಹೂಡಿಕೆದಾರರಿಗೆ ಸರಿಯಾದ ಸಮಯದಲ್ಲಿ ಸೈಟ್‌ಗಳನ್ನು ನೀಡಲು ಸಾಧ್ಯವಾಗಿಲ್ಲ.

Bengaluru Brindavan Properties Cheating Case; Owner Dinesh Gowda Clarification

ಯಾವುದೇ ರೀತಿ ವಂಚನೆ ಮಾಡಿಲ್ಲ:
ನಮ್ಮ ಸಂಸ್ಥೇಯಲ್ಲಿ ಯಾವುದೇ ಒಬ್ಬ ಹೂಡಿಕೆದಾರರಿಗೂ ಕೂಡಾ ವಂಚನೆ ಮಾಡಿಲ್ಲ. ಹೂಡಿಕೆದಾರರು ಮೊದಮೊದಲು ನಮ್ಮ ಕಚೇರಿಗೆ ಬಂದಂತಹ ಸಂಧರ್ಭದಲ್ಲಿ ಅವರಿಗೆ ನಮ್ಮ ಸಂಸ್ಥೆಯ ಹಣಕಾಸು ಪರಿಸ್ಥಿತಿ ಹಾಗೂ ಪ್ರಸ್ತುತ ಕೊರೊನಾದಿಂದ ಆಗಿರುವಂತಹ ಸಮಸ್ಯೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ್ದೇವೆ. ಆದರೆ ಕೆಲವು ಪಟ್ಟಭಧ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದಾಗಿ ಕೆಲವೊಬ್ಬ ಹೂಡಿಕೆದಾರರು ತಮ್ಮ ಹಣವನ್ನು ವಾಪಾಸ್ ನೀಡುವಂತೆ ನಮಗೆ ಒತ್ತಾಯಿಸಲು ಪ್ರಾರಂಭಿಸಿದರು.

ಹಣ ಮತ್ತು ಮಾರುಕಟ್ಟೆಯ ಸರಪಳಿ:
ಒಂದು ನೂತನ ನಿವೇಶನ ಪ್ರಾಜೆಕ್ಟ್‌ ಒಂದನ್ನು ಘೋಷಣೆ ಮಾಡಿದ ಹಲವಾರು ರೀತಿಯ ಸರಪಳಿಯಂತಹ ವ್ಯವಸ್ಥೆಗಳು ನಡೆಯಬೇಕಾಗುತ್ತದೆ. ಸರಪಳಿಯಂತಹ ಹಂತಗಳ ಮೂಲಕ ವ್ಯವಸ್ಥಿತವಾಗಿ ನಿವೇಶನಗಳ ರಚನೆಗೆ ಅಗತ್ಯವಿರುವ ಜಮೀನು ಖರೀದಿ - ಮಾರುಕಟ್ಟೆ - ಭೂ ಪರಿವರ್ತನೆ - ನಿವೇಶನಗಳ ಅಭಿವೃದ್ದಿ - ನಿವೇಶನಗಳನ್ನು ಕೊಂಡುಕೊಳ್ಳುವಂತೆ ಗ್ರಾಹಕರನ್ನು ತಲುಪಲು ಜಾಹೀರಾತು ಹೀಗೆ ಹತ್ತು ಹಲವು ರೀತಿಯ ಹಂತಗಳು ಸರಪಳಿಯಂತೆ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಒಂದೇ ಒಂದು ಹಂತದ ಸರಪಳಿಯ ಕೊಂಡಿ ಬಿಚ್ಚಿಕೊಂಡಲ್ಲಿ ಬೇರೆಲ್ಲಾ ಹಂತಗಳಿಗೂ ಹೊಡೆತ ಬಿದ್ದೇ ಬಿಳುತ್ತದೆ.

ಈಗಿನ ಪರಿಸ್ಥಿತಿ:
ಕೊರೊನಾವೈರಸ್ ನಂತರ ಪರಿಸ್ಥಿತಿ ತಿಳಿಯಾಗುತ್ತಿದೆ. ಆರ್ಥಿಕ ಚಟುವಟಿಕೆಗಳು ನಿಧಾನಕ್ಕೆ ಗರಿಗೆದರುತ್ತಿವೆ. ಅದೇ ರೀತಿ ರಿಯಲ್‌ ಎಸ್ಟೇಟ್‌ ಕೂಡಾ ಚೇತರಿಕೆ ಕಾಣುತ್ತಿದೆ. ಒಮ್ಮೆಲೆ ಎಲ್ಲಾ ಹೂಡಿಕೆದಾರರು ಹಣವನ್ನು ಹಿಂದಕ್ಕೆ ಕೇಳಿದರೆ ಯಾವುದೇ ಹೂಡಿಕೆ ಸಂಸ್ಥೆ ಅದನ್ನು ಪೂರೈಸಲು ಸಾಧ್ಯವಿಲ್ಲ. ಸಂಸ್ಥೆ ಹಣವನ್ನು ಯಾವುದೇ ಕೆಟ್ಟ ವಿಷಯಗಳಲ್ಲಿ ಹೂಡಿಕೆ ಮಾಡಿಲ್ಲ. ಅದನ್ನು ಭೂಮಿಯ ಮೇಲೆ ಹೂಡಿಕೆ ಮಾಡಿದ್ದು, ಅವುಗಳ ಭೂ ಪರಿವರ್ತನೆ ಹಾಗೂ ಅಭಿವೃದ್ದಿಯ ನಂತರವಷ್ಟೇ ನಾವು ಅದಕ್ಕೆ ಸರಿಯಾದ ಬೆಲೆಯನ್ನು ಪಡೆಯಲು ಸಾಧ್ಯ. ಒಮ್ಮೆ ನಾವುಗಳು ಸಮಾಧಾನದಿಂದ ಇದ್ದಲ್ಲಿ ಅದನ್ನು ಸಾಧಿಸುವ ಸಮಯ ದೂರವಿಲ್ಲ.

sir embed link for brindavan properties story

ನಮ್ಮ ಸಂಸ್ಥೆಯ ಭರವಸೆ:
ಈ ಸಂಸ್ಥೆಯ ಮಾಲೀಕನಾದ ನಾನು ಎಲ್ಲ ಹೂಡಿಕೆದಾರರು ಹಾಗೂ ಸಾಮಾನ್ಯ ಜನರಲ್ಲಿ ಮಾಡುವ ವಿನಮ್ರ ಮನವಿ ಏನೆಂದರೆ, ಕೊರೊನಾವೈರಸ್ ಮಹಾಮಾರಿಯ ಹೊಡೆತಕ್ಕೆ ನಾವೆಲ್ಲರೂ ಸಿಲುಕಿಕೊಂಡಿದ್ದೇವೆ. ಇದಕ್ಕೆ ನೀವು ಹೊರತಾಗಿಲ್ಲ. ನೀವು ಹೂಡಿಕೆ ಮಾಡಿರುವ ಹಣವನ್ನು ನಾನು ಹಿಂದೆ ನೀಡದೇ ಎಲ್ಲಿಯೂ ಹೋಗುವುದಿಲ್ಲ.
* ಭೂ ಪರಿವರ್ತನೆಗೆ ಈಗಾಗಲೇ ಅರ್ಜಿಯನ್ನು ಸಲ್ಲಿಸಲಾಗಿದೆ
* ಹಲವಾರು ಜನರಿಗೆ ಸೈಟುಗಳ ರಿಜಿಸ್ಟ್ರೇಶನ್ ಕೂಡಾ ಮಾಡಿಕೊಡಲಾಗಿದೆ
* ಹಿಂದೆ ಹಲವಾರು ಜನರು ಸೈಟುಗಳು ಬೇಡ ಎಂದವರಿಗೂ ಹಣವನ್ನು ಹಿಂದಿರುಗಿಸಿದ್ದೇವೆ
* ಭೂ ಪರಿವರ್ತನೆ ಹಾಗೂ ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ನಾವು ಬಹಳಷ್ಟು ಹೊಡೆತ ತಿಂದಿದ್ದೇವೆ
* ನೀವು ನೀಡಿರುವ ಹಣ ಭೂಮಿಯ ರೂಪದಲ್ಲಿದೆ

Recommended Video

ಬಿಜೆಪಿ ಪಕ್ಷ ಸೇರೋಕೆ ರೆಡಿಯಾದ ಎನ್ ಮಹೇಶ್!! | oneindia Kannada

"ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಭೂ ಪರಿವರ್ತನೆ ಸರಿಯಾದ ಸಮಯದಲ್ಲಿ ಆಗದೆ ಹೊಡೆತ ಅನುಭವಿಸಿರುವ ನಾವು ಸ್ವಲ್ಪಮಟ್ಟಿನ ಚೇತರಿಕೆ ಕಂಡುಕೊಳ್ಳುವವರೆಗೂ ನೀವು ನಮ್ಮ ಜೊತೆಗೆ ನಿಲ್ಲಿ ಎನ್ನುವುದು ನಮ್ಮ ಕಳಕಳಿಯ ಮನವಿಯಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಈ ಬಿಕ್ಕಟ್ಟನಿಂದ ಹೊರಬರುವ ಸಾಮೂಹಿಕ ಪ್ರಯತ್ನ ಮಾಡೋಣ. ಇದು ನನ್ನ ಕಳಕಳಿಯ ಮನವಿಯಾಗಿದ್ದು, ನೀವೆಲ್ಲರೂ ಸಹಕರಿಸಲಿದ್ದೀರಿ ಎನ್ನುವುದು ನಮ್ಮ ಭರವಸೆ ಆಗಿದೆ," ಎಂದು ಬೃಂದಾವನ್ ಪ್ರಾಪರ್ಟೀಸ್ ಮಾಲೀಕ ದಿನೇಶ್ ಗೌಡ ಹೇಳಿದ್ದಾರೆ.

English summary
Bengaluru Brindavan Properties Cheating Case; Owner Dinesh Gowda Clarification and Good News for Customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X