ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಲ್ಲಿ ಫೆ.26ರವರೆಗೆ ಪ್ರತಿನಿತ್ಯ 8 ಗಂಟೆ ವಿದ್ಯುತ್ ವ್ಯತ್ಯಯ

|
Google Oneindia Kannada News

ಬೆಂಗಳೂರು,ಫೆಬ್ರವರಿ 23: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಫೆ.26ರವರೆಗೆ ನಿತ್ಯ 8 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕೇಬಲ್ ಹಾಕುವ ಕೆಲಸ ನಡೆಯುತ್ತಿದ್ದು, ಬೆಳಗ್ಗೆ 10.30ರಿಂದ ಸಂಜೆ 6.30ರವರೆಗೆ ಎಂಟು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತಿಳಿಸಿದೆ.

ವಿದ್ಯುತ್ ವಿತರಣಾ ವಲಯಕ್ಕೆ 3,05,984 ಕೋಟಿ ರೂ ನೀಡಿದ ಬಜೆಟ್ವಿದ್ಯುತ್ ವಿತರಣಾ ವಲಯಕ್ಕೆ 3,05,984 ಕೋಟಿ ರೂ ನೀಡಿದ ಬಜೆಟ್

ಬಿಟಿಎಂ ಲೇಔಟ್, ಜೆಪಿ ನಗರ, ಹಳೆ ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಬೆಸ್ಕಾಂ ಸಂಸ್ಥೆಯ ಮೂಲಗಳು ತಿಳಿಸಿವೆ.

Bengaluru Braces For Up To 8-Hour Power Cuts Till 26 February In Many Areas

ಹಾಗೆಯೇ, ಜಯದೇವ, ಸೇಂಟ್ ಜಾನ್ಸ್, ಆರ್ ಬಿಐ ಮತ್ತು ಸಾರಕ್ಕಿ ಸಬ್ ಸ್ಟೇಷನ್ʼಗಳಲ್ಲಿ ನಿಗದಿತ ಅವಧಿಯಲ್ಲಿ 8 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಫೆಬ್ರವರಿ 23
* EWS ಲೇಔಟ್ ನ ಪ್ರದೇಶಗಳು
* ಬಿಟಿಎಂ ಲೇಔಟ್ ನ ಪ್ರದೇಶಗಳು

ಫೆಬ್ರವರಿ 24
* ಲೇಕ್ ರೋಡ್
* ಮಾದೇನ ನಗರ
* ಬಿಟಿಎಂ ಲೇಔಟ್ ನ ಪ್ರದೇಶಗಳು

ಫೆಬ್ರವರಿ 25
* ಜೆ.ಪಿ.ನಗರ
* ದಾಲ್ಮಿಯಾ ಸಿಗ್ನಲ್ ಮತ್ತು ಇತರ ಪ್ರದೇಶಗಳು
* ಡಾಲರ್ಸ್ ಲೇಔಟ್
* 100 ಅಡಿ ರಿಂಗ್ ರಸ್ತೆ
* ತಿಪ್ಪಸಂದ್ರ .
* ಚೆನ್ನಮ್ಮ ಉದ್ಯಾನ .
* ಖೋಡೇಸ್ ಸಬ್ ಸ್ಟೇಷನ್ ಅಡಿಯಲ್ಲಿ ಬರುವ ಪ್ರದೇಶಗಳು

Recommended Video

ಕುತೂಹಲ ಕೆರಳಿಸಿದ ಪಾಲಿಕೆ ಚುನಾವಣೆ-ಮೈತ್ರಿ ಮುಂದುವರೆಸುವಂತೆ ಹೆಚ್ ಡಿಕೆಗೆ ಡಿಕೆಶಿ ಕರೆ | Oneindia Kannada

ಫೆಬ್ರವರಿ 26
* ಬಿಟಿಎಂ ಲೇಔಟ್ ನ ಪ್ರದೇಶಗಳು
* ಜೆ.ಪಿ.ನಗರ ವಿ.
* ವಿನಾಯಕನಗರ
ಇದರಲ್ಲಿ ಹಳೇ ವಿಮಾನ ನಿಲ್ದಾಣ ರಸ್ತೆ, ಮಾರತಹಳ್ಳಿ, ಆನಂದನಗರ, ಕೆ.ಬಿ.ಹಳ್ಳಿ, ಕೃಷ್ಣಪ್ಪ ಗಾರ್ಡನ್, ಎಕೆ ಕಾಲೋನಿ, ಹೊರ ವರ್ತುಲ ರಸ್ತೆ ಸೇರಿವೆ.ಕಾಡುಬೀಸನಹಳ್ಳಿ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಫೆ.20ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ 7 ಗಂಟೆಗಳ ಕಾಲ ವಿದ್ಯುತ್ ಕಡಿತ ಮಾಡಲಾಗಿದೆ ಎನ್ನಲಾಗುತ್ತಿದೆ.

English summary
Cable-laying related work is about to disrupt power supply in many areas of Bengaluru for eight hours during the day from 10:30 am to 6:30 pm, according to Bangalore Electricity Supply Company Limited (BESCOM). Power supply will be cut off for 8 hours during the specified period in Jayadeva, St John's, RBI and Sarakki substations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X