ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಇಇ: ಬೆಂಗಳೂರು ವಿದ್ಯಾರ್ಥಿಗೆ 2ನೇ ರ‍್ಯಾಂಕ್, ರಾಜ್ಯಕ್ಕೆ ಟಾಪರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಜೆಇಇ-2019ರ ಫಲಿತಾಂಶವನ್ನು ಸೋಮವಾರ ಸಂಜೆ ಪ್ರಕಟಿಸಿದ್ದು ಬೆಂಗಳೂರು ವಿದ್ಯಾರ್ಥಿ ಕೆವಿನ್ ಮಾರ್ಟಿನ್ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.

ನಮ್ಮ ಮೆಟ್ರೋದಿಂದ ಸಮಯ ಉಳಿಸಿ ಅಂಕ ಗಳಿಸಿದ ಜೆಇಇ ಟಾಪರ್ ನಮ್ಮ ಮೆಟ್ರೋದಿಂದ ಸಮಯ ಉಳಿಸಿ ಅಂಕ ಗಳಿಸಿದ ಜೆಇಇ ಟಾಪರ್

ಅಷ್ಟೇ ಅಲ್ಲದೆ ಕೆವಿನ್ ಮಾರ್ಟಿನ್ ಕರ್ನಾಟಕಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕೆವಿನ್ ಅವರು ಜಯನಗರದ ನೆಹರು ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದು ಅಲಾಯನ್ಸ್‌ನಲ್ಲಿ ತರಬೇತಿ ಪಡೆದಿದ್ದರು.

ಬೆಂಗಳೂರಿನ ಮಾರ್ಟಿನ್ ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಬೆಂಗಳೂರಿನ ಮಾರ್ಟಿನ್ ಜೆಇಇ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ

ಕೆವಿನ್ ಇಂದಿರಾನಗರದ ನಿವಾಸಿಯಾಗಿದ್ದಾರೆ, ಜನವರಿಯಲ್ಲಿ ಜೆಇಇ ಮೈನ್ 1 ನಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದ್ದರು, ಈಗ ಎರಡನೇ ಪ್ರಯತ್ನದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

Bengaluru boy stands 2nd in JEE Main results 2019

ಕರ್ನಾಟಕ ಕಾಮನ್ ಎಂಟ್ರೆನ್ಸ್ ಟೆಸ್ಟ್ (ಕೆ-ಸೆಟ್‌)ನಲ್ಲೂ ಇವರು ಅಭ್ಯರ್ಥಿಯಾಗಿದ್ದಾರೆ. ಅಷ್ಟೇ ಅಲ್ಲದೆ ಸಿಇಟಿ ಪರೀಕ್ಷೆಯನ್ನೂ ಕೂಡ ಬರೆದಿದ್ದಾರೆ. ಜೆಇಇ-2019ರಲ್ಲಿ 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಜೆ ಇ ಇ ಪರೀಕ್ಷೆಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರ ಮತ್ತು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿ ಬಿ ಎಸ್ ಇ ), ನವದೆಹಲಿ, ಸಹಯೋಗದೊಂದಿಗೆ ಆಯೋಜಿಸುವ ಜಂಟಿ ಪ್ರವೇಶ ಪರೀಕ್ಷೆ.

ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಜೆ ಇ ಇ ಪರೀಕ್ಷೆಗಳು ಸಹಕಾರಿಯಾಗಿವೆ.

ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರ ಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ತೆಗೆದುಕೊಳ್ಳಬೇಕಾದಂಥವು. ಐ.ಐ.ಟಿ., ಎನ್.ಐ.ಟಿ., ಐ.ಎಸ್.ಇ.ಆರ್., ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕು. ಜೆ.ಇ.ಇ. ಆಯ್ಕೆ ಪರೀಕ್ಷೆಗಳು ತಮ್ಮದೇ ಆದ ಪಠ್ಯವನ್ನು ಆಧರಿಸಿರುತ್ತವೆ.

English summary
Bengaluru Boy secured All India Rank 2 the JEE main result which was announced late evening on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X