ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಜಾಗೃತ್‌ ಕರಾಟೆಯಲ್ಲಿ ಜಗತ್ತಿಗೇ ಎರಡನೇ ರ್‍ಯಾಂಕ್

By Nayana
|
Google Oneindia Kannada News

ಬೆಂಗಳೂರು, ಜೂನ್ 7: ಬೆಂಗಳೂರಿನ ಬಾಲ ಪ್ರತಿಭೆ ಎಂ.ಪಿ.ಜಾಗೃತ್ ವಿಶ್ವದ ನಂ.2 ಕರಾಟೆ ಪಟುವಾಗಿ ಹೊರಹೊಮ್ಮಿದ್ದಾನೆ. ಜಾಗೃತ್ ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಕರಾಟೆ 1 ಯೂತ್ ಲೀಗ್ 14 ವರ್ಷಗಳಿಗಿಂತ ಕಿರಿಯರ ಪುರುಷರ ಕತಾ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾನೆ.

ಈ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಮೂಲಕ ಜಾಗೃತ್ ವಿಶ್ವದಲ್ಲಿ ನಂ.2 ಸ್ಥಾನ ಪಡೆದಿದ್ದಾನೆ. ಈಗ ಜಾಗೃತ್ 74 ದೇಶಗಳ 1,870 ಅಭ್ಯರ್ಥಿಗಳು ಭಾಗವಹಿಸಿದ್ದು ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಭಾರತೀಯನೆಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾನೆ.

ಜಾಗೃತ್ ಹಲವು ಜಾಗತಿಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾನೆ. ಕಳೆದ ವರ್ಷ ಜಾಗೃತ್ ಕ್ರೊಯೇಷಿಯಾದ ಉಮಾಗ್‍ನಲ್ಲಿ ನಡೆದ 10ನೇ ವರ್ಲ್ಡ್ ಕರಾಟೆ ಯೂಥ್ ಕಪ್-2017ರಲ್ಲಿ ಚಿನ್ನದ ಪದಕ(ಕತಾ)ಗೆದ್ದಿದ್ದಾನೆ. ಅಲ್ಲದೆ ಅಲ್ಲಿಯೇ ನಡೆದ 10ನೇ ವರ್ಲ್ಡ್ ಕರಾಟೆ ಯೂಥ್ ಕಪ್-2017ರಲ್ಲಿ ಕುಮಿತೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ; ಈ ಎರಡೂ ಪದಕಗಳನ್ನು ಗೆಲ್ಲುವ ಮೂಲಕ ಈ ಎರಡೂ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಆಟಗಾರ ಎನಿಸಿದ್ದಾನೆ.

Bengaluru boy Jagruth world No.2 in Karate ranking

ಜಾಗೃತ್ ಮಾತನಾಡಿ, ವಿಶ್ವದಲ್ಲಿ ನಂ.2ನೇ ಸ್ಥಾನದಲ್ಲಿರುವುದು ನನಗೆ ಬಹಳ ಸಂತೋಷ ತಂದಿದೆ. ಆದರೆ ಒಲಂಪಿಕ್ಸ್‌ನಲ್ಲಿ ಭಾಗವಹಿಸಿ ನನ್ನ ದೇಶಕ್ಕೆ ಪದಕ ಗೆದ್ದು ತರುವುದು ನನ್ನ ಕನಸು. ಭಾರತದಲ್ಲಿ ಅಷ್ಟು ಮಾನ್ಯತೆ ಪಡೆಯದ ಈ ಮಾರ್ಷಲ್ ಆರ್ಟ್ಸ್ ಅನ್ನು ಭಾರತದಲ್ಲಿ ಜನಪ್ರಿಯಗೊಳಿಸಲು ಬಯಸಿದ್ದೇನೆ' ಎಂದರು.

ಜಾಗೃತ್ ತಂದೆ ಝೆನ್ ಸ್ಪೋಟ್ರ್ಸ್ ಅಂಡ್ ಫಿಟ್‍ನೆಸ್‌ ಮಾಸ್ಟರ್ ಟ್ರೈನರ್ ಮತ್ತು ಅಂತಾರಾಷ್ಟ್ರೀಯ ಕರಾಟೆ ಗೋಲ್ಡ್ ಮೆಡಲಿಸ್ಟ್ ಶ್ರೀ ಎಂ.ಜಿ. ಪ್ರಸಾದ್ ಅವರಿಗೆ ಈ ಪ್ರಯಾಣದಲ್ಲಿ ಉತ್ತೇಜನಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿದರು.

Bengaluru boy Jagruth world No.2 in Karate ranking

ಎಂ.ಪಿ.ಜಾಗೃತ್ ಅಸಂಖ್ಯ ಸರಣಿ ಪ್ರಶಸ್ತಿಗಳನ್ನು ಗೆದ್ದಿದ್ದು ಮಕ್ಕಳಲ್ಲಿ ಕರಾಟೆಯ ಹೊಸ ಭರವಸೆಯಾಗಿದ್ದಾನೆ. ಜಾಗೃತ್ ತನ್ನ ಕರಾಟೆಯ ಆಸಕ್ತಿ ಕರಾಟೆ ಆಧರಿತ ಚಿತ್ರಗಳಿಂದ ಮೂಡಿಬಂದಿತು ಎನ್ನುತ್ತಾನೆ. ಇಲ್ಲಿಯವರೆಗೂ ಈ ಕ್ಷೇತ್ರದಲ್ಲಿ ಅಸಂಖ್ಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾನೆ.

English summary
Bengaluru boy MP Jagruth secures world no.2 ranking in under 14 category which was held in Sofia of Bulgaria recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X