ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್ ಲಭ್ಯ: ದರ ತುಸು ಹೆಚ್ಚಳ

|
Google Oneindia Kannada News

ಬೆಂಗಳೂರು, ಮೇ 26: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಟಿಕೆಟ್ ವ್ಯವಸ್ಥೆ ಪುನರಾರಂಭಿಸಿದೆ.

ಕಳೆದ ಎರಡು ತಿಂಗಳಿನಿಂದ ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದ ಕಾರಣ ಬಸ್‌ಗಳ ಕಾರ್ಯಾಚರಣೆ ನಿಂತಿತ್ತು. ಇದೀಗ ಒಂದು ವಾರದಿಂದ ಬಸ್ ಸಂಚಾರ ಆರಂಭಗೊಂಡಿತ್ತು.

ಆದರೆ ದಿನದ ಬಸ್ ಪಾಸ್ ಅಥವಾ ವಾರದ ಬಸ್‌ಪಾಸ್‌ಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಸ್ವಲ್ಪ ದೂರದ ಪ್ರಯಾಣಕ್ಕೂ 70 ರೂ.ಗಳ ಪಾಸ್ ಪಡೆಯಬೇಕೆ ಎಂದು ಪ್ರಯಾಣಿಕರು ಮೂಗು ಮುರಿದಿದ್ದರು.

ಜೊತೆಗೆ ಬಸ್ ಹತ್ತಲು ಯಾರೂ ಮನಸ್ಸು ಮಾಡುತ್ತಿರಲಿಲ್ಲ. ಹೀಗಾಗಿ ಇಂದಿನಿಂದ ಟಿಕೆಟ್ ನೀಡಲು ಬಿಎಂಟಿಸಿ ನಿರ್ಧರಿಸಿದೆ. ಟಿಕೆಟ್ ದರದಲ್ಲಿ ಕೊಂಚ ಬದಲಾವಣೆ ಮಾಡಿದೆ.

ದಿನದ ಪಾಸ್ ದರ ತಗ್ಗಿಸಲು ಬಿಎಂಟಿಸಿ ಚಿಂತನೆ: ಟಿಕೆಟ್ ಆರಂಭ ಯಾವಾಗ? ದಿನದ ಪಾಸ್ ದರ ತಗ್ಗಿಸಲು ಬಿಎಂಟಿಸಿ ಚಿಂತನೆ: ಟಿಕೆಟ್ ಆರಂಭ ಯಾವಾಗ?

ಈಗಿದ್ದ 17 ರೂ. ಟಿಕೆಟ್ ದರವನ್ನು 20 ರೂ, 19 ರೂ ಬದಲು 20 ರೂ. ಮೊದಲ ಸ್ಟೇಜ್‌ಗೆ 5 ರೂ ಬದಲು 10 ರೂ ಈ ರೀತಿ ಟಿಕೆಟ್ ದರ ನಿಗದಿ ಮಾಡಿದೆ. ಚಿಲ್ಲರೆ ಸಮಸ್ಯೆ ದೂರಪಡಿಸಲು ಈ ನಿರ್ಧಾರ ಕೈಗೊಂಡಿದೆ. ಆದರೆ ದಿನದ ಬಸ್‌ ಪಾಸಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಟಿಕೆಟ್ ಪಡೆದು ಬಸ್‌ನಲ್ಲಿ ಸಂಚಾರ

ಟಿಕೆಟ್ ಪಡೆದು ಬಸ್‌ನಲ್ಲಿ ಸಂಚಾರ

ಈಗಾಗಲೇ ಬಿಎಂಟಿಸಿ ಸ್‌ಗಳ ಓಡಾಟ ಆರಂಭವಾಗಿದ್ದು, ಪಾಸ್ ಇದ್ದವರಿಗಷ್ಟೇ ಅಲ್ಲ, ಟಿಕೆಟ್ ಪಡೆದೂ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೇ ಇವತ್ತಿನಿಂದ ಹೆಚ್ಚುವರಿಯಾಗಿ 4 ಸಾವಿರ ಬಿಎಂಟಿಸಿ ಬಸ್‌ಗಳ ಸಂಚಾರ ಆರಂಭ ಮಾಡುತ್ತಿವೆ.

ದಿನದ ಪಾಸ್‌ನಿಂದ ಜನಸಾಮಾನ್ಯರಿಗೆ ತೊಂದರೆ

ದಿನದ ಪಾಸ್‌ನಿಂದ ಜನಸಾಮಾನ್ಯರಿಗೆ ತೊಂದರೆ

ಕಳೆದ 8 ದಿನಗಳಿಂದ ಟಿಕೆಟ್ ವಿತರಣೆ ಮಾಡದೇ ದೈನಂದಿನ ಪಾಸ್ ತೆಗೆದುಕೊಂಡು ಬಸ್ ಹತ್ತಲು ಹೇಳಿತ್ತು. ದಿನದ ಪಾಸ್ 70 ರುಪಾಯಿ, ವಾರದ ಪಾಸ್ 300 ರುಪಾಯಿ, ತಿಂಗಳ ಪಾಸ್ 1,150 ರುಪಾಯಿ ಅಂತ ನಿಗದಿ ಮಾಡಿದ್ದರು. ಇದರಿಂದ ಜನ ಸಾಮಾನ್ಯರು ತೊಂದರೆ ಅನುಭವಿಸಿದ್ದೇ ಹೆಚ್ಚು. ಕೇವಲ 5 ರೂಪಾಯಿ ಕೊಟ್ಟು ಹೋಗಬೇಕಾದ ಸ್ಥಳಕ್ಕೆ 70 ರೂಪಾಯಿ ಕೊಡಬೇಕು ಅಂದರೆ ಹೇಗೆ ಅಂತ ಜನ ಆರಂಭದ ದಿನಂದಲೇ ಆಕ್ರೋಶ ಹೊರಹಾಕಿದ್ದರು.

ಸ್ಟೇಜ್‌ಗಳ ಆಧಾರದ ಮೇಲೆ ದರ ನಿಗದಿ

ಸ್ಟೇಜ್‌ಗಳ ಆಧಾರದ ಮೇಲೆ ದರ ನಿಗದಿ

ಸ್ಟೇಜ್‍ಗಳ ಆಧಾರದ ಮೇಲೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಜೊತೆಗೆ ಅಗತ್ಯ ಇದ್ದರೆಷ್ಟೇ ಪ್ರಯಾಣ ಮಾಡಿ, ಟಿಕೆಟ್‍ಗೆ ಸರಿ ಹೋಗುವಷ್ಟು ಚಿಲ್ಲರೆ ತನ್ನಿ. ಮಾಸ್ಕ್, ಗ್ಲೌಸ್ ಧರಿಸಿ ಎಂದು ಮನವಿ ಮಾಡಿಕೊಂಡಿದೆ.

ಬಸ್‌ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಕೆ

ಬಸ್‌ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಕೆ

ಇನ್ಮುಂದೆ ಪ್ರಯಾಣಿಕರು ಕ್ಯೂ ಆರ್ ಕೋಡ್, ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ಪಾವತಿಸಬಹುದಾಗಿದೆ. 1000 ಬಸ್‌ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗುವುದೆಂದು ಬಿಎಂಟಿಸಿ ಎಂಡಿ ಶಿಖಾ ಹೇಳಿದ್ದಾರೆ.

English summary
Bengaluru Metropolitan Transport Corporation (BMTC) has resumed its ticketing system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X