ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕಾರಿಗೆ ಬೈಕ್ ವಿಮೆ- ಅಪಘಾತವಾದಾಗ ಸತ್ಯಾಂಶ ಬಯಲು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ವಾಹನಗಳಿಗೆ ಇನ್ಸುರೆನ್ಸ್ (ವಿಮೆ)ಯನ್ನು ಮಾಡಿಸುವುದು ಬಹಳ ಮುಖ್ಯವಾಗುತ್ತದೆ. ವಾಹನಗಳಿಗೆ ವಿಮೆಯನ್ನು ಮಾಡಿಸುವುದರಿಂದ ಅಪಘಾತವಾದ ಸಮಯದಲ್ಲಿ ಬಹಳಷ್ಟು ಅನುಕೂಲಗಳಿವೆ. ಆದರೆ ಖಾಸಗಿ ಕಂಪನಿ ವಿಮೆಯನ್ನು ಮಾಡಿಸುವ ಗ್ರಾಹಕರು ಎಚ್ಚರವಾಗಿರಬೇಕು. ನಾಲ್ಕು ಚಕ್ರದ ವಾಹನದ ವಿಮೆ ಎಂದು ದ್ವಿಚಕ್ರ ವಾಹನ ವಿಮೆ ನೀಡಿ ವಂಚಿಸುತ್ತಿದ್ದವನನ್ನು ಬೆಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ವಾಹನಗಳಿಗೆ ಇನ್ಸುರೆನ್ಸ್ ಮಾಡಿಸುವುದು ಪೊಲೀಸರ ದಂಡ ಪ್ರಯೋಗಕ್ಕೆ ಹೆದರಿಯಲ್ಲ. ವಿಮೆ ಮಾಡಿಸುವುದು ಜೀವ ಜೀವನಕ್ಕಾಗಿ ಎಂಬುದನ್ನು ಮನಗಾಣಬೇಕಿದೆ. ಕಾರಿನ ವಿಮೆಯನ್ನು ಮಾಡಿಸಿದರೇ ಅಪಘಾತ ಸಂಭವಿಸಿದ ಸಮಯದಲ್ಲಿ ಜೀವಕ್ಕೆ ಹಾನಿಯುಂಟು ಮಾಡಿದರೆ ಅಥವಾ ಕಾರು ಅಪಘಾತದಲ್ಲಿ ತುಂಬಾ ಡ್ಯಾಮೇಜ್ ಆಗಿದ್ದರೆ ರಿಪೇರಿ ಮಾಡಲು, ಪರಿಹಾರಕ್ಕೆ ವಿಮೆಯ ಮೊತ್ತವನ್ನು ಪಡೆಯಬಹುದಾಗಿದೆ.

ಬೆಂಗಳೂರಿನಲ್ಲಿ ಹೆಚ್ಚಾಯ್ತು ಇನ್ಸುರೆನ್ಸ್ ಕ್ಲೇಮ್; ವಿಮಾ ಕಂಪನಿಗಳ ಪೀಕಲಾಟ ಬೆಂಗಳೂರಿನಲ್ಲಿ ಹೆಚ್ಚಾಯ್ತು ಇನ್ಸುರೆನ್ಸ್ ಕ್ಲೇಮ್; ವಿಮಾ ಕಂಪನಿಗಳ ಪೀಕಲಾಟ

ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಪೊಲೀಸರು ಗ್ರಾಹಕರಿಗೆ ವಂಚನೆಯನ್ನು ಮಾಡುತ್ತಿದ್ದ ಆಸಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಚಕ್ರದ ವಾಹನದ ವಿಮೆ ಎಂದು ಹೇಳಿ ದ್ವಿಚಕ್ರ ವಾಹನದ ವಿಮೆಯನ್ನು ಮಾಡಿಸುವ ಮೂಲಕ ಗ್ರಾಹಕರಿಗೆ ವಂಚನೆಯನ್ನು ಮಾಡುತ್ತಿರುವುದು ಕಂಡು ಬಂದಿತ್ತು. ಇದರಿಂದ ಎಚ್ಚೆತ್ತ ಸೈಬರ್ ಪೊಲೀಸರು ಆರೋಪಿ ಧಾರವಾಡ ಮೂಲದ ಇರ್ಫಾನ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ.

ವಿಮಾ ಕಂಪನಿಯ ಆ್ಯಪ್ ನ ನ್ಯೂನ್ಯತೆ

ವಿಮಾ ಕಂಪನಿಯ ಆ್ಯಪ್ ನ ನ್ಯೂನ್ಯತೆ

ಧಾರವಾಡ ಮೂಲದ ಇರ್ಫಾನ್ ಶೇಖ್ ಎಂಬಾತ Acko General insurance ಎಂಬ ಖಾಸಗಿ ವಿಮಾ ಕಂಪನಿ ಮೂಲಕ ನೂರಾರು ಕಾರಿಗೆ ಟು ವ್ಹೀಲರ್ ವಿಮೆ ಮಾಡಿದ್ದ. ಈತ ವಿಮಾ ಕಂಪನಿಯ ಆ್ಯಪ್ ನ ನ್ಯೂನ್ಯತೆಗಳನ್ನು ಬಳಸಿಕೊಂಡು ಕೃತ್ಯ ಎಸಗುತ್ತಿದ್ದ ಎಂದು ತಿಳಿದುಬಂದಿದೆ. ನಾಲ್ಕು ಚಕ್ರದ ವಾಹನಗಳಿಗೆ ಟು ವ್ಹೀಲರ್ ಇನ್ಸುರೆನ್ಸ್ ಪಾವತಿ ಮಾಡಿದ್ದ ಆರೋಪಿ ಇರ್ಫಾನ್ ಶೇಖ್.

ಇನ್ಸುರೆನ್ಸ್ ಪಾವತಿ ಆದ ಕೂಡಲೇ ಆರ್ ಟಿ ಓ ಆನ್ಲೈನ್ ದಾಖಲೆಯಲ್ಲಿ ಇನ್ಸುರೆನ್ಸ್ ಅವಧಿಯ ದಿನಾಂಕ ಅಪಡೇಟ್ ಆಗುತ್ತೆದೆಯೇ ವಿನಃ ಯಾವ ಮೊತ್ತದ ಇನ್ಸುರೆನ್ಸ್ ಎಂಬುದು ಪತ್ತೆಯಾಗಲ್ಲ. ಇದನ್ನೆ ಬಂಡವಾಳ ಮಾಡಿಕೊಂಡ ಇರ್ಫಾನ್ ಗ್ರಾಹರಿಗೆ ವಂಚನೆಯನ್ನು ಮಾಡುತ್ತಿದ್ದ.
ಇನ್ಸುರೆನ್ಸ್ ಕ್ಲೈಮ್ ಗೆ ಹೋದತ ಸತ್ಯ ಬಯಲು

ಇನ್ಸುರೆನ್ಸ್ ಕ್ಲೈಮ್ ಗೆ ಹೋದತ ಸತ್ಯ ಬಯಲು

ಇರ್ಫಾನ್ ಶೇಖ್ ಕಮರ್ಷಿಯಲ್ ಕಾರುಗಳಿಗೆ ಬೈಕ್ ಇನ್ಸುರೆನ್ಸ್ ಪಾವತಿ ಮಾಡುತ್ತಿದ್ದ. ಈತನ ಬಳಿಗೆ ತೆರಳಿ ವಿಮೆಯನ್ನು ಮಾಡಿಸಿದ್ದ ಕಾರು ಅಪಘಾತವಾಗಿತ್ತು. ಅಪಘಾತವಾಗಿ ಇನ್ಸುರೆನ್ಸ್ ಕ್ಲೈಮ್‌ಗೆ ಹೋದಾಗ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. Acko General insurance ಎಂಬ ಖಾಸಗಿ ವಿಮಾ ಕಂಪನಿಗೆ ಇದುವರೆಗೂ ಎರಡು ಕೋಟಿ ಮೌಲ್ಯದ ನಕಲಿ ವಿಮೆ ಮಾಡಿಸಿರುವುದು ಪತ್ತೆಯಾಗಿದೆ. Acko General insurance ಕಂಪನಿಯಿಂದ ಸೆನ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಇರ್ಫಾನ್ ಶೇಖ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

200ಕ್ಕೂ ಅಧಿಕ ಕಾರುಗಳನ್ನು ಖರೀದಿ ಮಾಡಿದ್ದ ಇರ್ಫಾನ್

200ಕ್ಕೂ ಅಧಿಕ ಕಾರುಗಳನ್ನು ಖರೀದಿ ಮಾಡಿದ್ದ ಇರ್ಫಾನ್

ಓಲಾ ಕಂಪನಿ 2020ರಲ್ಲಿ ಎರಡೂವರೆ ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. ಕೋವಿಡ್‌ನಿಂದ ಚಾಲಕರು ಇಲ್ಲದೆ ಕಾರುಗಳನ್ನು ಮಾರಾಟ ಮಾಡಲಾಗಿತ್ತು. ಒಂದು ವರ್ಷಕ್ಕೂ ಅಧಿಕ ಕಾಲ ವಾಹನಗಳು ನಿಂತಿದ್ದು, ಇನ್ಸುರೆನ್ಸ್ ಮುಗಿದಿದ್ದು ಆ ವಾಹನಗಳ ಮಾರಾಟ ಮಾಡಲಾಗಿತ್ತು. ಅದರಲ್ಲಿ ಇರ್ಫಾನ್ ಓಲಾ ಕಂಪನಿಯಿಂದ 200ಕ್ಕೂ ಅಧಿಕ ಕಾರುಗಳನ್ನು ಖರೀದಿ ಮಾಡಿದ್ದ ಎಂದು ತಿಳಿದುಬಂದಿದೆ. ಈ ಕಾರುಗಳಿಗೂ ದ್ವಿಚಕ್ರದ ವಿಮೆಯನ್ನೇ ಮಾಡಿಸಿದ್ದ ಎನ್ನಲಾಗಿದೆ.

ಆಗ್ನೇಯ ಸಿಇಎನ್‌ ಪೊಲೀಸರಿಂದ ತನಿಖೆ

ಆಗ್ನೇಯ ಸಿಇಎನ್‌ ಪೊಲೀಸರಿಂದ ತನಿಖೆ

ಇರ್ಫಾನ್ ಸಂಪರ್ಕದಲ್ಲಿ ಓಲಾ ಕಂಪನಿಯಿಂದ ಕಾರು ಖರೀದಿ ಮಾಡಿರುವ ಹಲವರು ಮಂದಿ ಇರೋದು ಪತ್ತೆಯಾಗಿದೆ. ರಾಜಸ್ಥಾನ, ದೆಹಲಿ, ಮುಂಬೈ, ಜಾರ್ಖಂಡ್, ಉತ್ತರ ಪ್ರದೇಶ ಸೇರಿ ಹಲವು ರಾಜ್ಯದಲ್ಲಿ ಇದೇ ರೀತಿ ಕೃತ್ಯ ಎಸಗಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ವಿಮೆ ವಂಚನೆ ಜಾಲ ಇಡೀ ಭಾರತದಾದ್ಯಂತ ಹಬ್ಬಿರೋ ಶಂಕೆ ವ್ಯಕ್ತವಾಗಿದ್ದು ಆಗ್ನೇಯ ವಿಭಾಗದ ಸಿಇಎನ್‌ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

English summary
Consumers taking out private company insurance should be cautious. Bengaluru Cyber ​​Police has arrested a man who was cheating by giving two wheeler insurance as four wheeler insurance, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X