ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಕಾಮಗಾರಿಗಾಗಿ 833 ಮರಗಳನ್ನು ಕಡಿಯಲು ಸಿದ್ಧತೆ

|
Google Oneindia Kannada News

ಬೆಂಗಳೂರು, ಜೂನ್ 25: ನಮ್ಮ ಮೆಟ್ರೋ ಕಾಮಗಾರಿಗಾಗಿ 833 ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ. ಔಟರ್‌ರಿಂಗ್ ರಸ್ತೆ ರಸ್ತೆಯಲ್ಲಿ ನಮ್ಮ ಮೆಟ್ರೋ ಕಾಮಗಾರಿಗಾಗಿ 833 ಮರಗಳನ್ನು ಕಡಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಯಾರಿ ನಡೆಸಿದೆ.

ಬಿಬಿಎಂಪಿ ನೋಟಿಫಿಕೇಷನ್ ಪ್ರಕಾರ, ಸೆಂಟ್ರಲ್ ಸಿಲ್ಕ್‌ ಬೋರ್ಡ್‌ನಿಂದ ಕಾಡುಬೀಸನಹಳ್ಳಿ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಸಲು 833 ಮರಗಳು ಅಡ್ಡಬರುತ್ತಿವೆ ಎಂದು ಉಲ್ಲೇಖಿಸಲಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಮೆಟ್ರೋ ಅನುಭವಿಸಿದ ನಷ್ಟವೆಷ್ಟು?ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಮೆಟ್ರೋ ಅನುಭವಿಸಿದ ನಷ್ಟವೆಷ್ಟು?

ಈ ಕುರಿತು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಚ್‌.ಎಸ್. ರಂಗನಾಥ್ ಮಾತನಾಡಿ, ''ಈ ಅಧಿಸೂಚನೆಗೆ ಸಂಬಂಧಿಸಿದಂತೆ ಜುಲೈ 4 ರ ಮೊದಲು ಆಕ್ಷೇಪಣೆಗಳನ್ನು ಸಲ್ಲಿಸಬಹುದು''.

 BBMP plans to cut 833 trees for Namma Metro work on outer ring road

ಈ ಮರಗಳಲ್ಲಿ ಹೆಚ್ಚಿನವು ಹಳೆಯದಲ್ಲ ಹಾಗೂ ಮರಗಳನ್ನು ಕಡಿಯಲು ಬಯಸುವ ಅಧಿಕಾರಿಗಳು ಒಂದು ಮರದ ಬದಲು 10 ಸಸಿಗಳನ್ನು ನೆಡಬೇಕು ಎಂದು ನ್ಯಾಯಾಲಯದ ಆದೇಶವಿದೆ ಎಂದರು.

ಸೆಂಟ್ರಲ್ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಬೈಯಪ್ಪನಹಳ್ಳಿ ಡಿಪೋದವರೆಗಿನ 19 ಕಿ.ಮೀ ಉದ್ದದ ಯೋಜನೆಯು 13 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ.ಇದರಲ್ಲಿ ರಸ್ತೆ ಅಗಲೀಕರಣ, ತಿರುವು ಹಾಗೂ ಇತರೆ ಕಾಮಗಾರಿಗಳನ್ನು ಒಳಗೊಂಡಿದೆ.

ಹೆಬ್ಬಾಳ-ನಾಗವಾರಕಣಿವೆ ಯೋಜನೆಯ ಭಾಗವಾಗಿ ಸಿಂಗನಾಯಕನಹಳ್ಳಿ ಸರೋವರವನ್ನು ಪುನಶ್ವೇತನಗೊಳಿಸಲು ಅರಣ್ಯ ಇಲಾಖೆ ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿರುವ 6316 ಮರಗಳನ್ನು ಕಡಿಯಲು ಪ್ರಸ್ತಾಪಿಸಿತ್ತು.

Recommended Video

Philippines ಅಧ್ಯಕ್ಷ ಲಸಿಕೆ ತೆಗೆದುಕೊಳ್ಳದಿದ್ದರೆ ಯಾವ ಶಿಕ್ಷೆ ಏನು | Oneindia Kannada

ಈ ಕ್ರಮವನ್ನು ವಿರೋಧಿಸಿ ಸಾಕಷ್ಟು ಪರಿಸರವಾದಿಗಳು ಪ್ರತಿಭಟನೆ ನಡೆಸಿದ್ದರು. ಕಳೆದ ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ 1293 ಮರಗಳನ್ನು ಕಡಿಯಲಾಗಿದೆ.

English summary
The Bengaluru civic body — Bruhat Bengaluru Mahanagara Palike (BBMP) — has issued a public consultation to cut down 833 trees on the Outer Ring Road to make way for construction work of Bengaluru Metro Rail Corporation Limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X