ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹನಿಮೂನ್ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದ ಟೆಕ್ಕಿ ದಂಪತಿಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಮಾರ್ಚ್ 14: ಹನಿಮೂನಿಗೆಂದು ಗ್ರೀಸ್‌ಗೆ ತೆರಳಿದ್ದ ಬೆಂಗಳೂರಿನ ಟೆಕ್ಕಿ ದಂಪತಿಗೆ ಕೊರೊನಾ ಸೋಂಕು ತಗುಲಿದೆ.

ಹನಿಮೂನ್ ಮುಗಿಸಿ ಬಂದ ಟೆಕ್ಕಿ ಬೆಂಗಳೂರಿನಲ್ಲಿ ತನ್ನ ಉದ್ಯೋಗಕ್ಕೆ ಸೇರಿಕೊಂಡಿದ್ದರೆ, ಪತ್ನಿ ಆಗ್ರಾಕ್ಕೆ ಹೋಗಿದ್ದಳು. ಟೆಕ್ಕಿಯ ರಕ್ತದ ಮಾದರಿಯಲ್ಲಿ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಉತ್ತರ ಪ್ರದೇಶ ಸರ್ಕಾರಕ್ಕೆ ಮಾಹಿತಿ ನೀಡಿತ್ತು.

ಕೊರೊನಾ ವೈರಸ್ ಮುಂಜಾಗ್ರತೆ, ರಾಜ್ಯ ಪ್ರವಾಸ ರದ್ದು ಮಾಡಿದ ಸಿಎಂ ಯಡಿಯೂರಪ್ಪ!ಕೊರೊನಾ ವೈರಸ್ ಮುಂಜಾಗ್ರತೆ, ರಾಜ್ಯ ಪ್ರವಾಸ ರದ್ದು ಮಾಡಿದ ಸಿಎಂ ಯಡಿಯೂರಪ್ಪ!

ಪತ್ನಿಗೆ ಕೊರೊನಾ ವೈರಸ್ ಬಂದಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಗೂಗಲ್ ಟೆಕ್ಕಿಯ ಪತ್ನಿ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದಳು. ದಂಪತಿ ಹನಿಮೂನ್‍ಗಾಗಿ ಗ್ರೀಸ್ ದೇಶಕ್ಕೆ ಭೇಟಿ ನೀಡಿ ಮಾರ್ಚ್ ಮೊದಲ ವಾರದಲ್ಲಿ ಅಲ್ಲಿಂದ ವಾಪಸ್ ಬಂದಿದ್ದರು.

Bengaluru Based Techies Found To be Infected With Coronavirus

ಲ್ಯಾಬ್ ವರದಿಯಲ್ಲಿ ಆಕೆಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮತ್ತೆ ಆಕೆಯ ಪೋಷಕರನ್ನು ಸಂಪರ್ಕಿಸಿದಾಗ ದೆಹಲಿಯನ್ನು ಮಗಳು ತೊರೆದಿದ್ದಾಳೆ ಎಂದು ತಿಳಿಸಿದ್ದರು. ಬಳಿಕ ಆಗ್ರಾಕ್ಕೆ ಪೊಲೀಸರ ಜೊತೆ ವೈದ್ಯರ ತಂಡ ತೆರಳಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇವಲ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ಬಂದಿದ್ದ ಈಕೆಯನ್ನು ಸಂಪರ್ಕಿಸಿ ರಕ್ತದ ಮಾದರಿಯನ್ನು ಪಡೆದು ಪ್ರತ್ಯೇಕ ನಿಗಾದಲ್ಲಿ ಇಡಲಾಗಿತ್ತು. ಆದರೆ ವೈದ್ಯಕೀಯ ವರದಿ ಬರುವುದರ ಒಳಗಡೆ ಆಕೆ ಯಾರಿಗೂ ತಿಳಿಸದೇ ಆಸ್ಪತ್ರೆಯಿಂದ ತೆರಳಿದ್ದಳು.

Secret Of Corona: ರಾಜಕಾರಣಿಗಳಲ್ಲೇ ಕೊರೊನಾ ಹೆಚ್ಚಾಗಿ ಹರಡುವುದೇಕೆ?Secret Of Corona: ರಾಜಕಾರಣಿಗಳಲ್ಲೇ ಕೊರೊನಾ ಹೆಚ್ಚಾಗಿ ಹರಡುವುದೇಕೆ?

ಉತ್ತರ ಪ್ರದೇಶದಲ್ಲಿ ಇದವರೆಗೂ 12 ಕೊರೊನಾ ವೈರಸ್ ಕೇಸ್‍ಗಳು ಪತ್ತೆಯಾಗಿದೆ. ಅದರಲ್ಲೂ 8 ಆಗ್ರಾದಲ್ಲೇ ಕಂಡು ಬಂದಿದೆ. ಫೆಬ್ರವರಿ 23ರಂದು ದಂಪತಿ ಹನಿಮೂನ್‍ಗೆಂದು ಗ್ರೀಸ್‍ಗೆ ತೆರಳಿದ್ದರು.

ಮಾರ್ಚ್ 6ರಂದು ಮುಂಬೈಗೆ ಈ ದಂಪತಿ ವಾಪಸ್ ಆಗಿದ್ದರು. ಮಾರ್ಚ್ 8ರಂದು ಬೆಂಗಳೂರಿಗೆ ಪತಿ ಒಬ್ಬನೇ ಬಂದಿದ್ದಾನೆ. ಪತ್ನಿ ಮುಂಬೈನಿಂದ ನೇರವಾಗಿ ಆಗ್ರಾಗೆ ತೆರಳಿದ್ದಾಳೆ. ಮಾರ್ಚ್ 9ರಂದು ಕಚೇರಿಗೆ ಸೋಂಕಿತ ವ್ಯಕ್ತಿ ಕಚೇರಿಗೆ ಹೋಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

English summary
Techies Who working For Google They have been Found To be infected with Coronavirus in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X