• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್-19 ಪತ್ತೆಗೆ ಕಿಟ್ ಸಿದ್ಧಪಡಿಸಿದ ಬೆಂಗಳೂರಿನ ಸ್ಟಾರ್ಟ್‌ ಅಪ್

|

ಬೆಂಗಳೂರು, ಏಪ್ರಿಲ್ 05 : ದೇಶಾದ್ಯಂತ ಕೊರೊನಾ ಸೋಂಕಿನ ಆತಂಕ ಹೆಚ್ಚಿದೆ. ವ್ಯಕ್ತಿಗೆ ಸೋಕು ತಗುಲಿದೆಯೇ?. ಇಲ್ಲವೇ? ಎಂಬ ವರದಿ ಬರಲು ಕನಿಷ್ಠ ಒಂದು ದಿನವಾದರೂ ಬೇಕು. ಬೆಂಗಳೂರು ಮೂಲಕ ಸ್ಟಾರ್ಟ್ ಅಪ್ ಕಂಪನಿಯೊಂದು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದೆ.

ಉದ್ಯಾನ ನಗರಿ ಬೆಂಗಳೂರು ಮೂಲದ Bione Ventures Pvt Ltd ಎಂಬ ಕಂಪನಿ ಕೋವಿಡ್ -19 ಪರೀಕ್ಷೆ ಮಾಡುವ ಕಿಟ್ ಮಾರುಕಟ್ಟೆಗೆ ತರಲಿದೆ. ಕೆಲವೇ ನಿಮಿಷಗಳಲ್ಲಿ ಇದರಲ್ಲಿ ಪರೀಕ್ಷಾ ವರದಿ ಸಿಗಲಿದೆ. ಕೆಲವೇ ವಾರಗಳಲ್ಲಿ ಈ ಕಿಟ್ ಮಾರುಕಟ್ಟೆಗೆ ಬರಲಿದೆ.

ಕೊರೊನಾ ವೈರಸ್ ಚಿಕಿತ್ಸೆಗೆ ಭಾರತದಲ್ಲಿ ಔಷಧಿ ಕೋರಿದ ಅಮೆರಿಕಾ

ಅಮೆರಿಕದಲ್ಲಿರುವ ಕಂಪನಿಯ ಪಾಲುದಾರರ ಮೂಲಕ ಕಿಟ್‌ ಅನ್ನು ತರಿಸಲಾಗುತ್ತಿದೆ. ಅಮೆರಿಕದ ಆಹಾರ ಮತ್ತು ಔಷಧ ಮಂಡಳಿ (ಯುಎಸ್‌ಎಫ್‌ಡಿಎ) ಯಿಂದ ಈ ಕಿಟ್‌ಗೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಕಂಪನಿ ಕಿಟ್‌ ಅನ್ನು ಭಾರತಕ್ಕೆ ತರಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಒಪ್ಪಿಗೆ ಪಡೆದಿದೆ.

24 ಗಂಟೆಗಳಲ್ಲೇ ಕೊರೊನಾ ವೈರಸ್ ನಿಂದ ಸಾವಿರಾರು ಮಂದಿ ಸಾವು

ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರ ಹೋಗದೆ ಮನೆಯಲ್ಲಿಯೇ ಕುಳಿತು ಈ ಕಿಟ್ ಮೂಲಕ ಕೋವಿಡ್ -19 ಪರೀಕ್ಷೆ ಮಾಡಿಕೊಳ್ಳಬಹುದು. ಕೆಲವೇ ನಿಮಿಷಗಳಲ್ಲಿ ಇದರಲ್ಲಿ ವರದಿ ಸಹ ಬರಲಿದೆ ಎಂದು ಕಂಪನಿ ಹೇಳಿದೆ.

ಕೊರೊನಾ: ಏಪ್ರಿಲ್ 30 ರವರೆಗೆ ವಿಮಾನಗಳು ಹಾರಾಡುವುದು ಡೌಟ್

ಈ ಕಿಟ್ ದರ 2 ರಿಂದ 3 ಸಾವಿರ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. 5 ರಿಂದ 10 ನಿಮಿಷದಲ್ಲಿ ಈ ಕಿಟ್ ಮೂಲಕ ಜನರು ಪರೀಕ್ಷೆಯ ವರದಿ ತಿಳಿಯಬಹುದು. ಪಿಂಗರ್ ಪ್ರಿಕ್ ಮೂಲಕ ಈ ಕಿಟ್ ಮೂಲಕ ಪರೀಕ್ಷೆ ಮಾಡಿಕೊಳ್ಳಹುದು.

2019ರಲ್ಲಿ ಬೆಂಗಳೂರಿನಲ್ಲಿ Bione Ventures Pvt Ltd ಎಂಬ ಸ್ಟಾರ್ಟ್ ಅಪ್ ಕಂಪನಿ ಆರಂಭವಾಯಿತು. ಈಗ ಕಿಟ್‌ಗೆ ಭಾರೀ ಬೇಡಿಕೆ ಇದ್ದು, ವಾರಕ್ಕೆ 20 ಸಾವಿರ ಕಿಟ್‌ಗಳನ್ನು ತಯಾರು ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಕರ್ನಾಟಕದಲ್ಲಿ ಕೊರೊನಾ ಸೋಂಕಿತ ಪ್ರಮಾಣ 140ರ ಗಡಿ ದಾಟಿದೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಸಾವಿರಾರು ಜನರು ನಗರದಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

English summary
Bengaluru based startup Bione Ventures Pvt Ltd has launched a home screening kit for COVID-19 that delivers results within minutes. Kit may come to market in with in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X