ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.21ರಂದು ವಕೀಲ ಸಂಘದ ಚುನಾವಣೆ: 171 ಅಭ್ಯರ್ಥಿಗಳು ಕಣದಲ್ಲಿ

|
Google Oneindia Kannada News

ಬೆಂಗಳೂರು, ಜನವರಿ 20 :ದಕ್ಷಿಣ ಭಾರತದಲ್ಲೇ ಅತಿದೊಡ್ಡ ವಕೀಲರ ಸಂಘವೆಂದು ಹೆಸರಾಗಿರುವ ಬೆಂಗಳೂರು ವಕೀಲರ ಸಂಘಕ್ಕೆ ಜನವರಿ 21 ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.

2017-2018 ರಿಂದ 2019-20ರ ನಡುವಿನ ಮೂರು ವರ್ಷ ಅವಧಿಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿ ಅಲ್ಲದೆ ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮೆಯೋಹಾಲ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ 32 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಒಟ್ಟು 121 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಭಕ್ತವತ್ಸಲ, ಫಿರೋಜ್ ನಿಜಾಮ್, ಸಿ.ಆರ್. ಗೋಲಾಪಸ್ವಾಮಿ, ಕೃಷ್ಣರಾವ್ ಮರಾಠ, ಆರ್. ರಾಜಣ್ಣ, ಟಿ.ಎ. ರಾಜಶೇಖರ್, ಎ.ಪಿ. ರಂಗನಾಥ್, ಎಚ್.ಸಿ. ಶಿವರಾಮು, ವಿ. ವೆಂಕಟರಾಮರೆಡ್ಡಿ, ಜೆ. ಯುಗಂದರ್ ಸೇರಿ10 ಮಂದಿ ಕಣದಲ್ಲಿದ್ದಾರೆ.

Bengaluru Bar Council poll on Sunday

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಸಿ.ಆರ್. ಕುಮಾರಸ್ವಾಮಿ, ಈ ಹಿಂದೆ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಆರ್. ರಾಜಣ್ಣ,ಎ. ಪಿ. ರಂಗನಾಥ್ ಮತ್ತು ಬೆಂಗಳೂರು ವಕೀಲರ ಸಂಘದ ಹಾಲಿ ಅಧ್ಯಕ್ಷ ಎಚ್.ಸಿ. ಶಿವರಾಮು ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಒಟ್ಟಾರೆ7ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಂ.ಎನ್. ಗಂಗಾಧರಯ್ಯ, ಸಿ.ಎನ್.ನಾಗಣ್ಣ, ಎಚ್.ವಿ. ಪ್ರವೀಣ್ ಗೌಡ, ಪುಟ್ಟೇಗೌಡ, ಬಿ.ಎಸ್. ರಾಜಶೇಖರ್, ಟಿ.ಜಿ. ರವಿ ಮತ್ತು ಎನ್.ಎಂ. ಸತೀಶ್ ಸ್ಪರ್ಧೆಯಲ್ಲಿದ್ದಾರೆ. ಖಜಾಂಚಿ ಸ್ಥಾನಕ್ಕೆ ಅಕ್ಕಿ ಮಂಜುನಾಥ್ ಗೌಡ, ಎನ್. ಭಾರ್ಗವ, ಎಂ ಚಾಮರಾಜ್, ಆರ್. ಚಂದ್ರಕುಮಾರ್, ಎಂ.ಎಚ್. ಚಂದ್ರಶೇಖರ್, ಎಲ್. ಜಗದೀಶ್, ಜಿ. ಲೋಕೇಶ್ಗೌಡ, ಆರ್. ಮಹೇಶ್, ಕೆ.ಎಂ. ಮಲ್ಲೇಶ, ಮಂಜುನಾಥ್ ಎನ್. ಬೈರಾರೆಡ್ಡಿ, ಜೆ. ಪೂಜಪ್ಪ, ಶಿವಮೂರ್ತಿ, ಎಸ್. ಉಮೇಶ್ ಸೇರಿ 13 ಜನ ಸ್ಪರ್ಧೆಯಲ್ಲಿದ್ದಾರೆ.

ಸ್ಮಾರ್ಟ್ ಕಾರ್ಡ್ ಕಡ್ಡಾಯ: ಬೆಂಗಳೂರು ವಕೀಲರ ಸಂಘದಲ್ಲಿ ೨೪ಸಾವಿರ ಸದಸ್ಯರಿದ್ದು, ಆ ಪೈಕಿ 14,500 ಮಂದಿ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಅರ್ಹ ಮತದಾರರು ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗೆ ಮತ ಚಲಾಯಿಸುವುದರ ಜತೆಗೆ ತಾವು ಪ್ರತಿನಿಧಿಸುವ ಘಟಕದಲ್ಲಿನ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳ ಆಯ್ಕೆಗೆ ಪ್ರತ್ಯೇಕ ಮತದಾನ ಮಾಡಬೇಕು.

ಸಿಟಿ ಸಿವಿಲ್ ಕೋರ್ಟ್ ನಲ್ಲಿ 12 ಕಾರ್ಯಕಾರಿ ಸಮಿತಿ ಸ್ಥಾನಗಳಿಗೆ 78 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಅವನ್ನು ಹೊರತುಪಡಿಸಿದರೆ ಉಳಿದ ಎಲ್ಲ ಸ್ಥಾನಗಳಿಗೂ ವಿಸ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗುವುದು. ಸಿಟಿ ಸಿವಿಲ್ ಕೋರ್ಟ್ ನ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ ಎಂದು ಚುನಾವಣಾಧಿಕಾರಿ ಎ.ಜಿ. ಶಿವಣ್ಣ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಮತದಾನ ನಡೆಯಲಿದೆ. 500 ಜನ ಪೊಲೀಸರನ್ನು ನಿಯೋಜಿಸಲಾಗಿದೆ.

English summary
South India's biggest Bar council of Bengaluru will get new office bearers on January 21 and 171 candidats are in Fray for 32 posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X