ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

7 ಮಂದಿ ಸಾವಿಗೀಡಾದ ಆಡಿ ಕಾರು ಅಪಘಾತದಲ್ಲಿ ಆಂಜನೇಯಸ್ವಾಮಿ ಸೇಫ್

|
Google Oneindia Kannada News

ಬೆಂಗಳೂರು, ಸೆ. 06: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ, ಏಳು ಮಂದಿಯ ಸಾವಿಗೆ ಕಾರಣವಾದ ಕೋರಮಂಗಲದ ಆಡಿ ಕಾರು ಅಪಘಾತ ಪ್ರಕರಣದಲ್ಲಿ ಈವರೆಗೂ ಯಾರಿಗೂ ಗೊತ್ತಾಗದ ಎರಡು ಅಚ್ಚರಿ ಸಂಗತಿಗಳು ಹೊರ ಬಿದ್ದಿವೆ. ಆಡಿ ಕಾರು ಅಪಘಾತಕ್ಕೆ ಒಳಗಾದ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಸಣ್ಣ ಪೆಟ್ಟು ಆಗದೇ ಪವಾಡ ರೀತಿಯಲ್ಲಿ ಪಾರಾಗಿದೆ. ಅದೇ ಆಂಜನೇಯ ಸ್ವಾಮಿ ವಿಗ್ರಹದ ಸಮೀಪ ಪ್ರತಿ ನಿತ್ಯ ಮಲಗುತ್ತಿದ್ದ ಅಲೆಮಾರಿಯೊಬ್ಬ ಅವತ್ತು ಅಲ್ಲಿ ಇರದೇ ಜೀವ ಉಳಿಸಿಕೊಂಡಿರುವ ಅಚ್ಚರಿಯ ಸಂಗತಿ ಹೊರ ಬಿದ್ದಿದೆ.

ಕೋರಮಂಗಲದ ಮಂಗಳ ಕಲ್ಯಾಣ ಮಂಟಪ ಬಳಿ ಸಂಭವಿಸಿದ ಆಡಿ ಕಾರು ಅಪಘಾತ ಪ್ರಕರಣ ರಾಜ್ಯದೆಲ್ಲೆಡೆ ಚರ್ಚೆಗೆ ನಾಂದಿ ಹಾಡಿತ್ತು. 20 ರಿಂದ 30 ವರ್ಷದೊಳಗಿನ ಏಳು ಮಂದಿಯನ್ನು ಬಲಿ ಪಡೆದ ಅಪಘಾತದಲ್ಲಿ ಹೊಸೂರು ಶಾಸಕ ಪ್ರಕಾಶ್ ಅವರ ಎಕೈಕ ಪುತ್ರ ಕರುಣಾ ಸಾಗರ್ ಸಾವಿಗೀಡಾಗಿದ್ದ. ಮಾತ್ರವಲ್ಲದೇ ಆತನ ಪ್ರಿಯತಮೆ ಬಿಂದು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದರು.

ಪ್ರಕರಣದ ಬಗ್ಗೆ ಎಸಿಪಿ ದರ್ಜೆಯ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ. ಏಳು ಮಂದಿಯ ಸಾವಿಗೀಡಾದ ಅಪಘಾತ ಪ್ರಕರಣದ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇದರ ನಡುವೆ ಘಟನಾ ಸ್ಥಳಕ್ಕೆ ತೆರಳಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ ಒನ್ಇಂಡಿಯಾ ಕನ್ನಡಕ್ಕೆ ಎರಡು ಮಹತ್ವದ ಸಂಗತಿಗಳು ಲಭ್ಯವಾಗಿವೆ.

Bengaluru Audi Car Accident Case: unknown person miracle escape!

ಆ ಅಲೆಮಾರಿ ವ್ಯಕ್ತಿ ಅವತ್ತು ಇರಲಿಲ್ಲ!:

ಆಡಿ ಕಾರು ಅಪಘಾತಕ್ಕೆ ಒಳಗಾಗಿರುವ ಗೋಡೆಯಲ್ಲಿಯೇ ಆಂಜನೇಸ್ವಾಮಿ ವಿಗ್ರಹವಿದೆ. ಪ್ರತಿನಿತ್ಯ ಭಕ್ತರು ಅಲ್ಲಿ ಬಂದು ಪೂಜೆ ಸಲ್ಲಿಸಿ ಕೈ ಮುಗಿದು ಹೋಗುತ್ತಾರೆ. ಅಲ್ಲಿ ಆಂಜನೇಯ ಸ್ವಾಮಿ ವಿಗ್ರಹ ಇದ್ದಿದ್ದರಿಂದ ಪ್ರತಿ ದಿನ ರಾತ್ರಿ ಅಲೆಮಾರಿ ವ್ಯಕ್ತಿಯೊಬ್ಬ ಅಲ್ಲಿ ಮಲಗುತ್ತಿದ್ದ. ದೇವರ ಪಕ್ಕದಲ್ಲಿ ಮಲಗಿದರೆ ಏನೂ ಆಗಲ್ಲ ಎಂಬ ಸಣ್ಣ ನಂಬಿಕೆಯೊಂದಿಗೆ ಅಲ್ಲಿ ಮಲಗಿ ಬೆಳಗ್ಗೆ ಎದ್ದು ಹೊರಡುತ್ತಿದ್ದ.

ವಿಪರ್ಯಾಸವೆಂದರೆ ಆ. 30 ರಂದು ರಾತ್ರಿ ಆ ಅಲೆಮಾರಿ ವ್ಯಕ್ತಿ ಮಲಗಿರಲಿಲ್ಲ. ಆ. 31 ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಅ ವ್ಯಕ್ತಿ ಮಲಗುತ್ತಿದ್ದ ಜಾಗದಲ್ಲಿಯೇ ಕಾರು ಅಪಘಾತಕ್ಕೀಡಾಗಿದೆ. ಒಂದು ವೇಳೆ ಆ ಅಲೆಮಾರಿ ವ್ಯಕ್ತಿ ಅಂದು ಮಲಗಿದ್ದಲ್ಲಿ, ಒಂದು ಮೂಳೆ ಕೂಡ ಉಳಿಯುತ್ತಿರಲಿಲ್ಲ. ಅಚ್ಚರಿ ಏನೆಂದರೆ ಆತ ಅವತ್ತು ರಾತ್ರಿ ಅಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ, ಇನ್ನೊಂದು ಅಡಿ ದೂರ ಕಾರು ಮುನ್ನುಗಿದ್ದಲ್ಲಿ ಅಲ್ಲಿದ್ದ ಆಂಜನೇಯ ಸ್ವಾಮಿ ಕಪ್ಪು ವಿಗ್ರಹ ಪುಡಿ ಯಾಗುತ್ತಿತ್ತು. ಒಂದು ಚೂರು ಕೂಡ ಕಾರು ತಾಗಿಲ್ಲ. ಈ ವಿಚಾರಗಳೆರಡು ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Bengaluru Audi Car Accident Case: unknown person miracle escape!

ನಾನು ಮೊದಲು ಆಲೋಚಿಸಿದ್ದೆ ಆ ವ್ಯಕ್ತಿಯನ್ನ:
ಕಾರು ಅಪಘಾತದ ಸದ್ದು ಕೇಳಿದ ಕೂಡಲೇ ನಾನು ಹೊರಗೆ ಬಂದು ನೋಡಿದೆ. ಕಾರಿನಿಂದ ದಟ್ಟ ಹೊಗೆ ಬರುತ್ತಿತ್ತು. ಅದನ್ನು ನೋಡಿದ ಕೂಡಲೇ ನನಗೆ ಮೊದಲು ನೆನಪಾಗಿದ್ದು ಅಲ್ಲಿ ಮಲಗುತ್ತಿದ್ದ ಅಲೆಮಾರಿ ವ್ಯಕ್ತಿ. ಯಾವುದೋ ಕಾರು ಹತ್ತಿಸಿ ಆತ ಸಾವನ್ನಪ್ಪಿರಬಹುದು ಎಂದು ಭಾವಿಸಿದೆ. ಅಪಘಾತಕ್ಕೆ ಕಾರಣವಾಗಿದ್ದ ಕಾರಿನಲ್ಲಿದ್ದವರು ಕೆಮ್ಮುತ್ತಿದ್ದ ದೃಶ್ಯ ನೋಡಿ ನೀರು ತಂದು ಸುರಿಯಲು ಯತ್ನಿಸಿದೆ. ಅಷ್ಟರಲ್ಲಿ ಅಕ್ಕ ಪಕ್ಕದವರು ಬಂದು ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದರು. ಎಲ್ಲಾ ಕಡೆ ನೋಡಿದರೂ ಆ ಅಲೆಮಾರಿ ವ್ಯಕ್ತಿ ಇದ್ದ ದೃಶ್ಯ ಕಾಣಲೇ ಇಲ್ಲ.

ಪ್ರತಿ ನಿತ್ಯ ಅಲ್ಲಿಯೇ ಮಲಗಿರುತ್ತಿದ್ದ. ಪವಾಡ ಎಂಬಂತೆ ಆತ ಅವತ್ತು ಅಲ್ಲಿ ಮಲಗಿರಲಿಲ್ಲ. ಈ ಮೂಲಕ ತನ್ನ ಜೀವ ರಕ್ಷಣೆ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿತು ಎಂದು ಅಡಿ ಕಾರು ಅಪಘಾತ ಮಾಡಿರುವ ಕಟ್ಟಡದಲ್ಲಿ ನೆಲೆಸಿದ್ದ ಕೆಲಸಗಾರ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Bengaluru Audi Car Accident Case: unknown person miracle escape!

Recommended Video

ಭಾರತೀಯ ಸೈನಿಕರು ಉಪಯೋಗಿಸಿದ ಯೂನಿಫಾರ್ಮ್ ಹೇಗೆ ಮರುಬಳಕೆಯಾಗುತ್ತೆ? | Oneindia Kannada

ಇನ್ನು ವಿಚಿತ್ರವೆಂದರೆ ಅಲ್ಲಿಯೇ ಇರುವ ಆಂಜನೇಯ ಮೂರ್ತಿಗೆ ಯಾವುದೇ ಸಮಸ್ಯೆ ಆಗಿಲ್ಲ. ಒಂದಡಿಯಷ್ಟು ಕಾರು ಅಪ್ಪಳಿಸಿದರೂ ವಿಗ್ರಹ ಛಿದ್ರವಾಗುತ್ತಿತ್ತು. ಆದರೆ ಆ ವಿಗ್ರಹಕ್ಕೂ ಏನೂ ಆಗಿಲ್ಲ. ಅಪಘಾತವಾದ ಮರುದಿನದಿಂದಲೇ ಅಲ್ಲಿನ ವಿಗ್ರಹಕ್ಕೆ ಜನ ಪೂಜೆ ಮಾಡುತ್ತಿದ್ದಾರೆ. ಎಂದಿನಂತೆ ಭಕ್ತರು ಬಂದು ಹೋಗುತ್ತಿದ್ದಾರೆ ಎಂದು ಘಟನಾ ಸ್ಥಳದ ಬಗ್ಗೆ ಸ್ಥಳೀಯರು ವಿವರಿಸಿದ್ದಾರೆ. ಅಲೆಮಾರಿಯಂತೂ ಜೀವ ಉಳಿಸಿಕೊಂಡಿರುವ ವಿಚಾರ ಸ್ಥಳೀಯರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

English summary
Bengaluru Audi Car Accident Case: unknown person miracle escape from the Audi car accident. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X