ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಐದು ಕಡೆ ಸ್ಟೇಡಿಯಂ ನಿರ್ಮಾಣ: ಎಲ್ಲೆಲ್ಲಿ?

By Nayana
|
Google Oneindia Kannada News

ಬೆಂಗಳೂರು, ಜು.18: ಬೆಂಗಳೂರಿನ ಒಟ್ಟು ಐದು ಕಡೆ ನೂತನ ಕ್ರೀಡಾಂಗಣಗಳು ತಲೆ ಎತ್ತಲಿವೆ. ಈ ಹೊಸ ಸ್ಟೇಡಿಯಂಗಳು ಗುಂಜೂರು, ದೇವನಹಳ್ಳಿ, ಎಚ್‌ಎಸ್‌ಆರ್‌ ಲೇಔಟ್‌, ತಾವರೆಕೆರೆ ಮತ್ತು ಅಂಜನಾಪುರದಲ್ಲಿ ನಿರ್ಮಾಣವಾಗಲಿದೆ.

ಇದರ ನಿರ್ಮಾಣದ ಬಳಿಕ ಬೆಂಗಳೂರಲ್ಲಿ ಒಟ್ಟು ಕ್ರೀಡಾಂಗಣಗಳ ಸಂಖ್ಯೆ 13ಕ್ಕೇರಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಸಾಕಷ್ಟು ಪಂದ್ಯಗಳು ನಡೆಯುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ, ಇನ್ನೂ ಹೆಚ್ಚಿನ ಚುಟುವಟಿಕೆ ನಡೆಯಬೇಕಾಗಿರುವುದರಿಂದ ಬೆಂಗಳೂರಿನಾದ್ಯಂತ ನಾಲ್ಕು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಬಿಸಿಲೂರು ರಾಯಚೂರಿನಲ್ಲಿ ಈಗ ಗ್ರಾಮೀಣ ಕ್ರೀಡೆಗಳದ್ದೇ ಕಾರುಬಾರುಬಿಸಿಲೂರು ರಾಯಚೂರಿನಲ್ಲಿ ಈಗ ಗ್ರಾಮೀಣ ಕ್ರೀಡೆಗಳದ್ದೇ ಕಾರುಬಾರು

ಅಥ್ಲೆಟಿಕ್ ಟ್ರಾಕ್ಸ್, ಜಾವೆಲಿನ್, ಡಿಸ್ಕಸ್, ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಆಡಲು ವ್ಯವಸ್ಥೆಗಳು ಈ ಸ್ಟೇಡಿಯಂಗಳಲ್ಲಿರುತ್ತವೆ. ಹಾಗಾದರೆ ಕ್ರೀಡಾಂಗಣ ಹೇಗಿರುತ್ತದೆ: ಪ್ರತಿ ಕ್ರೀಡಾಂಗಣಗಳ ನಿರ್ಮಾಣಕ್ಕೆ 10 ಎಕರೆ ಜಮೀನು ಬೇಕು.

Bengaluru all set to receive five more outdoor stadium soon

ಇತ್ತೀಚಿನ ರಾಜ್ಯ ಬಜೆಟ್ ನಲ್ಲಿ ನಮಗೆ ಹಣ ಸಿಕ್ಕಿದ್ದು, ಸದ್ಯದಲ್ಲಿಯೇ ವಿಸ್ತೃತ ಯೋಜನಾ ವರದಿ ತಯಾರಿಸಿ ಟೆಂಡರ್ ಕರೆಯಲಿದ್ದೇವೆ. ಟೆಂಡರ್ ಅಂತಿಮವಾದ ಕೂಡಲೇ 6 ತಿಂಗಳಿನಿಂದ ಒಂದು ವರ್ಷದಲ್ಲಿ ಕ್ರೀಡಾಂಗಣ ನಿರ್ಮಾಣ ಪೂರ್ಣಗೊಳಿಸಲಿದ್ದೇವೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್‌ ಶಿವಶಂಕರ್ ತಿಳಿಸಿದ್ದಾರೆ.

ಕಿತ್ತೂರು ರಾಣಿ ಕ್ರೀಡಾಂಗಣದ ಮಾಲಿಕತ್ವ ಬಿಬಿಎಂಪಿ ಹೊಂದಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಚಿನ್ನಸ್ವಾಮಿ ಸ್ಟೇಡಿಯಂ ಮತ್ತು ಆಲೂರು ಸ್ಟೇಡಿಯಂಗಳಿವೆ. ಇದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗೆ ಒಳಪಟ್ಟಿದೆ. ಕಂಠೀರವ ಸ್ಟೇಡಿಯಂ ಹಲವು ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ಹಾಕಿ ಸ್ಟೇಡಿಯಂ, ಬೆಂಗಳೂರು ಫುಟ್ ಬಾಲ್ ಸ್ಟೇಡಿಯಂ ಮತ್ತು ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಯುವ ಕೇಂದ್ರ ವಿದ್ಯಾನಗರವನ್ನು ರಾಜ್ಯ ಕ್ರೀಡಾ ಇಲಾಖೆ ನಿರ್ವಹಣೆ ಮಾಡುತ್ತಿದೆ.

English summary
To reduce the burden on existing stadium in Bengaluru, five more stadium are coming up in the city. with this, the city will be having at least 13 outdoor stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X