ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು, ವೇಳಾಪಟ್ಟಿ ಬದಲಾವಣೆ

|
Google Oneindia Kannada News

ಬೆಂಗಳೂರು, ಜನವರಿ 07: ಜನವರಿ 4ರಿಂದ ಮೂರು ಜೋಡಿ ರೈಲುಗಳು ಬೆಂಗಳೂರು ರೈಲು ನಿಲ್ದಾಣ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚಾರ ಆರಂಭಿಸಿವೆ.

ಹೊಸ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲುಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ ರೈಲು ನಿಲ್ದಾಣದಿಂದ ದೇವನಹಳ್ಳಿವರೆಗೆ ಸಂಚರಿಸುತ್ತಿದ್ದರೆ, ಮತ್ತೊಂದು ಯಲಹಂಕದಿಂದ ದೇವನಹಳ್ಳಿಯವರೆಗೂ ಸಂಚರಿಸುತ್ತಿದೆ. ಜನವರಿ 8 ರಿಂದ ಜಾರಿಯಾಗುವಂತೆ ಒಟ್ಟು ಐದು ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿದ್ದು, ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ.ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸೇವೆ ಆರಂಭ: ಟಿಕೆಟ್ ದರ ಕೇವಲ 10 ರೂ.

ಮೊದಲು ರೈಲು ಬೆಳಗ್ಗೆ 4.45ಕ್ಕೆ ಕ್ರಾಂತಿವೀರ ರೈಲು ನಿಲ್ದಾಣದಿಂದ ಹೊರಡಲಿದ್ದು, ಬೆಳಗ್ಗೆ 5.50ಕ್ಕೆ ಏರ್ ಪೋರ್ಟ್ ತಲುಪಲಿದೆ. ಒಂದು ಕಡೆಯಿಂದ ಸಂಚರಿಸಲು 10ರಿಂದ 15 ರೂ.ಶುಲ್ಕವಿರಲಿದೆ. ಇದರಿಂದಾಗಿ ಏರ್ ಪೋರ್ಟ್ ಗೆ ತಲುಪಲು ಟ್ಸಾಕ್ಸಿ(ಸುಮಾರು 700 ರಿಂದ 1000ರು) ಮತ್ತು ವಾಯು ವಜ್ರ ಬಸ್ಸುಗಳಿಗಾಗಿ ದುಬಾರಿ ಮೊತ್ತ (250 ರಿಂದ 300ರು) ಪಾವತಿಸುತ್ತಿದ್ದ ಪ್ರಯಾಣಿಕರಿಗೆ ನೆಮ್ಮದಿ ದೊರೆತಂತಾಗಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯ ತಿಳಿಸಿದ್ದಾರೆ.

Bengaluru Airport train timings revised: When and how to get to KIA

ಇಂದಿನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸಂಚಾರ: ರೈಲು ನಿಲ್ದಾಣಕ್ಕೆ 12 ಬಸ್‌ಗಳ ಸೇವೆ ಇಂದಿನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು ಸಂಚಾರ: ರೈಲು ನಿಲ್ದಾಣಕ್ಕೆ 12 ಬಸ್‌ಗಳ ಸೇವೆ

ಕೆಂಪೇಗೌಡ ಏರ್‌ಪೋರ್ಟ್‌ಗೆ ರೈಲು, ವೇಳಾಪಟ್ಟಿ

ಕೆಐಎಎಲ್ ಕಡೆಗೆ ರೈಲು
ರೈಲು ಸಂಖ್ಯೆ ರೈಲು ಹೆಸರು ಯಾವ ನಿಲ್ದಾಣದಿಂದ ಹೊರಡುವ ಸಮಯ ತಲುಪುವ ಸಮಯ
06285 SBC-DHL DEMU ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಗರ(KSR City) 4:45 a.m. 5:50 a.m.
06287 YNK-DHL DEMU ಯಲಹಂಕ 7 a.m. 7:20 a.m
06279 YPR-BWT DEMU ಯಶವಂತಪುರ 8:30 a.m. 9:16 a.m.
06269 BNC-BWT DEMU ಕಂಟೋನ್ಮೆಂಟ್ 5:55 p.m. 6:50 p.m.
06283 SBC-DHL DEMU KSR City 9 p.m. 10:05 p.m.

*****

ಹೈಪರ್ ಲೂಪ್: ನಗರದಿಂದ 10 ನಿಮಿಷಕ್ಕೆ ವಿಮಾನನಿಲ್ದಾಣ ತಲುಪಿಹೈಪರ್ ಲೂಪ್: ನಗರದಿಂದ 10 ನಿಮಿಷಕ್ಕೆ ವಿಮಾನನಿಲ್ದಾಣ ತಲುಪಿ

ಕೆಐಎಎಲ್‌ನಿಂದ ರೈಲು
ರೈಲು ಸಂಖ್ಯೆ ರೈಲು ಹೆಸರು ಹೊರಡುವ ಸಮಯ ಯಾವ ನಿಲ್ದಾಣಕ್ಕೆ ತಲುಪುವ ಸಮಯ
06288 DHL-YNK DEMU 6:23 a.m. ಯಲಹಂಕ 6:50 a.m.
06284 DHL-BNC DEMU 7:52 a.m. ಕಂಟೋನ್ಮೆಂಟ್ 8:50 a.m.
06270 BWT-YPR DEMU 8:22 a.m. ಯಶವಂತಪುರ 9:25 a.m.
06280 BWT-SBC DEMU 6:00 p.m. KSR City 8:20 p.m.
06286 DHL-SBC DEMU 10:38 p.m. KSR City 11:55 p.m.
English summary
Bengaluru Airport train timings revised. Here are the details When and how to get to KIA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X