ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಐಎ: ಹೆಚ್ಚುವರಿ 500 ವಾಹನ ನಿಲುಗಡೆಗೆ ಪಾರ್ಕಿಂಗ್ ಸ್ಲಾಟ್

By Nayana
|
Google Oneindia Kannada News

ಬೆಂಗಳೂರು, ಜೂನ್ 15: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಒಂದೆಡೆ ಸಿಬ್ಬಂದಿಗಳಿಗೆ ಪ್ರತ್ಯೇಕ ಟರ್ಮಿನಲ್ ನಿರ್ಮಾಣ ಮಾಡಿದರೆ ಮತ್ತೊಂದೆಡೆ ವಾಹನ ನಿಲುಗಡೆಗೆ ಹೆಚ್ಚುವರಿ ಪಾರ್ಕಿಂಗ್ ನಿರ್ಮಿಸುವ ಸಿದ್ಧತೆಯನ್ನು ಮಾಡಿದೆ.

ಸುಮಾರು 500ಕ್ಕೂ ಹೆಚ್ಚು ವಾಹನ ನಿಲುಗಡೆ ಸಾಮರ್ಥ್ಯವಿರುವ ನೂತನ ಪಾರ್ಕಿಂಗ್ ಸ್ಲಾಟ್‌ ನಿರ್ಮಿಸಲಾಗುತ್ತಿದೆ. ಈಗಿರುವ ಪಾರ್ಕಿಂಗ್ ಸ್ಲಾಟ್‌ಗಳ ಪಕ್ಕದಲ್ಲಿಯೇ ನೂತನವಾಗಿ ಒಟ್ಟು 16ಸಾವಿರ ಚದರ ಮೀಟರ್ ಜಾಗದಲ್ಲಿ ನೂತನ ಪಾರ್ಕಿಂಗ್ ಸ್ಲಾಟ್ ನಿರ್ಮಾಣವಾಗಲಿದ್ದು, ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಯಾಂತ್ರೀಕೃತ ವ್ಯವಸ್ಥೆಯ ಪಾರ್ಕಿಂಗ್ ಸ್ಲಾಟ್ ಕಾಮಗಾರಿ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.

ಬೆಂಗಳೂರು ಏರ್‌ಪೋರ್ಟ್‌: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್ ಬೆಂಗಳೂರು ಏರ್‌ಪೋರ್ಟ್‌: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್

ಏರ್‌ಪೋರ್ಟ್ ಆವರಣದಲ್ಲಿ ಪಿ 1, ಪಿ2, ಪಿ3 ಮತ್ತು ಪಿ4 ಹೆಸರಿನಲ್ಲಿ ಪಾರ್ಕಿಂಗ್ ಸ್ಲಾಟ್‌ಗಳಿವೆ. ಇಲ್ಲಿ ಒಟ್ಟು ಎರಡೂವರೆ ಸಾವಿರದಷ್ಟು ಕಾರುಗಳನ್ನು ಏಕಕಾಲದಲ್ಲಿ ನಿಲುಗಡೆ ಮಾಡಬಹುದಾಗಿದೆ. ಆದರೆ ಈ ಜಾಗ ಸಾಲುತ್ತಿಲ್ಲ. ಬೇಡಿಕೆ ಹೆಚ್ಚಿರುವ ಕಾರಣ ಪಿ 4ಗೆ ಹೊಂದಿಕೊಂಡಂತೆ ಪಿ 5 ಪಾರ್ಕಿಂಗ್ ಸ್ಲಾಟ್ ನಿರ್ಮಾಣವಾಗಲಿದೆ. ಈಗಿರುವ ವ್ಯವಸ್ಥೆಯಂತೆ ಯಾಂತ್ರಿಕೃತ ಟಿಕೆಟಿಂಗ್ ವ್ಯವಸ್ಥೆ ಇರಲಿದೆ.

Bengaluru Airport to construct additional parking slot soon

ಓಲಾ, ಊಬರ್, ಮೆರು, ಕೆಎಸ್‌ಟಿಡಿಸಿ ಸೇರಿದಮತೆ ದ್ವಿಚಕ್ರ ವಾಹನ, ಕಾರು, ಮಿನಿ ಬಸ್, ಬಸ್‌ಗಳನ್ನು ಲಭ್ಯವಿರುವ ಪಾರ್ಕಿಂಗ್ ಸ್ಲಾಟ್‌ನಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಇಲ್ಲಿ ಅಂಗವಿಕಲರಿಗೆಂದು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅದರಲ್ಲೇ ದೀರ್ಘಾವಧಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅದರಲ್ಲೇ ದೀರ್ಘಾವಧಿ ಪಾರ್ಕಿಂಗ್ ಮಾಡಲು ಕೂಡ ಅವಕಾಸವಿದೆ. ಅಪ್ಲಿಕೇಷನ್ ಆಧರಿತ ಕ್ಯಾಬ್‌ಗಳ ಪಾರ್ಕಿಂಗ್ ಪ್ರತ್ಯೇಕ ವಲಯ ಕೂಡಾ ಇದೆ.

English summary
Bengaluru International Airport Limited to construct a parking slot with capacity of 500 car parking at Kempegowda International Airport soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X