• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರ್ ಪೋರ್ಟ್ ರೈಲ್ವೆ ನಿಲ್ದಾಣ ಯಾವ ಸೀಮೆ ಉಡುಗೊರೆ?

|

ಬೆಂಗಳೂರು, ಆಗಸ್ಟ್.18: ಬೆಂಗಳೂರಿನ ಕೇಂದ್ರ ಭಾಗ ಮೆಜೆಸ್ಟಿಕ್ ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸಲು ವಿಶೇಷ ರೈಲ್ವೆ ಮಾರ್ಗವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯೆಲ್ ಟ್ವೀಟ್ ಮಾಡಿದ್ದರು.

   ಗಣೇಶ ಚತುರ್ಥಿಯಂದು ಕರೆನ್ಸಿ ನೋಟು ಬಿಡುಗಡೆ- ವಿವಾದಿತ ಸ್ವಾಮೀಜಿ ಘೋಷಣೆ | Oneindia Kannada

   ಯಾವುದೇ ತಾರ್ಕಿಕ ಕಾರಣವಿಲ್ಲದೇ ಯೋಜನೆಯ ಕಾಮಗಾರಿಯಲ್ಲಿ ವಿಳಂಬವಾಗಿರುವ ಅಂಶವನ್ನು ಕೆಲವು ನೆಟ್ಟಿಗರು ಗುರುತಿಸಿದ್ದಾರೆ. ಇನ್ನು, ಕೆಲವರು ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ರೈಲ್ವೆ ನಿಲ್ದಾಣವನ್ನು ನಿರ್ಮಿಸಿದೆಯೇ ಹೊರತೂ ರೈಲ್ವೆ ಮಾರ್ಗವನ್ನಲ್ಲ ಎನ್ನುವುದನ್ನು ಗುರುತುಪಡಿಸಿದ್ದಾರೆ.

   ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು 30 ರೂ. ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗಲು 30 ರೂ.

   ಬೆಂಗಳೂರಿನಲ್ಲಿ ಏರ್ ಪೋರ್ಟ್ ಗೆ ಸಂಚರಿಸುವ ಪ್ರಯಾಣಿಕರಿಗೆ ರೈಲ್ವೆ ಉಡುಗೊರೆಯನ್ನು ನೀಡಲಾಗುತ್ತಿದೆ. ದಶಕಗಳ ಬೇಡಿಕೆಯನ್ನು ಕೇಂದ್ರ ಸರ್ಕಾರವು ಇದೀಗ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದರಿಂದ ಮೆಜೆಸ್ಟಿಕ್ ನಿಂದ ಏರ್ ಪೋರ್ಟ್ ಗೆ ತಲುಪುವ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ಪ್ರಯಾಣಿಕರು ಪಾರಾಗಲಿದ್ದಾರೆ. ಆರಾಮವಾಗಿ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರು ಏರ್ ಪೋರ್ಟ್ ತಲುಪಲು ಸಾಧ್ಯವಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯೆಲ್ ಟ್ವೀಟ್ ಮಾಡಿದ್ದರು.

   ಕೇಂದ್ರ ಸಚಿವರಿಂದ ಕಾಮಗಾರಿಯ ವಿಡಿಯೋ ಟ್ವೀಟ್

   ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ನಿರ್ಮಿಸಿದ ರೈಲ್ವೆ ಸೇವೆಯ ಕುರಿತು ಮಾಹಿತಿಯುಳ್ಳ ವಿಡಿಯೋವೊಂದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೊಯೆಲ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಈ ವಿಡಿಯೋ ಪೋಸ್ಟ್ ನಲ್ಲಿಯೇ ರೈಲ್ವೆ ನಿಲ್ದಾಣದ ಕಾಮಗಾರಿ ಹೇಗೆ ನಡೆಯಿತು ಎನ್ನುವುದರ ಬಗ್ಗೆ ಸವಿವರವಾಗಿ ಹೇಳಲಾಗಿತ್ತು.

   ರೈಲ್ವೆಯಲ್ಲಿ ಆರಾಮವಾಗಿ ಏರ್ ಪೋರ್ಟ್ ತಲುಪಲು ಸಾಧ್ಯವೇ?

   ರೈಲ್ವೆಯಲ್ಲಿ ಆರಾಮವಾಗಿ ಏರ್ ಪೋರ್ಟ್ ತಲುಪಲು ಸಾಧ್ಯವೇ?

   ನಗರದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಅನುಕೂಲವಾಗುವಂತೆ ರೈಲ್ವೆ ನಿಲ್ದಾಣವನ್ನು ಸ್ಥಾಪಿಸಲಾಗಿದೆ. ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ಈ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಮಾಡಿದೆ. ಆದರೆ ರೈಲ್ವೆನಲ್ಲಿ ಮೆಜೆಸ್ಟಿಕ್ ನಿಂದ ಏರ್ ಪೋರ್ಟ್ ಗೆ ಆರಾಮವಾಗಿ ಸಂಚರಿಸಲು ಸಾಧ್ಯವೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಮಾರ್ಗ ಮಧ್ಯದ ದೇವನಹಳ್ಳಿ-ಯಲಹಂಕ ವಿಭಾಗದಲ್ಲಿ ವಿದ್ಯುತೀಕರಣ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿಗಾವಹಿಸಬೇಕಿದೆ. ಹಾಗಾದಲ್ಲಿ ಮಾತ್ರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸಿಟಿಜನ್ ಫಾರ್ ಸಿಟಿಜನ್ ಸಂಸ್ಥೆಯ ರಾಜಕುಮಾರ್ ದುಗರ್ ತಿಳಿಸಿದ್ದಾರೆ.

   ಕಂಟೇನ್ಮೆಂಟ್, ತುಮಕೂರಿಗೂ ರೈಲ್ವೆ ವ್ಯವಸ್ಥೆ ಕಲ್ಪಿಸಬೇಕು

   ಕಂಟೇನ್ಮೆಂಟ್, ತುಮಕೂರಿಗೂ ರೈಲ್ವೆ ವ್ಯವಸ್ಥೆ ಕಲ್ಪಿಸಬೇಕು

   ಬೆಂಗಳೂರು ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಇದರ ಜೊತೆಗೆ ರೈಲ್ವೆ ಮಾರ್ಗದಲ್ಲಿ ಏರ್ ಪೋರ್ಟ್ ನಿಂದ ಕೇವಲ ಮೆಜೆಸ್ಟಿಕ್ ಗೆ ರೈಲ್ವೆ ವ್ಯವಸ್ಥೆ ಕಲ್ಪಿಸಿದರೆ ಸಾಲದು. ಬದಲಿಗೆ ಬೆಂಗಳೂರಿನ ಕಂಟೇನ್ಮೆಂಟ್ ರೈಲ್ವೆ ನಿಲ್ದಾಣ, ಹೊಸೂರು, ಬಂಗಾರಪೇಟೆ, ತುಮಕೂರಿಗೂ ರೈಲ್ವೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

   ದಶಕವಲ್ಲ 15 ವರ್ಷ ಎಂದು ನೆನಪಿಸಿದ ತಾರಾ ಕೃಷ್ಣಮೂರ್ತಿ

   ರೈಲ್ವೆ ನಿಲ್ದಾಣದ ಬೇಡಿಕೆಯು ಒಂದು ದಶಕದಲ್ಲ ಬದಲಿಗೆ 15 ವರ್ಷಗಳಷ್ಟು ಹಳೆಯದ್ದು ಎಂದು ಸಿಟಿಜನ್ ಫಾರ್ ಬೆಂಗಳೂರು ಸಹ-ಸಂಸ್ಥಾಪಕರಾದ ತಾರಾ ಕೃಷ್ಣಮೂರ್ತಿ ತಿಳಿಸಿದ್ದಾರೆ. ಸರ್ಕಾರದ ವೈಫಲ್ಯದಿಂದ 15 ವರ್ಷಗಳಿಂದ ಕಾಯುತ್ತಿದ್ದರೂ ರೈಲ್ವೆ ನಿಲ್ದಾಣ ಇಂದಿಗೂ ಉದ್ಘಾಟನೆಯಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಕೇಂದ್ರ ಸಚಿವರು ಟ್ವೀಟ್ ಮಾಡಿರುವ ವಿಡಿಯೋ ಕನ್ನಡ ಅಥವಾ ಇಂಗ್ಲೀಷ್ ನಲ್ಲೂ ಇಲ್ಲ. ಹಿಂದಿಯಲ್ಲಿ ವಿಡಿಯೋವನ್ನು ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

   English summary
   Bengaluru Airport Station A Gift From Railways; Netizens Reactions To Piyush Goyal Tweet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X