ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ವಿ. ನಿಲ್ದಾಣದಲ್ಲಿ ಚೆಕ್ ಇನ್ ಸಮಸ್ಯೆ ಇನ್ನಿಲ್ಲ!

By Mahesh
|
Google Oneindia Kannada News

ಬೆಂಗಳೂರು, ಮೇ.15: ಬೆಂಗಳೂರಿನ ಯಾವುದೇ ಮೂಲೆಯಿಂದ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪುವುದೇ ಕಷ್ಟ. ಟೋಲ್ ಕಟ್ಟಿ ಹಾಗೂ ಹೀಗೂ ತಲುಪಿದರೂ ಚೆಕ್ ಇನ್ ಸಮಸ್ಯೆ ಎದುರಾಗುತ್ತದೆ. ಅದರೆ, ಇನ್ಮುಂದೆ ಕೆಐಎಎಲ್ ನಲ್ಲಿ ಚೆಕ್ ಇನ್ ಸಮಸ್ಯೆ ಇರುವುದಿಲ್ಲ.

ಕೆಂಪೇಗೌಡ ಅಂತಾರಾಷ್ಟೀಯ ವಿಮಾನ ನಿಲ್ದಾಣ(ಕೆಐಎಎಲ್) ನಲ್ಲಿ ಹೊಸ ಚೆಕ್ ಇನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಚೆನ್ ಇನ್ ಗಾಗಿ ಪ್ರಯಾಣಿಕರು ಕ್ಯೂ ನಿಲ್ಲುವುದು ತಪ್ಪುತ್ತದೆ.

ಹೊಸ ವ್ಯವಸ್ಥೆಯಿಂದ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ಗಳು ಹಾಗೂ ಬ್ಯಾಗೇಜ್ ಟ್ಯಾಗ್ ಗಳನ್ನು ತಾವೇ ಸುಲಭವಾಗಿ ಪಡೆದುಕೊಳ್ಳಬಹುದು.

Bengaluru Airport(KIAL) to have self check-in

ಚೆಕ್ ಇನ್ ಸಮಸ್ಯೆಗೆ ತಂತ್ರಜ್ಞಾನದ ನೆರವು ನೀಡಲು ಜಾಗತಿಕ ವಿಮಾನಯಾನ ಐಟಿ ಸಂಸ್ಥೆ SITA ಮುಂದೆ ಬಂದಿದೆ. SITA ಸಂಸ್ಥೆಯೊಂದಿಗೆ ಬಿಐಎಎಲ್ ಏಳು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಸೆಲ್ಫ್ ಸರ್ವೀಸ್ ಚೆಕ್ ಇನ್ ಕಿಯೋಸ್ಕ್ ಗಳನ್ನು ಸ್ಥಾಪಿಸಿ, ನಿಯಂತ್ರಿಸುವ ಹೊಣೆ ಈ ಸಂಸ್ಥೆ ಮೇಲಿರುತ್ತದೆ ಎಂದು ಬಿಐಎಲ್ ವಕ್ತಾರರು ಹೇಳಿದ್ದಾರೆ.

ಸೆಲ್ಫ್ ಚೆಕ್ ಇನ್ ಹಾಗೂ ಬ್ಯಾಗೇಜ್ ಟ್ಯಾಗ್ ಎರಡನ್ನು ನಿಭಾಯಿಸಲು ಈ ಸಂಸ್ಥೆ ಸಮರ್ಥವಾಗಿದೆ. ಸಂಸ್ಥೆ ಇದುವರೆವಿಗೂ ನೀಡಿರುವ ಪ್ರಾತ್ಯಕ್ಷಿಕೆಯಿಂದ ತೃಪ್ತಿ ತಂದಿದೆ. ಕಾಮನ್ ಯೂಸ್ ಸೆಲ್ಫ್ ಸರ್ವೀಸ್ ಕಿಯೋಸ್ಕ್(ಸಿಯುಎಸ್ಎಸ್) ನಿಂದ ಬೋರ್ಡಿಂಗ್ ಪಾಸ್ ಹಾಗೂ ಬ್ಯಾಗೇಜ್ ಟ್ಯಾಗ್ ಪಡೆಯುವುದು ಸುಲಭವಾಗಲಿದೆ ಎಂದು ಬಿಐಎಎಲ್ (ಕಾರ್ಯ ನಿರ್ವಹಣೆ) ಅಧ್ಯಕ್ಷ ಹರಿ ಮರಾರ್ ಹೇಳಿದ್ದಾರೆ. ಈ ಹೊಸ ವ್ಯವಸ್ಥೆ ಜಾರಿಗೊಳ್ಳಲು ಜೂನ್ ತಿಂಗಳಿನಿಂದ ಜಾರಿಗೊಳ್ಳುವ ನಿರೀಕ್ಷೆಯಿದೆ. (ಪಿಟಿಐ)

English summary
Passengers flying out of Kempegowda International Airport will no longer have to stand in long queues for check-in as the airport operator plans to implement a system that allows passengers to print their own boarding passes as well as baggage tags from June.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X