ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶಕ್ಕೆ ಮಾದರಿ

|
Google Oneindia Kannada News

ಬೆಂಗಳೂರು, ಮಾರ್ಚ್ 23: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲೇ ಎರಡು ರನ್‌ವೇಗಳಿರುವ ಮೊದಲ ವಿಮಾನ ನಿಲ್ದಾಣ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಮಾರ್ಚ್ 25 ರಿಂದ ಎರಡೂ ರನ್‌ವೇ ಬಳಕೆಗೆ ಲಭ್ಯವಾಗಲಿದೆ. 2020 ಜೂನ್‌ 22ರಿಂದ ಕಾಯಾಚರಣೆ ನಿಲ್ಲಿಸಲಾಗಿರುವ ಉತ್ತರ ರನ್‌ವೇಯ ಕಾಮಗಾರಿ ಪ್ರಗತಿಯಲ್ಲಿದೆ.

ಸಂಪೂರ್ಣ ಖಾಸಗೀಕರಣದತ್ತ ಬೆಂಗಳೂರು ವಿಮಾನ ನಿಲ್ದಾಣ: ಷೇರು ಮಾರಾಟಕ್ಕೆ ಮುಂದಾದ ಕೇಂದ್ರಸಂಪೂರ್ಣ ಖಾಸಗೀಕರಣದತ್ತ ಬೆಂಗಳೂರು ವಿಮಾನ ನಿಲ್ದಾಣ: ಷೇರು ಮಾರಾಟಕ್ಕೆ ಮುಂದಾದ ಕೇಂದ್ರ

ರನ್‌ವೇಗೆ ಹೊಸದಾಗಿ ಮೇಲ್ಮೈ ಹಾಸು ಹಾಕುವ ಜತೆಗೆ ಎಲ್‌ಇಡಿ ರನ್‌ವೇ ಸೆಂಟರ್‌ ಲೈಟ್‌ಗಳು ಮತ್ತು ರನ್‌ವೇ ಕೊನೆಯ ಲೈಟ್‌ಗಳ್ನು ಅಳವಡಿಸುವುದು ನವೀಕರಣ ಕಾರ್ಯದಲ್ಲಿಸೇರಿವೆ. ಕಡಿಮೆ ದೃಶ್ಯ ಸಾಧ್ಯತೆ ಮತ್ತು ಪ್ರತಿಕೂಲ ಹವಾಮಾನ ಸ್ಥಿತಿಗಳಲ್ಲಿಕಾರ್ಯಾಚರಣೆ ನಡೆಸಲು ಅಗತ್ಯ ಸಡಿಲತೆಯನ್ನು ಈ ವಿಸ್ತರಣಾ ಕಾರ್ಯಗಳು ಸಾದರಪಡಿಸಲಿವೆ .

 Bengaluru Airport Become The First Airport In South India To Have 2 Independent Parallel Runways

ವಿಮಾನ ನಿಲ್ದಾಣ ಪ್ರದೇಶದಲ್ಲಿಹವಾಮಾನ ಸ್ಥಿತಿ ಅಧ್ಯಯನ ನಡೆಸಲು ಜವಾಹರ್‌ಲಾಲ್‌ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಜತೆಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ 2019ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.

ವಿಮಾನ ನಿಲ್ದಾಣ ಪ್ರದೇಶದ ಮೇಲೆ ವಿಕಿರಣಾತ್ಮಕ ಮಂಜು ಕವಿಯುವುದನ್ನು ಮುಂಚಿತವಾಗಿ ತಿಳಿಸುವ ಸಾಮರ್ಥ್ಯವಿರುವ ಸಂಖ್ಯಾತ್ಮಕ ಅನುಕರಣಾ ಉಪಕರಣವನ್ನು ಅಭಿವೃದ್ಧಿಪಡಿಸಲು ಈ 4 ವರ್ಷಗಳ ಅಧ್ಯಯನ ಪ್ರಸ್ತುತ ನಡೆಯುತ್ತಿದೆ.

ಇದರೊಂದಿಗೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ದೇಶದಲ್ಲಿ ಕ್ಯಾಟ್‌-3ಬಿ ರನ್‌ವೇ ಹೊಂದಿರುವ ದಕ್ಷಿಣ ಭಾರತದ ಏಕೈಕ ಹಾಗೂ ದೇಶದ 6ನೇ ವಿಮಾನ ನಿಲ್ದಾಣವಾಗಿದೆ.

Recommended Video

ಮಹಾರಾಷ್ಟ್ರಕ್ಕೆ ತೆರಳುವ ಮತ್ತು ಬೆಳಗಾವಿಗೆ ಬರುವ 120 ಬಸ್‌ಗಳ ಸಂಚಾರ ತಾತ್ಕಾಲಿಕ ಸ್ಥಗಿತ | Oneindia Kannada

ಪರೀಕ್ಷಾರ್ಥ ಹಾಗೂ ಮಾಪನಾಂಕ ನಿರ್ಣಯದ ಹಾರಾಟಗಳು ಮತ್ತು ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರ(ಡಿಜಿಸಿಎ)ದಿಂದ ನಿರೀಕ್ಷಣೆಗಳ ಯಶಸ್ವಿ ಮುಕ್ತಾಯದ ನಂತರ ರನ್‌ವೇ ಕಾರ್ಯಾಚರಣೆ ನಡೆಸಲು ನಿಯಂತ್ರಕ ಒಪ್ಪಿಗೆಗಳನ್ನು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಪಡೆದುಕೊಂಡಿದೆ.

English summary
Kempegowda International Airport will become the first airport in South India to have two independent parallel runways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X