ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೃದ್ಧರನ್ನು ಬಲಿ ತೆಗೆದುಕೊಂಡ ಫೋರ್ಟಿಸ್ ಆಸ್ಪತ್ರೆ ಲಿಫ್ಟ್

|
Google Oneindia Kannada News

ಬೆಂಗಳೂರು, ಜು. 30: ಡಯಾಲಿಸಿಸ್ ಗೆಂದು ಹೆಂಡತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವಯೋವೃದ್ಧ ಆಕಸ್ಮಿಕವಾಗಿ ಲಿಫ್ಟ್ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆ ಆವರಣದಲ್ಲಿ ದುರ್ಘಟನೆ ಸಂಭವಿಸಿದೆ.

80 ವರ್ಷದ ಸಚ್ಚಿದಾನಂದ ಮೂರ್ತಿ ದಾರುಣ ಸಾವಿಗೀಡಾದವರು. ತಮ್ಮ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಸಚ್ಚಿದಾನಂದ ಮೂರ್ತಿ ಮೂರನೇ ಮಹಡಿಗೆ ತೆರಳಲು ಲಿಫ್ಟ್ ಪ್ರವೇಶಿಸಲು ಮುಂದಾಗಿದ್ದಾರೆ. ಒಂದನೇ ಮಹಡಿಯಲ್ಲಿದ್ದ ಅವರು ಲಿಫ್ಟ್ ಬಟನ್ ಒತ್ತಿದ್ದು ಲಿಫ್ಟ್ ತೆರೆದುಕೊಂಡಿದೆ. ಆದರೆ ಈ ವೇಳೆ ಲಿಫ್ಟ್ ಮೂರನೇ ಮಹಡಿಯಲ್ಲೇ ಇತ್ತು.[ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ: ವಿಡಿಯೋ]

death

ಘಟನೆ ಗೊತ್ತಾಗಿದ್ದು ಹೇಗೆ?
ಬುಧವಾರ ಬೆಳಗ್ಗೆಯೇ ದುರ್ಘಟನೆ ಸಂಭವಿಸಿದೆ. ಸಂಜೆ ಸಚ್ಚಿದಾನಂದಮೂರ್ತಿ ಕಾಣದಿದ್ದಾಗ ಆಸ್ಪತ್ರೆ ಸಿಬ್ಬಂದಿ ಮತ್ತು ಕುಟುಂಬದವರು ಹುಡುಕಾಟ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಅವಲೋಕಿಸಿದಾಗ ಮೂರ್ತಿ ಲಿಫ್ಟ್ ಪ್ರವೇಶಿಸಿರುವುದು ಕಂಡುಬಂದಿದೆ. ನಂತರ ಲಿಫ್ಟ್ ನ ತಳಭಾಗದ ಗುಂಡಿಯಲ್ಲಿ ಮೂರ್ತಿ ಅವರ ಶವ ಪತ್ತೆಯಾಗಿದೆ.[ಗಂಡನ ಕಳೆದುಕೊಂಡ ಮಹಿಳೆಯ ನೋವಿನ ಪತ್ರ]

ಆಕಸ್ಮಿಕವಾಗಿ ಕೆಳಕ್ಕೆ ಬಿದ್ದ ಮೂರ್ತಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೂರ್ತಿ ಕುಟುಂಬದವರು ಆಸ್ಪತ್ರೆಯ ಮೇಲೆ ದೂರು ದಾಖಲಿಸಿದ್ದಾರೆ. ಜ್ಞಾನಭಾರತಿ ಪೊಲೀಸರು ಐಪಿಸಿ 304 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

English summary
Faulty lift in Fortis hospital in Nagarabavi, Bengaluru has taken life of a elderly person. The tragedy happened when a 80-year-old man had come to hospital with his ailing wife fell into the pit when door opened. The door opened at 3rd floor but lift remained at 1st floor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X