ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದ ಬೆಂಗಳೂರಿಗರು

By Mahesh
|
Google Oneindia Kannada News

ಬೆಂಗಳೂರು, ಫೆ. 05: ತಾಂಜಾನಿಯಾ ಮೂಲದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸುದ್ದಿವಾಹಿನಿಗಳು ನೀಡುತ್ತಿರುವ ಪ್ರಾಮುಖ್ಯತೆ ಹಾಗೂ ಬೆಂಗಳೂರು ಮಹಿಳೆಯರಿಗೆ ಅಸುರಕ್ಷಿತ ಎಂದು ಟ್ಯಾಗ್ ಹಾಕಿರುವುದನ್ನು ಬೆಂಗಳೂರಿಗರು ಖಂಡಿಸಿದ್ದಾರೆ.

'ಘಟನೆ ಬಗ್ಗೆ ನಮಗೂ ಖೇದವಿದೆ. ಆದರೆ, ಬೆಂಗಳೂರಿನ ಮಾನ ಕಳೆಯಲು ಸುದ್ದಿವಾಹಿನಿಗಳಿಗೆ ಹಕ್ಕಿಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗುಡುಗಿದ್ದಾರೆ. [ವಿದ್ಯಾರ್ಥಿನಿ ಹಲ್ಲೆ: ಪರಂ ವಿರುದ್ಧ ಟ್ವಿಟ್ಟರ್ ಮಂದಿ ಗರಂ]

ಘಟನೆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ನಂತರ ಪ್ರಮುಖ ಸುದ್ದಿವಾಹಿನಿಗಳು ಬೆಂಗಳೂರನ್ನು ಅಸುರಕ್ಷಿತ ನಗರ ಎಂದು ಸ್ವಯಂ ಘೋಷಿಸಿ, ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರನ್ನು ವಿಲನ್ ಗಳ ರೀತಿಯಲ್ಲಿ ಬಿಂಬಿಸತೊಡಗಿದ್ದವು.[ಸೋನಿಯಾಜೀ, ಸಿದ್ದರಾಮಯ್ಯ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿ]

ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ಸತ್ಯವನ್ನು ಮರೆಮಾಚುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ತಾಂಜಾನಿಯಾದ ಮಹಿಳೆಯನ್ನು ಅರೆ ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವುದರ ಬಗ್ಗೆ, ಜನಾಂಗೀಯ ನಿಂದನೆ ಬಗ್ಗೆ ಯಾವುದೇ ವರದಿ ಬಂದಿಲ್ಲ. ಅದಕ್ಕೂ ಮುನ್ನವೇ ರಾಷ್ಟ್ರೀಯ ಮಾಧ್ಯಮಗಳು ವಕೀಲರು, ಜಡ್ಜ್ ಗಳಂತೆ ನಿರ್ಣಯ ಹೊರಡಿಸುತ್ತಿರುವುದರ ಬಗ್ಗೆ ಟೀಕಿಸಲಾಗಿದೆ.

ಇಷ್ಟಕ್ಕೂ ಘಟನೆ ಬಗ್ಗೆಯೇ ಗೊಂದಲವಿದೆ

ಇಷ್ಟಕ್ಕೂ ಘಟನೆ ಬಗ್ಗೆಯೇ ಗೊಂದಲವಿದೆ

ಸೂಡನ್ ಮೂಲದ ವಿದ್ಯಾರ್ಥಿಗಳು ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ 35 ವರ್ಷ ವಯಸ್ಸಿನ ಪಾದಾಚಾರಿ ಮಹಿಳೆಯನ್ನು ಬಲಿ ಪಡೆದಿದ್ದರು. ಇದೇ ಸಮಯಕ್ಕೆ ಅಲ್ಲಿಗೆ ಬಂದ ತಾಂಜಾನಿಯಾ ಮೂಲದ ವಿದ್ಯಾರ್ಥಿನಿ ಮೇಲೆ ಆಕ್ರೋಶಭರಿತ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆ ಎಂಬುದು ಸುದ್ದಿ. ಆದರೆ, ಅಪಘಾತ ಮಾಡಿದವರು ಕುಡಿದಿದ್ದರೆ ಇಲ್ಲವೇ? ತಾಂಜಾನಿಯಾ ವಿದ್ಯಾರ್ಥಿನಿ ಮೇಲೆ ಜನಾಂಗೀಯ ನಿಂದನೆ, ಅರೆ ಬೆತ್ತಲೆ ಮೆರವಣಿಗೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ಆಫ್ರಿಕಾ ಮೂಲದವರು ಕರ್ನಾಟಕದಲ್ಲಿದ್ದಾರೆ

ಆಫ್ರಿಕಾ ಮೂಲದವರು ಕರ್ನಾಟಕದಲ್ಲಿದ್ದಾರೆ

ಆಫ್ರಿಕಾ ಮೂಲದವರು ಕರ್ನಾಟಕದಲ್ಲಿ ಅನಾದಿ ಕಾಲದಿಂದ ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಿ ಜನಾಂಗದವರು ಆಫ್ರಿಕಾ ಮೂಲದವರು ಎಂಬುದು ಎಲ್ಲರಿಗೂ ತಿಳಿದಿದೆ. ಕರ್ನಾಟಕದಲ್ಲಿ ವರ್ಣಬೇಧ ನೀತಿ, ಜನಾಂಗೀಯ ನಿಂದನೆ ಪ್ರಕರಣಗಳು ಕರ್ನಾಟಕದಲ್ಲಿ ತೀರಾ ವಿರಳ. ಆಫ್ರಿಕನ್ ಸಮುದಾಯದ ಕೆಲ ಪುಂಡ ವಿದ್ಯಾರ್ಥಿಗಳ ರಂಪಾಟದ ಬಗ್ಗೆ ಸ್ಥಳೀಯರು ಅನೇಕ ಬಾರಿ ದೂರಿದ್ದರು ಪೊಲೀಸರು ಕ್ರಮ ಜರುಗಿಸಿರಲಿಲ್ಲ. ಈ ಎಲ್ಲಾ ಕಾರಣಗಳು ಹಲ್ಲೆ ಮಾಡಲು ಕಾರಣ ಇರಬಹುದು.

ಬೆಂಗಳೂರಿನ ಬಗ್ಗೆ ಇಲ್ಲಸಲ್ಲದ್ದು ವರದಿ ಮಾಡಬೇಡಿ

ಬೆಂಗಳೂರಿನ ಬಗ್ಗೆ ಇಲ್ಲಸಲ್ಲದ್ದು ವರದಿ ಮಾಡಬೇಡಿ, Racism ಪದದ ಅರ್ಥ ಮೊದಲು ತಿಳಿದುಕೊಂಡು ನಂತರ ಬೆಂಗಳೂರನ್ನು ದೂಷಿಸಿ.

ಅಸಲಿ ಸಮಸ್ಯೆ ಬಗ್ಗೆ ಸರ್ಕಾರಕ್ಕೂ ಅರಿವಿದೆ

ಅಸಲಿ ಸಮಸ್ಯೆ ಬಗ್ಗೆ ಸರ್ಕಾರಕ್ಕೂ ಅರಿವಿದೆ. ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲೆ ಇರುವ ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಆಫ್ರಿಕನ್ ವಿದ್ಯಾರ್ಥಿಗಳ ಪುಂಡಾಟಿಕೆ ಬಗ್ಗೆ ದೂರು

ಆಫ್ರಿಕನ್ ವಿದ್ಯಾರ್ಥಿಗಳ ಪುಂಡಾಟಿಕೆ ಬಗ್ಗೆ ಗಣಪತಿ ಪುರ ಸೇರಿದಂತೆ ಸ್ಥಳೀಯ ನಿವಾಸಿಗಳು ದೂರು ಸಲ್ಲಿಸಿದ್ದರು. ಆದರೆ, ಯಾವುದೇ ಕ್ರಮ ಜರುಗಿಸಿಲ್ಲ. ಈ ಹಿಂದೆ ನೈಜೀರಿಯಾ ಮೂಲದ ಮಹಿಳೆಯರಿಬ್ಬರು ಬಿಎಂಟಿಸಿ ಬಸ್ ಕಂಡೆಕ್ಟರ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚಿನ ಸುದ್ದಿ ಪ್ರಸಾರವಾಗಲೇ ಇಲ್ಲ.

English summary
Bengalurians blast media for 'one-sided' coverage of Tanzanian girl assault, vent anger on social media.Many national media covering only one side of the incident, completely ignoring the other versions of the locals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X