ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲಿವೇಟೆಟ್‌ ಕಾರಿಡಾರ್‌ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಒಂದು ಅಭಿಯಾನ

By Nayana
|
Google Oneindia Kannada News

ಬೆಂಗಳೂರು, ಜುಲೈ 31: ರಾಜ್ಯ ಸರ್ಕಾರದ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಈ ಕುರಿತು ಫೇಸ್‌ಬುಕ್‌ನಲ್ಲಿ ಎಲೆವೇಟೆಡ್‌ ಬೇಡ ಸಮೂಹ ಸಾರಿಗೆ ಬೇಕು ಎನ್ನುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಎಲಿವೇಟೆಡ್‌ ಕಾರಿಡಾರ್‌ನಿಂದ ನಗರದ ವಾತಾವರಣ ಮೇಲೆ ಎಷ್ಟು ದುಷ್ಪರಿಣಾಮ ಉಂಟಾಗಲಿದೆ ಎನ್ನುವುದರ ಕುರಿತು ಗಮನ ಹರಿಸಬೇಕಿದೆ.ಉಪನಗರ ರೈಲು, ಬಸ್‌ ಸಂಪರ್ಕ ವ್ಯವಸ್ಥೆ, ಮೆಟ್ರೋ ರೈಲನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ, ಈ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯನ್ನು ಕೈಬಿಟ್ಟು ಸಮೂಹ ಸಾರಿಗೆಯತ್ತ ಹೆಚ್ಚು ಗಮನ ನೀಡಿ ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ಎಲಿವೇಟೆಡ್ ಕಾರಿಡಾರ್‌ಗೆ ಎಎಪಿ ವಿರೋಧ ಬೆಂಗಳೂರು ಎಲಿವೇಟೆಡ್ ಕಾರಿಡಾರ್‌ಗೆ ಎಎಪಿ ವಿರೋಧ

ಸಿಟಿಜನ್‌ ಫಾರ್‌ ಬೆಂಗಳೂರು ಸಂಸ್ಥೆ ಒತ್ತಾಯಿಸುತ್ತಿದ್ದು ಫೇಸ್‌ಬುಕ್‌ನಲ್ಲಿ ಅಭಿಯಾನ ಹಮ್ಮಿಕೊಂಡಿದೆ.ಕಾಂಕ್ರೀಟ್‌ ಸಾಕು, ಸಮೂಹ ಸಾರಿಗೆ ಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರನ್ನು ಆಹ್ರಹಿಸಿದ್ದಾರೆ.

Bengalureans launch Elevated Beda campaign in social media

ಸ್ಟೀಲ್‌ ಬ್ರಿಡ್ಜ್‌ ಬೇಡ ಎಂದು ಇದೇ ಸಂಸ್ಥೆಗಳು ಅಭಿಯಾನ ನಡೆಸಿದ್ದವು. ಕೊನೆಗೂ ಸ್ಟೀಲ್‌ ಬ್ರಿಡ್ಜ್‌ ಯೋಜನೆಯನ್ನು ಹಿಂದಿನ ಸರ್ಕಾರ ಕೈಬಿಟ್ಟಿತ್ತು. ಈಗ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೂ ವಿರೋಧ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಲಾಗಿದೆ.

ಕುಮಾರಸ್ವಾಮಿಯವರು ಸಾರ್ವಜನಿಕರ ಬಳಿ ಚರ್ಚೆ ನಡೆಸಬೇಕಿತ್ತು, ಆದರೆ ಹಾಗೆಯೇ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದು ಸರಿಯಲ್ಲ, ನಗರದಲ್ಲಿನ ಸಂಚಾರ ದಟ್ಟಣೆ ನಿವಾರಣೆಗಾಗಿ ಕಳೆದ ಹತ್ತಾರು ವರ್ಷಗಳಿಂದ ಮೇಲ್ಸೇತುವೆ, ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ರಸ್ತೆಗಳನ್ನು ವಿಸ್ತರಣೆ ಮಾಡುವ ಜತೆಗೆ ಹಲವೆಡೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಆದರೂ ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ ಎಂದು ಸಿಟಿಜನ್‌ ಫಾರ್‌ ಬೆಂಗಳೂರು ಫೋರಂನ ಸದಸ್ಯರು ತಿಳಿಸಿದ್ದಾರೆ.

English summary
Hundreds of citizens in Bangalore have launched a campaign 'Elevated Beda, Samooha sarige Beku' against proposed elevated corridor by the state government alleging the project will caused financial burden on the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X