ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ಪರಮೇಶ್ವರ ಝೀರೋ ಟ್ರಾಫಿಕ್ ದರ್ಬಾರಿಗೆ ಜನ ಹೈರಾಣ

|
Google Oneindia Kannada News

Recommended Video

ಜನರ ಕೆಂಗಣ್ಣಿಗೆ ಗುರಿಯಾದ ಜಿ.ಪರಮೇಶ್ವರ್ | Oneindia Kannada

ಬೆಂಗಳೂರು, ಜೂನ್ 28: ಉಪ ಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಮತ್ತೆ ಝೀರೋ ಟ್ರಾಫಿಕ್ ಬಳಸಿ ಜನರ ಕೆಂಗಣ್ಣಿಗೆ ಕಾರಣರಾಗಿದ್ದಾರೆ.

ಬೆಂಗಳೂರಲ್ಲಿ ಏನು ಇಲ್ಲದಿದ್ದರೂ ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಜನರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಅದಕ್ಕೆ ಇನ್ನಷ್ಟು ಪುಷ್ಠಿ ಎಂಬುವಂತೆ ಪರಮೇಶ್ವರ ಅವರು ಝೀರೋ ಟ್ರಾಫಿಕ್ ಮೂಲಕ ನಗರ ಸಂಚಾರ ಹೋಗಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದೆ.

ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯ ಬೇಕೇ ಬೇಕು ಎಂದ ಪರಮೇಶ್ವರ ಝೀರೋ ಟ್ರಾಫಿಕ್ ಸಂಚಾರ ಸೌಲಭ್ಯ ಬೇಕೇ ಬೇಕು ಎಂದ ಪರಮೇಶ್ವರ

ಪರಮೇಶ್ವರ ಅವರು ಆರ್‌ಟಿನಗರ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆಗೆಂದು ತೆರಳಿದ್ದರು. ಆ ಸಂದರ್ಭದಲ್ಲಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

Bengalureans are sufering from DCM Zero traffic

ಪರಮೇಶ್ವರ ಅವರು ಹೋಗಿ ಅರ್ಧ ಗಂಟೆಯಾದರೂ ಶಾಲಾ ವಾಹನ ಸಮೇತ ನಿಲ್ಲುವಂತೆ ಹೇಳಿದ್ದು ಜನರನ್ನು ಕೆರಳಿಸಿದೆ. ಅಷ್ಟೇ ಅಲ್ಲದೆ ಪರಮೇಶ್ವರ ಅವರ ಕಾರಿನ ಹಿಂದೆಯೇ ಸಾಲು ಸಾಲು ಕಾರುಗಳು ಬಂದು ಇನ್ನಷ್ಟು ಸಂಚಾರ ದಟ್ಟಣೆ ಆಗುವಂತೆ ಮಾಡಿದೆ.

ನಮಗೆ ರಸ್ತೆ ಅಗಲೀಕರಣ ಬೇಡ, ಸುಸಜ್ಜಿತವಾದ ರಸ್ತೆ ಬೇಕು, ಎಲ್ಲಿ ನೋಡಿದರೂ ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳು ತುಂಬಿ ಹೋಗಿದೆ, ಕಸದ ಸಮಸ್ಯೆ ವಿಪರೀತ ಕಾಡುತ್ತಿದೆ. ಅದನ್ನು ಮೊದಲು ಬಗೆಹರಿಸಿಕೊಡಿ ಆರ್‌ಟಿನಗರ ಪೊಲೀಸ್ ಠಾಣೆ ಸುತ್ತಮುತ್ತಲಿನ ಜನರು ಮನವಿ ಮಾಡಿದ್ದಾರೆ. ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಕೇ ಬೇಕು ಎಂದು ಪಡೆದುಕೊಂಡಿದ್ದರು.

English summary
Deputy chief minister Dr. G Parmeshwara once again in news for using Zero traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X