ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಜ್ಜಾ ತಿನ್ನಲು ಹೋಗಿ 'ಇಂಗು' ತಿಂದ ಬೆಂಗಳೂರು ಟೆಕ್ಕಿ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 5; ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಮೋಸಕ್ಕೆ ಬಲಿಯಾಗುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಬಗ್ಗೆ ಸೈಬರ್ ಪೊಲೀಸರು ಸಾಕಷ್ಟು ಜಾಗೃತಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಆನ್‌ಲೈನ್‌ಲ್ಲಿ ವಂಚಕರು ಅಮಾಯಕರಿಗೆ ಬಲೆ ಬೀಸುತ್ತಲೇ ಇದ್ದಾರೆ.

ಇದೇ ರೀತಿ ಆನ್‌ಲೈನ್‌ ನಲ್ಲಿ ಪಿಜ್ಜಾ ಆರ್ಡರ್ ಮಾಡಿ, ಬೆಂಗಳೂರಿನ ಟೆಕ್ಕಿಯೊಬ್ಬ 95 ಸಾವಿರ ರುಪಾಯಿ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ಕಳೆದ ಭಾನುವಾರ ನಡೆದಿದೆ. ಈ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೇಗಾಯಿತು ಘಟನೆ?

ಹೇಗಾಯಿತು ಘಟನೆ?

ಬೆಂಗಳೂರಿನ ಕೋರಮಂಗಲದ ಟೆಕ್ಕಿ ಎನ್ ವಿ ಶೇಕ್ ಎನ್ನುವರೇ ವಂಚಕರಿಂದ ಮೋಸಕ್ಕೊಳಗಾದ ವ್ಯಕ್ತಿ. ಇವರು ಡಿಸೆಂಬರ್ ೧ ರಂದು ಪಿಜ್ಜಾ ತಿನ್ನಬೇಕು ಎಂದು ಮಧ್ಯಾಹ್ನ ಪ್ರಮುಖ ಬುಕಿಂಗ್ ಆಪ್ ಒಂದರಲ್ಲಿ ಆರ್ಡರ್ ಮಾಡಿದ್ದರು. ಆದರೆ, ಬಹಳ ಹೊತ್ತಿನ ತನಕ ಶೇಕ್ ಅವರಿಗೆ ಪಿಜ್ಜಾ ತಲುಪಲಿಲ್ಲ. ಇದರಿಂದ ಅವರು, ಗೂಗಲ್ ನಲ್ಲಿ ಬುಕಿಂಗ್ ತಾಣದ ಕಸ್ಟಮರ್ ಕೇರ್ ಸಂಖ್ಯೆ ಪಡೆದು ವಿಚಾರಿಸಿದ್ದಾರೆ.

ಸೈಬರ್ ಕ್ರೈಂ ನಿಂದ ಮಹಿಳೆಯರ ರಕ್ಷಣೆಗೆ ಕಾರ್ಟೂನುಸೈಬರ್ ಕ್ರೈಂ ನಿಂದ ಮಹಿಳೆಯರ ರಕ್ಷಣೆಗೆ ಕಾರ್ಟೂನು

ಕಸ್ಟಮರ್ ಕೇರ್ ಹೆಸರಿನಲ್ಲಿ ವಂಚನೆ

ಕಸ್ಟಮರ್ ಕೇರ್ ಹೆಸರಿನಲ್ಲಿ ವಂಚನೆ

ಶೇಕ್ ಅವರು ಕರೆ ಮಾಡಿದ ಕಸ್ಟಮರ್ ಕೇರ್ ಸಂಖ್ಯೆಯನ್ನು ದುರುಪಯೋಗ ಮಾಡಿಕೊಂಡ ವಂಚಕರು, ಬಲೆಗೆ ಬೀಳಿಸಿದ್ದಾರೆ.

ನಿಮಗೆ ಪಿಜ್ಜಾ ತಲುಪಿಸಲು ಆಗಿಲ್ಲ. ನಿಮ್ಮ ಹಣ ಮರುಳಿಸುತ್ತೇವೆ. ನಾವು ಕಳಿಸುವ ಲಿಂಕ್‌ಗೆ ನಿಮ್ಮ ಮಾಹಿತಿ ತುಂಬಿ ಕಳಿಸಿ ಎಂದು ಹೇಳಿದ್ದಾರೆ. ಇದನ್ನೇ ನಂಬಿದ ಶೇಕ್ ಅವರು, ತಮ್ಮ ಬ್ಯಾಂಕ್ ಮಾಹಿತಿಯನ್ನು ಒಂದೊಂದೆ ಭರ್ತಿ ಮಾಡಿ ಮರಳಿ ಬರಬೇಕಾಗಿರುವ ಹಣ ಬರುತ್ತೆ ಎಂದು ಕಾಯ್ದು ಕುಳತಿದ್ದಾರೆ.

ಎರಡೇ ಗಂಟೆಯಲ್ಲಿ ಹಣ ಮಾಯ

ಎರಡೇ ಗಂಟೆಯಲ್ಲಿ ಹಣ ಮಾಯ

ಇತ್ತ ಶೇಕ್ ಅವರು ಹಣ ಬರುತ್ತೆ ಎಂದು ಕಾಯ್ದು ಕುಳತಿದ್ದಾಗ ಅವರಿಗೆ ದೊಡ್ಡ ಆಘಾತ ಆಗಿದೆ. ತಮ್ಮ ಒಂದು ಬ್ಯಾಂಕ್ ಖಾತೆಯಿಂದ 50 ಸಾವಿರ ರುಪಾಯಿ ಮಾಯವಾಗಿದೆ. ತಕ್ಷಣವೇ ಶೇಖ್ ಅವರು ತಮ್ಮ ಖಾತೆಯಲ್ಲಿ ಉಳಿದ 45 ರುಪಾಯಿ ಹಣವನ್ನು ತಮ್ಮದೇ ಇನ್ನೊಂದು ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಆದರೆ, ಅದು ಕೂಡ ವಂಚಕರ ಪಾಲಾಗಿದೆ. ಎರಡೇ ಗಂಟೆಯಲ್ಲಿ ಅವರ ಎರಡು ಖಾತೆಯಿಂದ 95 ಸಾವಿರ ರುಪಾಯಿ ಮಾಯವಾಗಿದೆ.

ಆನ್‍ಲೈನ್ ಶಾಪಿಂಗ್‍ಗೆ ಮಾರು ಹೋದ ಶೇ.87 ರಷ್ಟು ಬೆಂಗಳೂರಿಗರು!ಆನ್‍ಲೈನ್ ಶಾಪಿಂಗ್‍ಗೆ ಮಾರು ಹೋದ ಶೇ.87 ರಷ್ಟು ಬೆಂಗಳೂರಿಗರು!

ಪ್ರಕರಣ ದಾಖಲಿಸಿದ ಟೆಕ್ಕಿ

ಪ್ರಕರಣ ದಾಖಲಿಸಿದ ಟೆಕ್ಕಿ

ಶೇಕ್ ಅವರು ತಮ್ಮ ಖಾತೆಯಲ್ಲಿ 95 ಸಾವಿರ ರುಪಾಯಿಯನ್ನು ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಚಿಕಿತ್ಸೆಗೆ ಉಪಯೋಗಿಸಬೇಕೆಂದು ಇಟ್ಟಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮಡಿವಾಳ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರಿಂದ ಎಚ್ಚರಿಕೆ

ಪೊಲೀಸರಿಂದ ಎಚ್ಚರಿಕೆ

ಇತ್ತೀಚೆಗೆ ಮಾಲ್ ವೇರ್ ಗಳ ಹಾವಳಿ ಹೆಚ್ಚಾಗುತ್ತಿದ್ದು, ಸೈಬರ್ ವಂಚಕರು ಮಾಲ್ ವೇರ್‌ಗಳ ಲಿಂಕ್ ಕಳಿಸಿ ಮೋಸ ಮಾಡುತ್ತಿದ್ದಾರೆ. ಇತ್ತೀಚೆಗೆ Mazar Bot ಎಂಬ ಮಾಲ್ ವೇರ್ ಸೈಬರ್ ವಂಚಕರ ಹಾಟ್ ಫೇವರೇಟ್ ಆಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಾಕಷ್ಟು ಪ್ರಕರಣಗಳಲ್ಲಿ ಇದೇ ಮಾಲ್ ವೇರ್ ಕೈವಾಡ ಇದೆ ಎಂಬುದು ಸಾಬೀತಾಗಿದೆ.

English summary
Bengalore Techie looses huge amount by cyber fruds. 95,000 rupess looses bengalore techie enf N V Shaik. police complaint lodged in Madiwala Police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X