• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗ್ರೀನ್ ಲೈನ್ ಗೆ ಆರು ಬೋಗಿಯ ಮತ್ತೆರಡು ಮೆಟ್ರೋ ಟ್ರೈನ್

|

ಬೆಂಗಳೂರು, ಡಿಸೆಂಬರ್ 12; ನಾಗಸಂದ್ರ ಯಲೇಚನಹಳ್ಳಿ ಮಾರ್ಗವಾಗಿ (ಗ್ರೀನ್ ಲೈನ್) ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಂದಿನಿಂದ (ಡಿಸೆಂಬರ್ 12) ಆರು ಬೋಗಿಗಳ ರೈಲುಗಳನ್ನು ಹೆಚ್ಚಳ ಮಾಡಲಾಗಿದೆ.

ಒಟ್ಟು 37 ಮೆಟ್ರೋ ನಿಲ್ದಾಣಗಳ ಮರು ನಾಮಕರಣಕ್ಕೆ ಒಪ್ಪಿಗೆ

ಈ ಮಾರ್ಗದಲ್ಲಿ ಈ ಮುಂಚೆ ಆರು ಬೋಗಿಗಳ ರೈಲು ಎಂಟು ಮಾತ್ರ ಇದ್ದವು. ಇದರಿಂದ ಪ್ರಯಾಣಿಕರು ಜನದಟ್ಟಣೆಯಿಂದ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಪರಿಗಣಿಸಿರುವ ಮೆಟ್ರೋ ಮುಖ್ಯಸ್ಥರು, ಆರು ಬೋಗಿಗಳ ರೈಲನ್ನು ಹೆಚ್ಚಳ ಮಾಡಿದ್ದಾರೆ. ಇದರಿಂದ ಪ್ರಯಾಣಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಡಿ 12 ರಿಂದಲೇ ಈ ಸೌಲಭ್ಯ ಕಾರ್ಯಚರಣೆ ಆಗಿದೆ.

ಈ ಮಾರ್ಗದಲ್ಲಿ ಒಟ್ಟು ಆರು ಬೋಗಿಯ ಎಂಟು ಟ್ರೈನ್ ಗಳು ಈಗ ಹತ್ತಕ್ಕೆ ಹೆಚ್ಚಾಗಿರುವುದರರಿಂದ ಭಾನುವಾರ ಹೊರತುಪಡಿಸಿ, ಪ್ರತಿದಿನ 78 ಸುತ್ತಿನ ಪ್ರಯಾಣವನ್ನು ಆರು ಬೋಗಿಯ ಒಂದು ರೈಲು ಮುಗಿಸಲಿದೆ ಎಂದು ಬಿಎಂಆರಸಿಎಲ್ ಪತ್ರಿಕಾ ಪ್ರಕಟಣೆ ತಿಳಿಸಿದೆ. ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವಲ್ಲಿ ಹೆಚ್ಚು ಸಹಾಯ ನೀಡುತ್ತಿರುವ ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಹಲವು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮೆಟ್ರೋ ರೈಲು ಸಂಚಾರದ ಅವಧಿಯನ್ನು ರಾತ್ರಿ 11 ರಿಂದ 12 ಕ್ಕೆ ಹೆಚ್ಚಿಸಿ ನಿನ್ನೆಯಷ್ಟೇ ಬಿಎಂಆರ್ಸಿಎಲ್ ಪ್ರಯಾಣಿಕ ಸ್ನೇಹಿ ಕ್ರಮ ಕೈಗೊಂಡಿತ್ತು.

English summary
Bengalore Metro Increased 6 Compartment trains For Green Line. its Increased 8 to 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X