ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆನಕ 'ಸತ್ತವರ ನೆರಳು' 501ನೆ ಶೋಗೆ ಬನ್ನಿ

By Mahesh
|
Google Oneindia Kannada News

ಬೆಂಗಳೂರು, ಮೇ 13: ‘ಸತ್ತವರ ನೆರಳು' ನಾಟಕ 500 ಪ್ರದರ್ಶನಗಳನ್ನು ಪೂರೈಸಿದ್ದು, ಈಗ ಮತ್ತೊಂದು ಪ್ರದರ್ಶನಕ್ಕೆ ಸಜ್ಜಾಗಿದೆ. ಬೆನಕ ರಂಗ ತಂಡದ ವತಿಯಿಂದ ಮೇ 17ರಂದು ನಗರದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ನಾಟಕದ 500ರ ಸಂಭ್ರಮವನ್ನು ಆಚರಿಸಲಾಗುತ್ತಿದೆ ಎಂದು ಬೆನಕದ ಅಧ್ಯಕ್ಷ ನಿರ್ದೇಶಕ ಟಿ.ಎಸ್.ನಾಗಾ ಭರಣ ತಿಳಿಸಿದ್ದಾರೆ.

ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಜಿ.ಬಿ. ಜೋಷಿ ರಚಿಸಿದ 'ಸತ್ತವರ ನೆರಳು' ನಾಟಕವನ್ನು ಅಂತಾರಾಷ್ಟ್ರೀಯ ರಂಗ ಭೂಮಿ ನಿರ್ದೇಶಕ ಬಿ.ವಿ.ಕಾರಂತರ ನಿರ್ದೇಶನದಲ್ಲಿ 1975ರಲ್ಲಿ ಅತ್ಯಂತ ಅದ್ಭುತವಾಗಿ ರಂಗದ ಮೇಲೆ ಪ್ರದರ್ಶಿಸಲಾಯಿತು ಎಂದು ನೆನಪು ಮಾಡಿಕೊಂಡರು. ಬಿ.ವಿ ಕಾರಂತರು ಕಟ್ಟಿದ ಬೆಂಗಳೂರು ನಗರ ಕಲಾವಿದರು(ಬೆನಕ) ತಂಡ ಸತ್ತವರ ನೆರಳು ನಾಟಕವನ್ನು ಕಲಾರಸಿಕರ ಮುಂದೆ ಕಳೆದ ನಾಲ್ಕು ದಶಕಗಳಿಂದ ಪ್ರದರ್ಶಿಸುತ್ತಾ ಬಂದಿದ್ದಾರೆ.

1975ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಈ ನಾಟಕವು ಇಲ್ಲಿಗೆ 500 ಪ್ರದರ್ಶನ ಕಂಡಿದೆ. ಹವ್ಯಾಸಿ ರಂಗಭೂಮಿಯಲ್ಲಿ ಒಂದು ನಾಟಕ 500 ಪ್ರದರ್ಶನ ಕಂಡಿರುವುದು ದೊಡ್ಡ ಮಟ್ಟದ ಸಾಧನೆ. ಈ ನಾಟಕದಲ್ಲಿ ಜಿ.ವಿ.ಅಯ್ಯರ್ ಸೇರಿದಂತೆ ನೂರಾರು ಕಲಾವಿದರು ಅಭಿನಯಿಸಿದ್ದರು. ಪ್ರಸ್ತುತ ನಾಟಕದಲ್ಲಿ ಅಭಿನಯಿಸುತ್ತಿರುವ ಕಲಾವಿದರು 4ನೆ ತಲೆಮಾರಿನವರಾಗಿದ್ದಾರೆ ಎಂದು ನಾಗಾಭರಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Benaka presents Sattavara Neralu Kannada play Samsa Ravindra Kalakshetra

ನಟ ಸುಂದರರಾಜು ಮಾತನಾಡಿ, 'ಸತ್ತವರ ನೆರಳು ನಾಟಕವು 35 ವರ್ಷಗಳ ಕಾಲ ನಿರಂತರವಾಗಿ ಪ್ರದರ್ಶನ ಗೊಂಡಿದೆ. ಇದರಲ್ಲಿ ಅಭಿನಯಿಸಿದ ನೂರಾರು ಕಲಾವಿದರ ನೂರಾರು ನೆನಪುಗಳು ಮರೆಯಲು ಅಸಾಧ್ಯ. ಲಹರಿ ಸಂಸ್ಥೆಯಿಂದ ಈ ನಾಟಕ ಡಿವಿಡಿ ರೂಪದಲ್ಲಿ ಬರುತ್ತಿರುವುದು ಆ ನೆನಪುಗಳನ್ನು ಒಂದು ಕಡೆ ಸಂಗ್ರಹಿಸಿದಂತಾಗುತ್ತದೆ' ಎಂದರು.

ಮೇ 17ರಂದು ಸಂಸ ಬಯಲು ರಂಗಮಂದಿರದಲ್ಲಿ ಸಂಜೆ 5.30ರ ನಂತರ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಸಾಹಿತಿ ಗಿರಡ್ಡಿ ಗೋವಿಂದರಾಜ, ರಮಾಕಾಂತ ಜೋಶಿ, ಲಹರಿ ವೇಲು ಭಾಗವಹಿಸುವ ನಿರೀಕ್ಷೆಯಿದೆ. ಸತ್ತವರ ನೆರಳು ನಾಟಕದಲ್ಲಿ ಪುರಂದರ ದಾಸರ ಕೀರ್ತನೆಗಳನ್ನು ಬಿವಿ ಕಾರಂತರು ಸೂಕ್ತವಾಗಿ ಬಳಸಿಕೊಂಡಿದ್ದರು. ನಾಟಕದ ಪದ್ಯಗಳನ್ನು ಆಸಕ್ತರು ಇಲ್ಲಿ ಕೇಳಬಹುದು.

English summary
Theatre troupe Benaka (Bengaluru Nagara Kalavidaru) will perform its 501st show of G. B. Joshi’s Kannada play ‘Sattavara Neralu' (Shadow of the dead) on May 17 at the Ravindra Kalakshetra, Bangalore. A DVD of the play would also be released said Theatre and cine personality T.S Nagabharana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X