ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಪರಿಸರ ದಿನ : ಕನ್ನಡ ಪ್ರೇಮ, ಪರಿಸರ ಪ್ರೇಮಕ್ಕೆ ಬೆಳ್ಳಿಕಿರಣ

ಬೆಳ್ಳಿಕಿರಣ ಕ್ರಿಯೇಷನ್ಸ್ ಅವರು ತಾವು ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸುವರಲ್ಲದೆ ಅದಕ್ಕೆ ಪರ್ಯಾಯವಾದ ಹಾಗು ಸಮರ್ಪಕವಾದ ಉತ್ಪಾದನೆಯನ್ನು ಮಾಡುತ್ತಿದ್ದಾರೆ.

By Mahesh
|
Google Oneindia Kannada News

ಬೆಳ್ಳಿಕಿರಣ ಕ್ರಿಯೇಷನ್ಸ್ ಅವರು ತಾವು ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸುವರಲ್ಲದೆ ಅದಕ್ಕೆ ಪರ್ಯಾಯವಾದ ಹಾಗು ಸಮರ್ಪಕವಾದ ಉತ್ಪಾದನೆಯನ್ನು ಮಾಡುತ್ತಿದ್ದಾರೆ. ಪರಿಸರ ಸ್ನೇಹಿ ಗಿಫ್ಟ್ ಗಳನ್ನು ತಯಾರಿಸುವುದಲ್ಲದೆ ಕನ್ನಡತನವನ್ನು ಬೆಳೆಸುತ್ತಿದ್ದಾರೆ.

ಕಾನೂನು ಬದ್ಧವಾಗಿ ಪ್ಲಾಸ್ಟಿಕ್ ನಿಷೇಧಕ್ಕೂ ಮೊದಲೂ ನೂರಾರು ಜನ ಅದರ ವಿರುದ್ಧ ಮಾತನಾಡುತ್ತಲೇ ಬಂದವರು ಇದ್ದಾರೆ. ಆದರೆ, ಬೆಳ್ಳಿಕಿರಣ ಕ್ರಿಯೇಷನ್ಸ್ ಅವರು ತಾವು ಪ್ಲಾಸ್ಟಿಕ್ ಬಳಕೆಯನ್ನು ವಿರೋಧಿಸುವರಲ್ಲದೆ, ಅದಕ್ಕೆ ಪರ್ಯಾಯವಾದ ಹಾಗು ಸಮರ್ಪಕವಾದ ಉತ್ಪಾದನೆಯನ್ನು ಮಾಡುತ್ತಿದ್ದಾರೆ. ಇವೆಲ್ಲದರ ವಿಶೇಷತೆ ಏನೆಂದರೆ, ಅವುಗಳ ಮೇಲೆ ಕನ್ನಡದ ಕಂಪನ್ನು ಬೀರುತ್ತಿರುವುದು.

ಮದುವೆ, ಮುಂಜಿ, ಹಾಗು ಇನ್ಯಾವುದೇ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಇಲ್ಲದೆ ಆಗುವುದೇ ಅನ್ನುವಷ್ಟು ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದೇವೆ.

ಅರುಣ , ಬೆಳ್ಳಿಕಿರಣ ಕ್ರಿಯೇಷನ್ಸ್ ಮುಖ್ಯಸ್ಥರು : "ಕಳೆದ ಸಂಕ್ರಾಂತಿ ಹಬ್ಬದ ಸಮಯಕ್ಕೂ ಮುನ್ನ ಪ್ಲಾಸ್ಟಿಕ್ ಬಗ್ಗೆ ಯಾಕೆ ಜನರಿಗೆ ಜಾಗೃತಿ ಏಕೆ ಮೂಡಿಸಬಾರದು ಅಂತ ಆಲೋಚಿಸಿದೆ. ನಮಗೆ ಇದಕ್ಕೆ ಪೂರಕವಾಗಿ ಬಂದವರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರುವ ಸ್ಲಂ ನಿವಾಸಿಗಳು. ಅದರಲ್ಲೂ ಮಹಿಳೆಯರು. ಇವರಿಗೆಲ್ಲ NGO, ಕಾಟನ್ ಚೀಲ ಹೊಲೆಯಲು ತರಬೇತಿ ಈಗಾಗಲೇ ನೀಡಿದ್ದರು. ಇವರ ಸಹಾಯದಿಂದ, ಸಂಕ್ರಾಂತಿ ಹಬ್ಬಕ್ಕೆ ಎರಡು ಬಗೆಯ ಚೀಲ ಹೊಲಿಸಿದೆವು.

ಬೆಳ್ಳಿಕಿರಣ ಕ್ರಿಯೇಷನ್ಸ್,

ಬೆಳ್ಳಿಕಿರಣ ಕ್ರಿಯೇಷನ್ಸ್,

ಆಗಸ್ಟ್ 2016 ರಲ್ಲಿ ಸ್ಥಾಪನೆಯಾದ ಬೆಳ್ಳಿಕಿರಣ ಕ್ರಿಯೇಷನ್ಸ್, ಪರಿಸರ ಸ್ನೇಹಿಯಾದ ಗೋಣಿ ಬ್ಯಾಗ್‍ಗಳನ್ನು, ಪೋರ್ಸಿಲೀನ್ ಕಪ್ ಗಳನ್ನು (ಆಚರಣೆಗೆ ತಕ್ಕ ಪದ್ಯಗಳನ್ನು ಕಪ್ ಗಳ ಮೇಲೆ ಮುದ್ರಿಸಲಾಗುತ್ತದೆ, ಕಛೇರಿಗಳಿಗೆ ಆರ್ಗನ್ಸರ್ಸ್, ಶಾಪಿಂಗ್ ಬ್ಯಾಗ್, ಹೀಗೆ ಬಹಳಷ್ಟು ಉತ್ಪಾದನೆಗಳಲ್ಲಿ ತೊಡಗಿಸಿಕೊಂಡಿದೆ.

ದುಂಡಿರಾಜ್ ಕವನದ ಬಳಕೆ

ದುಂಡಿರಾಜ್ ಕವನದ ಬಳಕೆ

'ನಾವು ಕನ್ನಡ ಬಗ್ಗೆ ಮಾಡಲು ಹೊರಟಾಗ, ಕೆಲವರು ಆಡಿಕೊಂಡಿದ್ದುಂಟು, ನಮಗೂ ತಳಮಳ ಇತ್ತು. ಆದರೆ, ಈಗೀಗ ಜನರು, ಕನ್ನಡದಲ್ಲಿ ಬರೆದು ಕೊಡಿ ಅಂತಾರೆ. ನಮ್ಮ ಕನ್ನಡ ಪದಗಳಲ್ಲಿ ವಿಶೇಷತೆ ಏನೆಂದರೆ ಆಯಾಯ ಗ್ರಾಹಕರಿಗೆ ಬೇಕಾಗುವಂತೆ, ವೈಯಕ್ತಿಕ ಪದಗಳು ಬರೆಯುತ್ತೇವೆ, ಇದು ಜನರಿಗೆ ಇಷ್ಟ ಆಗಿದೆ.

"ಕನ್ನಡದ ಬಗ್ಗೆ ಹಾಗು ಪರಿಸರದ ಬಗ್ಗೆ ನಮ್ಮ ಈ ಉತ್ಸಾಹವನ್ನು ಕಂಡು ಖ್ಯಾತ ಕವಿ ದುಂಡಿರಾಜ್ ಅವರು ತಮ್ಮ ಪದ್ಯಗಳನ್ನೂ ಕಪ್ ಗಳ ಮೇಲೆ ಮುದ್ರಿಸಿಕೊಳ್ಳಲು ಅನುಮತಿ ನೀಡಿದ್ದಾರೆ. ಇದು ನಮ್ಮ ಅದೃಷ್ಟವೇ ಹೌದು ಎಂದು ಸಂಸ್ಥೆಯ ಸ್ಥಾಪಕಿ ಅರುಣ ಹೇಳಿದರು.

ಪರಿಸರ ಸ್ನೇಹಿ ಸಂಸ್ಥೆ ಹುಟ್ತಿಕೊಂಡಿದ್ದು

ಪರಿಸರ ಸ್ನೇಹಿ ಸಂಸ್ಥೆ ಹುಟ್ತಿಕೊಂಡಿದ್ದು

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಚೀಲ ಕಬ್ಬು ಬಾಳೆ ತೆಂಗು ಹಿಡಿಯಲು, ಪುಟಾಣಿ ಚೀಲ ಎಳ್ಳು ಬೆಲ್ಲ ಅಚ್ಚು ಹಾಕಲು. ಹಬ್ಬಕ್ಕೂ ಮೊದಲು ಹೊಲಿಸಿ, ಮನೆಯವರಿಂದಲೇ ಬೋಣಿ ಮಾಡಿಸಿದೆವು. ಅಮ್ಮ, ಚಿಕ್ಕಮ್ಮ ಎಲ್ಲರು ಹಬ್ಬಕ್ಕೂ ಒಂದು ತಿಂಗಳು ಮೊದಲೇ ಕೊಂಡುಕೊಂಡರು, ಒಬ್ಬರಿಂದ ಒಬ್ಬರಿಗೆ ಹೋಗಿ, ಫೇಸ್ಬುಕ್ ಸಹಾಯದಿಂದ, ನೂರಾರು ಜನರಿಗೆ ಮಾರಾಟವಾಯಿತು. ಸುಮಾರು ಆರು ಸಾವಿರ ಚೀಲ ಮಾರಾಟಮಾಡಿದ್ದೆವು. ಹಬ್ಬದ ಹಿಂದಿನ ದಿನ ಕೂಡ ಬೇಡಿಕೆ ಬಂತು. ಮತ್ತೆ ಹೋಲಿಸಿ ಕೊಟ್ಟೆವು.

ಕನ್ನಡ ಪದ್ಯಗಳನ್ನು ಪ್ರಿಂಟ್ ಮಾಡುವವರು

ಕನ್ನಡ ಪದ್ಯಗಳನ್ನು ಪ್ರಿಂಟ್ ಮಾಡುವವರು

ಮಹಿಳೆಯರಿಗೆ ಜಾಸ್ತಿ ಕೆಲಸ ಆಯಿತೆಂದು ಪೇಚಾಡಿದೆವು. ಆದರೆ, ಸ್ಲಂ ನಲ್ಲಿದ್ದ ಮಹಿಳೆಯರು ಸಂತೋಷದಲ್ಲಿದ್ದರು, ನಾಲ್ಕು ಕಾಸು ಜಾಸ್ತಿ ಬಂತೆಂದು ಅಂದರು. ಅದೇ ಸ್ಲಂ ನಲ್ಲಿರುವ ಕೆಲ ವಿಕಲಚೇತನ ಯುವಕರು, ಪ್ರಿಂಟಿಂಗ್ ಮಾಡುತ್ತಾರೆ. ಅವರೇ ನಮ್ಮ ಚೀಲಗಳ ಮೇಲೆ ಕನ್ನಡ ಪದ್ಯಗಳನ್ನು ಪ್ರಿಂಟ್ ಮಾಡುವವರು. ಅವರ ಉತ್ಸಾಹ ನೋಡಿಯೇ ಖುಷಿ ಆಗತ್ತೆ. ಯಾವ ಸಮಯದಲ್ಲಿ ಹೇಳಿದರೂ ಮಾಡುತ್ತಾರೆ."

ಪ್ಲಾಸ್ಟಿಕ್ ನಿರ್ಮೂಲನೆ

ಪ್ಲಾಸ್ಟಿಕ್ ನಿರ್ಮೂಲನೆ

ತಾಂಬೂಲ ಚೀಲ, ಸೀರೆ ಚೀಲ, ಶಾಪಿಂಗ್ ಚೀಲ, ಸಿರಿಧಾನ್ಯ ಅಂಗಡಿಗಳಲ್ಲಿ ಬಟ್ಟೆ ಚೀಲ, ಸೀ.ಡಿ ಗೂ ಚೀಲ, ಬ್ಲೌಸ್ ಪೀಸ್ ಇಡುವುದಕ್ಕೂ ಬಟ್ಟೆ ಚೀಲ, ಫ್ರಿಡ್ಜ್ ಒಳಗೆ ತರಕಾರಿ ಇಡಲು ಚೀಲ, ಬೇಸಿಗೆ ಶಿಬಿರಕ್ಕೂ ಚೀಲ, ಒಂದೇ ಎರೆಡೇ, ಎಲ್ಲದಕ್ಕೂ ಬಟ್ಟೆ ಚೀಲ ಮಾಡಿ ಹೊಸ ಮಾರುಕಟ್ಟೆ ಸೃಷ್ಟಿಸಿಕೊಂಡರು. ನಾವು ಕೊಟ್ಟ ಚೀಲದಲ್ಲಿನ ಬಹುತೇಕ ಚೀಲದಲ್ಲಿ ಕನ್ನಡ ಪದಗಳು ಇವೆ, ಮದುವೆ, ಮುಂಜಿ, ಗೃಹಪ್ರವೇಶ, ಗುರುವಂದನ ಕಾರ್ಯಕ್ರಮ, ಸೀಮಂತ ಎಲ್ಲದಕ್ಕೂ ಕನ್ನಡ ಪದಗಳಲ್ಲಿ ಬರೆದು ಚೀಲಗಳಲ್ಲಿ ಆಚ್ಚು ಹಾಕಲಾಗಿದೆ.

ಬೆಳ್ಳಿಕಿರಣ ಸಂಸ್ಥೆ

ಬೆಳ್ಳಿಕಿರಣ ಸಂಸ್ಥೆ

ಬೆಳ್ಳಿಕಿರಣ ಅವರ ಈ ಹೆಜ್ಜೆಗೆ ನಿಮ್ಮ ಬೆಂಬಲ ಸೂಚಿಸಲು 72599 25112 or [email protected] ಇಲ್ಲಿ ಸಂಪರ್ಕಿಸಬಹುದು.
ಫೇಸ್ ಬುಕ್ ಪುಟಕ್ಕೆ ಇಲ್ಲಿದೆ ಲಿಂಕ್

English summary
World Environments Day : Belli Kirana creations promotes Kannada and culture through Environmental friendly gifts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X