ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂದೂರು ಪ್ರಕರಣ: ಕರ್ನಾಟಕ, ತಮಿಳುನಾಡಿಗೆ ನೋಟಿಸ್

|
Google Oneindia Kannada News

ಬೆಂಗಳೂರು, ಜನವರಿ 9: ಬೆಳ್ಳಂದೂರು ಕೆರೆ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಬೆಳ್ಳಂದೂರು ಕೆರೆ ಮಾಲಿನ್ಯ ಪ್ರಕರಣಕ್ಕೆ ಸಂಬಂಧಿಸಿದ ಮೂಲ ಅರ್ಜಿದಾರನಾಗಿರುವ ತನ್ನನ್ನೂ ಕಕ್ಷಿದಾರನನ್ನಾಗಿ ಪರಿಗಣಿಸುವಂತೆ ರಾಜ್ಯ ಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ , ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ತಮಿಳುನಾಡು ಸರ್ಕಾರ, ಕೇಂದ್ರ ಪರಿಸರ ಇಲಾಖೆ, ಬಿಬಿಎಂಪಿ, ಬಿಡಿಎಗೆ ನೋಟಿಸ್ ನೀಡಿದೆ.

ಡ್ರೋಣ್ ಕೇವಲ ನಿಗಾ ಇಡುವುದಲ್ಲ ಕೆರೆಗಳನ್ನೂ ಸ್ವಚ್ಛ ಮಾಡುತ್ತೆ ಡ್ರೋಣ್ ಕೇವಲ ನಿಗಾ ಇಡುವುದಲ್ಲ ಕೆರೆಗಳನ್ನೂ ಸ್ವಚ್ಛ ಮಾಡುತ್ತೆ

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಅದರ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಕುಪೇಂದ್ರ ರೆಡ್ಡಿ ಮೂಲ ಅರ್ಜಿದಾರರಾಗಿದ್ದಾರೆ.

Bellandur Case Notice Issued To Karnataka And Tamil Nadu

ಈಗ ಕುಪೇಂದ್ರ ರೆಡ್ಡಿಯವರನ್ನು ಹೊರಗಿಟ್ಟು ವಿಚಾರಣೆ ನಡೆಸುತ್ತಿರುವುದು ಸರಿಯಲ್ಲ. ಅವರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಪರಿಗಣಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರ ನೇತೃತ್ವದ ತ್ರಿಸದಸ್ಯ ಪೀಠ ಈ ಬಗ್ಗೆ ರಾಜ್ಯ ಸರ್ಕಾರ, ಬಿಡಿಎ, ತಮಿಳುನಾಡು,ಪರಿಸರ ಇಲಾಖೆಗೆ ನೋಟಿಸ್ ಜಾರಿಮಾಡಿದೆ.

English summary
The Supreme Court has issued notice to Karnataka and Tamil Nadu on the pollution of Bellandur lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X