ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬತ್ತುತ್ತಿರುವ ಬೆಂಗಳೂರಿನ ಬೋರ್ವೆಲ್, ಏರುತ್ತಿರುವ ವಾಟರ್ ಟ್ಯಾಂಕರ್ ಬೆಲೆ

|
Google Oneindia Kannada News

ಬೆಂಗಳೂರು, ಮಾರ್ಚ್ 11 : ವಿಫಲವಾಗಿದ್ದ ಮಳೆ, ಬಿರು ಬೇಸಿಗೆಯಿಂದಾಗಿ ಬೆಳ್ಳಂದೂರು ಸುತ್ತಮುತ್ತಲಿರುವ ಬೋರ್‌ವೆಲ್‌ಗಳು ಬತ್ತುತ್ತಿದ್ದು, ಟ್ಯಾಂಕರ್‌ ನೀರಿಗೆ ಹೆಚ್ಚು ಬೆಲೆ ತೆರಬೇಕಾಗಿದೆ.

ಬೇಡಿಕೆ ಹೆಚ್ಚಾದಂತೆ ನೀರಿನ ಬೆಲೆಯೂ ಹೆಚ್ಚಳವಾಗುತ್ತಿದೆ. ಈ ಮೊದಲು 6000 ಲೀಟರ್ ನೀರಿರುವ ಟ್ಯಾಂಕರ್ 500 ರೂ ಗೆ ದೊರೆಯುತ್ತಿತ್ತು. ಆದರೆ ಇದೀಗ ಅದೇ ನೀರಿಗೆ 1,500 ರೂ ನೀಡಬೇಕಿದೆ. ಮುಖ ತೊಳೆಯುವುದಿರಲಿ ಬೇರೆ ಕೆಲಸಕ್ಕೂ ಜನ ನೀರಿಗಾಗಿ ಪರದಾಡುವಂತಾಗಿದೆ.

ಈ ಬೇಸಿಗೆ ಉತ್ತರ ಕನ್ನಡದ 423 ಹಳ್ಳಿ ಜನರ ಗಂಟಲಾರಿಸಲಿದೆ ಈ ಬೇಸಿಗೆ ಉತ್ತರ ಕನ್ನಡದ 423 ಹಳ್ಳಿ ಜನರ ಗಂಟಲಾರಿಸಲಿದೆ

ಬೆಳ್ಳಂದೂರು ಸುತ್ತಲಿರುವ ಕಸವನಹಳ್ಳಿ, ವರ್ತೂರು ಪ್ರದೇಶಗಳಿಗೆ ಕಾವೇರಿ ಸರಬರಾಜು ಕೂಡ ಇಲ್ಲ. ಈ ಪ್ರದೇಶದ ಜನರು ಬಿಬಿಎಂಪಿಯ ಬೋರ್‌ವೆಲ್‌ ಅಥವಾ ತಮ್ಮ ಮನೆಯ ಸ್ವಂತ ಬೋರ್‌ವೆಲ್‌ಗಳನ್ನೇ ನಂಬಿಕೊಂಡಿದ್ದಾರೆ.

Bellandur borewells dry up, tanker water costly

ದಿನದಿಂದ ದಿನಕ್ಕೆ ಜನಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಹಾಗಾಗಿ ಇರುವ ಬೋರ್‌ವೆಲ್‌ಗಳೆಲ್ಲವೂ ಒಣಗಿ ಹೋಗಿವೆ. ವಾಟರ್ ಟ್ಯಾಂಕರ್‌ ಓನರ್ ಗಳಲ್ಲಿಯೂ ಕೂಡ ಸ್ಪರ್ಧೆ ಏರ್ಪಟ್ಟಿದೆ. ಪ್ರತಿ ದಿನವೂ ಟ್ಯಾಂಕರ್ ನೀರಿನ ಬೆಲೆ ಹೆಚ್ಚಳವಾಗುತ್ತಿದೆ.

ಬೆಂಗಳೂರು ಜಲಮಂಡಳಿಗೆ ತುಂಬಿದ 2 ಕೋಟಿ ನೀರು ಶುಲ್ಕ ಮಾಯ ಬೆಂಗಳೂರು ಜಲಮಂಡಳಿಗೆ ತುಂಬಿದ 2 ಕೋಟಿ ನೀರು ಶುಲ್ಕ ಮಾಯ

ಆ ಪ್ರದೇಶದ ಜನರಿಗೆ ನೀರಿನ ಪರ್ಯಾಯ ವ್ಯವಸ್ಥೆ ಮಾಡಲು ಶ್ರಮಿಸುತ್ತಿದ್ದೇವೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಬೇಡಿಕೆ ಹೆಚ್ಚಾಗಿದೆ ಆದರೆ ಪೂರೈಕೆ ಕಡಿಮೆಯಾಗಿದೆ. ಮೊದಲು 100 ಟ್ಯಾಂಕರ್ ನೀರು ಪೂರೈಕೆಯಾಗುತ್ತಿತ್ತು ಆದರೆ ಬೇಡಿಕೆ 150ಕ್ಕೆ ಹೆಚ್ಚಳವಾಗಿದೆ.

English summary
Bellandur is reeling under severe water crisis as borewells in the area are drying up, while water tankers have jacked up prices in view of increasing demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X