• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಧರಿಗಾಗಿ 'ಬೆಳಕು' ನೀಡಿದ ಅಶ್ವಿನಿ ಅಂಗಡಿ

By Ashwath
|

ಬೆಂಗಳೂರು, ಜೂನ್ 6 : ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರವಾಗಿರುವ ಅಂಧ ಸಾಧಕಿ ಅಶ್ವಿ‌ನಿ ಅಂಗಡಿಯವರ ಕನಸಿನ ಕೂಸು ದೃಷ್ಟಿಹೀನ ಮಕ್ಕಳಿಗಾಗಿಯೇ ಆರಂಭಿಸಲಾದ ಉಚಿತ ಶಾಲೆ 'ಬೆಳಕು' ಜೂನ್‌.6 ಶುಕ್ರವಾರದಂದು ಲೋಕಾರ್ಪಣೆಗೊಂಡಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಶಾಲೆಯ ಲಾಂಛನ ಮತ್ತು ಟ್ರಸ್ಟ್‌‌ನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ಸಹಾಯ ಪಡೆದು ಓದಿ ಸಾಧನೆ ಮಾಡಿದವರು ಪುನಃ ಸಮಾಜದ ಏಳಿಗೆಗೆ ಶ್ರಮಿಸುವುದು ಕಡಿಮೆ. ಆದರೆ ಅಶ್ವಿನಿಯವರು ದೊಡ್ಡ ಸಾಧನೆ ಮಾಡಿ ಸುಮ್ಮನೇ ಕುಳಿತುಕೊಳ್ಳದೇ ಅಂಧ ವಿಧ್ಯಾರ್ಥಿ‌‌ಗಳಿಗೆ ಶಾಲೆ ತೆರೆಯುವ ಮೂಲಕ ಅವರು ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ನಿಜಕ್ಕೂ ಇದು ಹೆಮ್ಮೆ ಪಡುವ ವಿಚಾರ ಎಂದು ಅಶ್ವಿನಿಯವರನ್ನು ಹೊಗಳಿದರು.

ಮೂರು ವರ್ಷದ ಮೀರದ ಟ್ರಸ್ಟ್‌‌ಗಳಿಗೆ ಸರ್ಕಾರ ಯಾವುದೇ ಸಹಾಯಧನ ನೀಡುವುದಿಲ್ಲ. ಹೀಗಾಗಿ ದಾನಿಗಳು ಹಣಕಾಸಿನ ಸಹಾಯ ನೀಡಿದರೆ ಟ್ರಸ್ಟ್‌ ಅಭಿವೃದ್ಧಿ ಹೊಂದಿ ಅಂಧ ವಿದ್ಯಾರ್ಥಿ‌ಗಳ ಶಿಕ್ಷಣಕ್ಕೆ ತುಂಬಾ ಸಹಾಯವಾಗುತ್ತದೆ. ಸರ್ಕಾರವು ಕೆಲವೊಮ್ಮೆ ಈ ರೀತಿಯ ಟ್ರಸ್ಟ್‌‌ಗಳಿಗೆ ತಮ್ಮ ನಿಯಮವನ್ನು ಸಡಿಲಿಸಿ ಹಣಕಾಸಿನ ನೆರವು ನೀಡುವಂತಾಗಬೇಕು ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಅಶ್ವಿನಿ ಅಂಗಡಿಯವರು ನಾನು ಇದುವರೆಗೂ ಹುಟ್ಟುಹಬ್ಬವನ್ನು ಆಚರಿಸಿಲ್ಲ. ಇಂದು ನನ್ನ ಹುಟ್ಟುಹಬ್ಬದ ದಿನ ನನ್ನ ಕನಸಿನ ಶಾಲೆ ಆರಂಭಗೊಳ್ಳುವುದು ನನಗೆ ಹೆಮ್ಮೆ ತಂದಿದೆ. ನಾನು ಅಂಧಳಾದರೂ ಬಹಳಷ್ಟು ಜನ ಪ್ರೋತ್ಸಾಹ ನೀಡಿದ್ದರಿಂದ ಸಾಧನೆ ಮಾಡಿದ್ದೇನೆ. ಆದರೆ ನನಗೆ ದೊರೆತ ಪ್ರೋತ್ಸಾಹ ಎಲ್ಲಾ ಅಂಧರಿಗೆ ಸಿಗುವುದು ಕಷ್ಟ. ಈ ಕಾರಣಕ್ಕೆ ಈ ಶಾಲೆಯನ್ನು ಟ್ರಸ್ಟ್‌ ವತಿಯಿಂದ ತೆರೆದಿದ್ದೇನೆ ಎಂದರು.[ಅಶ್ವಿನಿ ಅಂಗಡಿ ಯಾರು?]

ಬೆಳಕು ಬರೀ ಬೆಳಕಲ್ಲ.ಇದು ಸಾಧನೆಯ ಬೆಳಕು. ಜೀವನದಲ್ಲಿ ಯಶಸ್ಸು ಸಾಧಿಸಿದವರ ಬೆಳಕು. ಅಂಧರು ಸಮಾಜಕ್ಕೆ ಹೊರೆಯಲ್ಲ. ಅವಕಾಶ ನೀಡದೇ ಅವರನ್ನು ಮೂಲೆಗುಂಪು ಮಾಡಬೇಡಿ ಎಂದು ಅಶ್ವಿನಿಯವರು ಸಭಿಕರಲ್ಲಿ ವಿನಂತಿಸಿದರು.

ಕಾರ್ಯ‌ಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ರಾಧಾಕುಲಕರ್ಣಿ‌, ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತ ಕೆ. ಎಸ್‌. ರಾಜಣ್ಣ, ರಮಣ ಮಹರ್ಷಿ‌‌ ಅಂಧರ ಶಾಲೆಯ ಪ್ರಾಂಶುಪಾಲ ಟಿ.ಬಿ. ಶ್ರೀನಿವಾಸ್‌‌‌, ದುಬೈ ಸಮಾಜ ಸೇವಕ, ತುಳು ಚಲನ ಚಿತ್ರ ನಿರ್ಮಾಪಕ ಶೋದನ್‌ ಪ್ರಸಾದ್‌ ಅತ್ತಾವರ್‌‌, ದುಬೈ ಉದ್ಯಮಿ ಗಣೇಶ್‌ ರೈ ಉಪಸ್ಥಿತರಿದ್ದರು.

ಸಮಾರಂಭದ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಹೆಮ್ಮೆ ಪಡುವ ವಿಚಾರ

ಹೆಮ್ಮೆ ಪಡುವ ವಿಚಾರ

"ಅಶ್ವಿನಿಯವರು ದೊಡ್ಡ ಸಾಧನೆ ಮಾಡಿ ಸುಮ್ಮನೇ ಕುಳಿತುಕೊಳ್ಳದೇ ಅಂಧ ವಿಧ್ಯಾರ್ಥಿ‌‌ಗಳಿಗೆ ಶಾಲೆ ತೆರೆಯುವ ಮೂಲಕ ಅವರು ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಕೆಲಸಕ್ಕಾಗಿ ನಾವು ಅವರನ್ನು ಅಭಿನಂದಿಸಬೇಕು"

- ಡಾ.ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ

ಅಂಧರ ವಿಶೇಷ ಶಾಲೆ:

ಅಂಧರ ವಿಶೇಷ ಶಾಲೆ:

ಇದು ಸಾಮಾನ್ಯವಾಗಿ ಇರುವ ಅಂಧರ ಶಾಲೆ ಆಗಿರದೇ ಎಳವೆಯಲ್ಲೇ ಕಂಪ್ಯೂಟರ್‍ ಶಿಕ್ಷಣದ ಮೂಲಕ ಪಾಠ ಹೇಳಿಕೊಡಲಾಗುತ್ತದೆ. ರೆಸಿಡೆನ್ಸಿಯಲ್‌ ಶಾಲೆ ಇದಾಗಿದ್ದು ಐದರಿಂದ 12 ವರ್ಷದವರೆಗಿನ ಮಕ್ಕಳಿಗೆ ಈ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ವರ್ಷಕ್ಕೆ ಮೂವತ್ತು ವಿದ್ಯಾರ್ಥಿಗಳ ಮಿತಿಯಲ್ಲಿ ಮಾತ್ರ ತರಗತಿಗಳನ್ನು ನಡೆಸಲಾಗುತ್ತದೆ.

ಬಡ ವಿದ್ಯಾರ್ಥಿ‌ಗಳಿಗೆ ಮೀಸಲು:

ಬಡ ವಿದ್ಯಾರ್ಥಿ‌ಗಳಿಗೆ ಮೀಸಲು:

ಬಡ ವಿದ್ಯಾರ್ಥಿ‌ಗಳಿಗೆ ಮೀಸಲಾಗಿದ್ದು ಈಗಾಗಲೇ ಆರು ಅಂಧ ವಿದ್ಯಾರ್ಥಿ‌ಗಳು ಆಯ್ಕೆಯಾಗಿದ್ದಾರೆ. ನಾಲ್ಕನೇಯ ತರಗತಿಯ ಬಳಿಕ ಅಂಧರು ಸಾಮಾನ್ಯ ವಿದ್ಯಾರ್ಥಿ‌ಗಳ ಜೊತೆ ಶಿಕ್ಷಣ ಪಡೆಯುವಂತಗಾಬೇಕು ಎಂಬ ಕನಸನ್ನು ಅಶ್ವಿನಿಯವರು ಹೊಂದಿದ್ದು, ಅದಕ್ಕಾಗಿ ಅವರಿಗೆ ಯೋಗ,ಈಜು ಸೇರಿದಂತೆ ಪಾಠ್ಯೇತರ ಶಿಕ್ಷಣವನ್ನು ಇಲ್ಲಿ ಕಲಿಸಲಾಗುತ್ತದೆ.

 ಮೊದಲ ವಿದ್ಯಾರ್ಥಿ‌‌ನಿ:

ಮೊದಲ ವಿದ್ಯಾರ್ಥಿ‌‌ನಿ:

ಈ ಸಂಸ್ಥೆಯಲ್ಲಿ ಆರಂಭಿಕ ವಿದ್ಯಾರ್ಥಿ‌ನಿಯಾಗಿ ಆಯ್ಕೆಯಾದವಳು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗೆ ಗ್ರಾಮದ ಶಿಲ್ಪಾ. ಇವಳ ಪೋಷಕರು ಶಾಲೆಗೆ ಸೇರಿಸಲು ಆಸಕ್ತಿ ತೋರಿಸಿರಲಿಲ್ಲವಂತೆ. ಆದರೆ ಒಂದು ತಿಂಗಳ ಮನವೊಲಿಕೆಯ ನಂತರ ಇವಳನ್ನು ಶಾಲೆಗೆ ಸೇರಿಸಲು ಅನುಮತಿ ನೀಡಿದ್ದಾರೆ.

 ಟ್ರಸ್ಟ್‌ಗೆ ಸಹಾಯ ಮಾಡಿ:

ಟ್ರಸ್ಟ್‌ಗೆ ಸಹಾಯ ಮಾಡಿ:

ದುಬೈ ಸಮಾಜ ಸೇವಕ, ತುಳು ಚಲನ ಚಿತ್ರ ನಿರ್ಮಾಪಕ ಶೋದನ್‌ ಪ್ರಸಾದ್‌ ಅತ್ತಾವರ್‌ 1.92 ಲಕ್ಷ ರೂಪಾಯಿ ಚೆಕ್‌ನ್ನು ಅಶ್ವಿನಿ ಅಂಗಡಿಯವರ ಟ್ರಸ್ಟ್‌ಗೆ ನೀಡಿದರು.

ಬೆಳಕು ಶಾಲೆಗೆ ಸಹಾಯ ಮಾಡಲು ಇಚ್ಚಿಸುತ್ತಿರುವ ದಾನಿಗಳು ಕಾರ್ಪೊರೆಷನ್‌ ಬ್ಯಾಂಕ್‌ ಅಕೌಂಟ್‌ ನಂ : 014401601000930, ಐಎಫ್‌ಎಸ್‌ಸಿ ಕೋಡ್‌ : ಸಿಒಆರ್‌ಪಿ 00144, ಐಎನ್‌ಆರ್‌ಪಿ ಕೋಡ್‌: 044077 ಗೆ ತಮ್ಮ ದೇಣಿಗೆ ನೀಡಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Visually challenged Bangalorean girl Miss Ashwini Angadi, achiever of ’Youth Courage Award’ by the United Nations in 2013 opened her dream challenge project by Ashwini Angadi Trust, ’Belaku Academy’ a residential school for visually impaired children in Bangalore on 6th of June, 2014. Jnana Peetha Awardee Dr. Chandrashekar Kambar inaugurate the formation of Ashwini Angadi Trust on Friday the 6th June, 2014, on the birthday of Ashwini.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more