• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಇಎಲ್ ನಿವೃತ್ತ ನೌಕರ ರಾಜಾರಾಮ್ ಕೊಲೆ ಮಾಡಿಸಿದ್ದು ಮಗಳು

|

ಬೆಂಗಳೂರು, ಡಿಸೆಂಬರ್ 11 : ಬಿಇಎಲ್ ನಿವೃತ್ತ ನೌಕರ ರಾಜಾರಾಮ್ ಕೊಲೆ ಪ್ರಕರಣಕ್ಕೆ ಸಂಬಂಧಿದಂತೆ ರಾಜಾರಾಮ್ ಪುತ್ರಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರಿಯೇ ಸ್ನೇಹಿತರ ಜೊತೆ ಸೇರಿ ತಂದೆಯನ್ನು ಕೊಲೆ ಮಾಡಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ನಿವೃತ್ತ ನೌಕರ ರಾಜಾರಾಮ್ (73) ನಾಪತ್ತೆಯಾಗಿದ್ದಾರೆ ಎಂದು ಅವರ ಪುತ್ರಿ ಮಧುಮತಿ ವಿದ್ಯಾರಣ್ಯಪುರ ಪೊಲೀಸರಿಗೆ ನವೆಂಬರ್ 11ರಂದು ದೂರು ನೀಡಿದ್ದರು. ನವೆಂಬರ್ 18ರಂದು ರಾಜಾರಾಮ್ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮಧುಮತಿ ಮತ್ತು ಆಕೆಯ ಸ್ನೇಹಿತರನ್ನು ಬಂಧಿಸಿದ್ದಾರೆ. [ಮಗುವಿಗೆ... ಅಪ್ಪನ ಪ್ರೀತಿಗಿಂತ, ಮಿಗಿಲಾದ ಗಿಫ್ಟ್ ಎಲ್ಲಿದೆ?]

ಘಟನೆಯ ವಿವರ : ರಾಜಾರಾಮ್ ಅವರು ಪುತ್ರಿ ಮಧುಮತಿಗೆ ಬಿಳೇಕಹಳ್ಳಿಯಲ್ಲಿ ಫ್ಲ್ಯಾಟ್‌ಕೊಡಿಸಿ, ವಿದ್ಯಾರಣ್ಯಪುರದಲ್ಲಿ ಪತ್ಯೇಕವಾಗಿ ವಾಸವಾಗಿದ್ದರು. ವಿದ್ಯಾರಣ್ಯಪುರದಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಮಧುಮತಿ ತಂದೆಯನ್ನು ಒತ್ತಾಯಿಸುತ್ತಿದ್ದಳು. [ಮಗಳನ್ನು ಕೊಲ್ಲುವಾಗ ತಾಯಿ ಪ್ರೀತಿ ಎಲ್ಲಿ ಹೋಗಿತ್ತು?]

ಆಸ್ತಿಯನ್ನು ಮಧುಮತಿಗೆ ನೀಡಲು ರಾಜಾರಾಮ್ ಒಪ್ಪಿರಲಿಲ್ಲ. ಇದರಿಂದ ಅಸಮಧಾನಗೊಂಡ ಮಧುಮತಿ ಸ್ನೇಹಿತರ ಜೊತೆ ಸೇರಿ ತಂದೆಯ ಹತ್ಯೆಗೆ ಸಂಚು ರೂಪಿಸಿದ್ದಳು. ಅದರಂತೆ ನವೆಂಬರ್ 11ರಂದು ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದ ರಾಜಾರಾಮ್ ಅವರನ್ನು ಅಪಹರಣ ಮಾಡಲಾಗಿತ್ತು. [ಮಗಳಿಗೆ ಕಿಡ್ನಿ ಕೊಟ್ಟು, ಮರುಜೀವ ನೀಡಿದ ತಂದೆ]

ಅವರನ್ನು ಕೊಲೆ ಮಾಡಿ, ಕಾರಿನಲ್ಲಿ ಶವವನ್ನು ಆಂಧ್ರಪ್ರದೇಶದ ಹಿಂದೂಪುರಕ್ಕೆ ಸಾಗಿಸಿ ಅಲ್ಲಿ ಸುಡಲು ಪ್ರಯತ್ನ ನಡೆಸಲಾಗಿತ್ತು. ನವೆಂಬರ್ 18ರಂದು ಹಿಂದೂಪುರದಲ್ಲಿ ರಾಜಾರಾಮ್ ಶವ ಪತ್ತೆಯಾಗಿತ್ತು. ಅಂದಿನಿಂದಲೂ ಮಧುಮತಿ ತಲೆಮರೆಸಿಕೊಂಡಿದ್ದಳು.

ನಾಪತ್ತೆ ದೂರು ನೀಡಿದ್ದಳು : ಸ್ನೇಹಿತರ ಸಹಾಯದಿಂದ ತಂದೆಯನ್ನು ಅಪಹರಣ ಮಾಡಿಸಿ, ಕೊಲೆ ಮಾಡಿದ ಬಳಿಕ ಬೆಂಗಳೂರಿಗೆ ಬಂದಿದ್ದ ಮಧುಮತಿ, ವಾಯುವಿಹಾರಕ್ಕೆ ಹೋದ ತಂದೆ ನಾಪತ್ತೆಯಾಗಿದ್ದಾರೆ ಎಂದು ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bharat Electronics Limited (BEL) retired employee Rajaram (73) murder case solved. Bengaluru Vidyaranyapura police arrested Rajaram daughter Madhumati and her friend in connection with the murder case. Rajaram found murdered on November 18, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more