ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗಾಗಿ ಬೇಕು-ಬೇಡ ಸಂತೆ: ವಾಕ್ ಬಟನ್ ಬೇಕಂತೆ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 13 : ಸಿಟಿಜನ್ಸ್ ಫಾರ್ ಬೆಂಗಳೂರು ಏರ್ಪಡಿಸಿದ್ದ ಬೆಂಗಳೂರಿಗಾಗಿ ಬೇಕು-ಬೇಡ ಸಂತೆ ಪ್ರಣಾಳಿಕೆಯ ಅಂಶಗಳನ್ನು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಒಪ್ಪಿಕೊಂಡ ಬಿಜೆಪಿ ಶಾಸಕ ಡಾ. ಅಶ್ವತ್ಥನಾರಾಯಣ ಅವರಿಗೆ ಬೆಂಗಳೂರು ಫೋರಮ್ ಕೃತಜ್ಞತೆ ಸಲ್ಲಿಸಿದೆ.

ಜಯದೇವ ಬಳಿ ರಸ್ತೆ ದಾಟಲು ಬೇಕೇಬೇಕು 'ವಾಕ್' ಬಟನ್ಜಯದೇವ ಬಳಿ ರಸ್ತೆ ದಾಟಲು ಬೇಕೇಬೇಕು 'ವಾಕ್' ಬಟನ್

ಬೆಂಗಳೂರಿನಲ್ಲಿ ಸ್ಕೈವಾಕ್ ಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಅವನ್ನು ಬಳಸುವವರು ಮತ್ತು ಅದರಿಂದ ಆಗುತ್ತಿರುವ ಅನುಕೂಲಗಳು ಕೂಡ ಕಡಿಮೆಯೆ. ಅಲ್ಲದೆ, ಹಲವಾರು ಸ್ಕೈವಾಕ್ ಗಳು ಬರೀ ಜಾಹೀರಾತಿಗಾಗಿ ಮಾತ್ರ ಮೀಸಲಾಗಿವೆ. ಆದ್ದರಿಂದ 'ವಾಕ್' ಬಟನ್ ಅಳವಡಿಸಲು ಹಕ್ಕೊತ್ತಾಯ ಕೇಳಿಬಂದಿದೆ.

Beku-Beda sante manifesto raised people's voice

ಬೆಂಗಳೂರಿನ ಜಯದೇವ ಬಳಿ ಹೆಚ್ಚು ಮಂದಿ ಓಡಾಡುತ್ತಾರೆ, ಅಲ್ಲಿ ಸಿಗ್ನಲ್ ಆಗಲಿ ಅಥವಾ ಸ್ಕೈವಾಕ್ ಆಗಲಿ ಇಲ್ಲ ಹಾಗಾಗಿ ಅಪಘಾತ ತಪ್ಪಿಸುವ ದೃಷ್ಟಿಯಿಂದ ಅಲ್ಲಿ ವಾಕ್ ಬಟನ್ ಅಳವಡಿಸಬೇಕು ಎಂದು ಸಿಟಿಜನ್ಸ್ ಫಾರ್ ಬೆಂಗಳೂರು ಫೋರಂ ಒತ್ತಾಯಿಸಿದೆ.

ಈ ವಿಚಾರವಾಗಿ ಡಿಸೆಂಬರ್ 12 ರಂದು ಮಂಗಳವಾರ ಬೆಂಗಳೂರಿನ ರಿಚ್ಮಂಡ್ ರಸ್ತೆ ಬಳಿ ಇರುವ ಲ್ಯಾಂಗ್ ಫೋರ್ಡ್ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅಭಿಯಾನ ನಡೆಸಿದೆ. 60 ಸೆಕೆಂಡುಗಳ ಕಾಲ ರಸ್ತೆ ದಾಟಲು ಅನುವು ಮಾಡಿಕೊಡುವುದು.

ಬಟನ್ ಇರುವ ಸಿಗ್ನಲ್ ಲೈಟನ್ನು ಅಳವಡಿಸುವುದು ವಿಚಾರವನ್ನು ಪ್ರಸ್ತಾಪಿಸಲಾಯಿತು. ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಶಾಸಕ ಅಶ್ವತ್ಥ ನಾರಾಯಣ ಪಾಲ್ಗೊಂಡಿದ್ದರು.

English summary
Citizen forum applauds BJP MLA accepting its demands: Beku-Beda sante, a concept vy citizen's for Bengaluru forum has rises many issue related to Bengalurians. BJP MLA Dr. Ashwath Narayan has promised that the issues will be included in the state BJP manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X