ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಗೂರು ಶಿವಮೂರ್ತಿ ಪ್ರತಿಷ್ಠಾಪನೆ ವಿವಾದ: ಹಿಂದು ಸಂಘಟನೆ ಕಾರ್ಯಕರ್ತರ ವಿರುದ್ಧ FIR

|
Google Oneindia Kannada News

ಬೆಂಗಳೂರು, ಆ. 19: ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಬೇಗೂರು ಕೆರೆಯಲ್ಲಿ ಪ್ರತಿಷ್ಠಾಪನೆಯಾಗಿದ್ದ ಶಿವಮೂರ್ತಿ ವಿಗ್ರಹ ಮುಚ್ಚಿದ್ದ ಪರೆದು ಎಳೆದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬೇಗೂರು ಕೆರೆಯ ಮಧ್ಯದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಕೆರೆಯ ಜಾಗ ಕಡಿಮೆ ಮಾಡಿ ಪರಿಸರಕ್ಕೆ ಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಪ್ರತಿಷ್ಠಾಪನೆ ಮಾಡಲಾಗಿದ್ದ ವಿಗ್ರಹ ಹಾಗೂ ಐಲ್ಯಾಂಡ್ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ನ್ಯಾಯಾಲಯದ ಆದೇಶದ ನಡುವೆಯೂ ಕೆಲವು ಹಿಂದೂಪರ ಕಾರ್ಯಕರ್ತರು ಶಿವನ ವಿಗ್ರಹದ ಬಗ್ಗೆ ಸಾಮಾಜಿಕ ಕಾಲ ತಾಣದಲ್ಲಿ ಪ್ರಸ್ತಾಪಿಸಿ ದೊಡ್ಡ ಚರ್ಚೆಗೆ ನಾಂದಿ ಹಾಡಿದ್ದರು. ಇದರ ಬೆನ್ನಲ್ಲೇ ಆ. 11 ರಂದು ಶಿವನ ವಿಗ್ರಹವನ್ನು ಕವರ್ ಮಾಡಿದ್ದ ಟಾರ್ಪಲ್‌ನ್ನು ತೆಗೆದು ಹಿಂದೂ ಕಾರ್ಯಕರ್ತರು ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.

ಈ ಬೆಳವಣಿಗೆ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಆ. 16 ರಂದು ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಶಿವನ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪುನೀತ್ ಕೆರೆಹಳ್ಳಿ, ಸಂತೋಷ್ ಕರತಾಳ್ ಸೇರಿದಂತೆ ಹಲವು ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಕೇಸು ದಾಖಲಾಗಿದೆ.

Begur Shiva statue Unveiling Controversy: FIR Against Hindutva Activists

ಆ. 11 ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವು ಹಿಂದೂ ಕಾರ್ಯಕರ್ತರು ಬೇಗೂರು ಕೆರೆಯ ಬಳಿ ಜಮಾಯಿಸಿ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಶಿವಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಇವರ ವಿರುದ್ಧ ಎರಡು ಕೋಮಿನ ನಡುವೆ ದ್ವೇಷ ಬಿತ್ತುವ ಪ್ರಚೋಚನೆ, ನೀಡಿದ ಆರೊ ಹೊರಿಸಲಾಗಿದೆ. ಸಮಾನ ಉದ್ದೇಶದಿಂದ ಗುಂಪು ಸೇರಿ, ಸಾರ್ವನಿಕರ ದಿಕ್ಕು ತಪ್ಪಿಸಿದ ಆರೋಪ ಹೊರಿಸಲಾಗಿದೆ.

ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ಶಿವಮೂರ್ತಿ ಪ್ರತಿಷ್ಠಾಪನೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿರುವ ಬಗ್ಗೆ ಹೈಕೋರ್ಟ್ ಗಮನಕ್ಕೂ ತರಲಾಗಿದೆ. ಈ ಪ್ರಕರಣ ಕುರಿತು ತನಿಖೆ ಪೂರ್ಣ ಗೊಳಿಸಿ ಸೆಪ್ಟೆಂಬರ್ 2. ರೊಳಗೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ದಕ್ಷಿಣ ವಿಭಾಗದ ಡಿಸಿಪಿ ಅವರಿಗೆ ನಿರ್ದೇಶನ ನೀಡಲಾಗಿದೆ.

ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್(ESG) ಕೋಆರ್ಡಿನೇಟರ್ ಆಗಿರುವ ಲಿಯೋ ಸಲ್ಡಾನಾ ಅವರು ಬೇಗೂರು ಕೆರೆಯಲ್ಲಿ ಕೃತಕ ಐಲ್ಯಾಂಡ್ ನಿರ್ಮಿಸಿ ಅಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಪರಿಸರಕ್ಕೆ ಹಾನಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.

Begur Shiva statue Unveiling Controversy: FIR Against Hindutva Activists

ಅರ್ಜಿಯನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಪೀಠ, ಕೃತಕ ಐಲ್ಯಾಂಡ್ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದ ಶಿವನ ಮೂರ್ತಿಯನ್ನು ಬಿಬಿಎಂಪಿ ಅಧಿಕಾರಿಗಳು ಟಾರ್ಪಲ್‌ನಿಂದ ಮುಚ್ಚಿದ್ದರು. ಇದಾದ ಮರು ದಿನವೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಿವಮೂರ್ತಿಗೆ ಮುಚ್ಚಿದ್ದ ಟಾರ್ಪಲ್ ತೆಗೆದು " ಸಂಕೋಲೆಯಲ್ಲಿದ್ದ ಶಿವನನ್ನು ಬಂಧ ಮುಕ್ತಗೊಳಿಸಿ ಹಿಂದೂ ಭಾಗಧ್ವಜ ಹಾರಿಸಲಾಗಿದೆ" ಎಂದು ಹೇಳಿಕೊಂಡಿದ್ದರು.ಇದೀಗ ನ್ಯಾಯಲಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

Begur Shiva statue Unveiling Controversy: FIR Against Hindutva Activists

Recommended Video

ಮೋದಿ ಜಗತ್ತಿನ ಪ್ರಬಲ ನಾಯಕನಾಗಿದ್ದು ಹೇಗೆ ಗೊತ್ತಾ? | Oneindia Kannada

ಶಿವಮೂರ್ತಿ ಬಂಧ ಮುಕ್ತ ದಿನವೇ ರೆಡ್ಡಿ ಕಾರುಗಳಿಗೆ ಬೆಂಕಿ: ವಿಪರ್ಯಾಸವೆಂದರೆ ಬೇಗೂರು ಕೆರೆಯಲ್ಲಿ ಶಿವನಮೂರ್ತಿಗೆ ಮುಚ್ಚಿದ್ದ ಟಾರ್ಪಲ್ ತೆರೆದ ದಿನ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದರು. ಸಚಿವ ಸ್ಥಾನದಿಂದ ವಂಚಿತನಾಗಿ ಹೋರಾಟ ಮಾಡಿದ್ದ ಸತೀಶ್ ರೆಡ್ಡಿ ನಂತರ ಕಾಣಿಸಿಕೊಂಡಿದ್ದೇ ಬೇಗೂರು ಕೆರೆಯ ಶಿವಮೂರ್ತಿ ಪ್ರತಿಷ್ಠಾಪನೆ ವಿವಾದದಲ್ಲಿ. ಆದರೆ ಅದಾದ ಮರು ದಿನವೇ ಸತೀಶ್ ರೆಡ್ಡಿ ಅವರ ಮನೆ ಅಂಗಳದಲ್ಲಿದ್ದ ಕಾರುಗಳಿಗೆ ಬೆಂಕಿ ಇಟ್ಟಿದ್ದರು. ಬೇಗೂರು ಕೆರೆಯಲ್ಲಿನ ಶಿವಮೂರ್ತಿ ಪ್ರತಿಷ್ಠಾಪನೆಗೆ ಹಿಂದೂ ಕಾರ್ಯಕರ್ತರಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ಕಾರುಗಳಿಗೆ ಬೆಂಕಿ ಇಡಲಾಗಿದೆ ಎಂದೇ ಪ್ರಕರಣ ತಳಕು ಹಾಕಿಕೊಂಡಿತ್ತು. ಪೊಲೀಸರು ತನಿಖೆ ನಡೆಸಿದಾಗ ಕೊರೊನಾ ವಿಚಾರವಾಗಿ ಬಂಡೆಪಾಳ್ಯದ ಜನರಿಗೆ ನೆರವು ನೀಡದ ಕಾರಣ ಮೂವರು ಬೆಂಕಿ ಹಚ್ಚಿದ ಪ್ರಸಂಗ ಹೊರಗೆ ಬಂದಿತ್ತು.

English summary
FIR filed against Hindutva activists in Begur for defying court order and Unveiling Shiva statue in the lake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X