ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೋಹತ್ಯೆ ಮಾಡುವುದು ಕೆಂಪೇಗೌಡರನ್ನು ಅವಮಾನಿಸಿದಂತೆ

ಅನೇಕ ಧನಾತ್ಮಕ ವಿಚಾರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ, ಕೆಂಪೇಗೌಡರ ನಾಡು ಬೆಂಗಳೂರು ನಗರವೀಗ ಗೋಹತ್ಯೆ, ಗೋಮಾಂಸ ಭಕ್ಷಣೆಯಂತಹ ಹಿಂಸಾತ್ಮಕ ಕಾರ್ಯಗಳಿಗೆ ಸುದ್ಧಿಯಾಗುತ್ತಿರುವುದು ದುಃಖದ ಸಂಗತಿ.

By ಸಂದೇಶ ತಲಕಾಲಕೊಪ್ಪ
|
Google Oneindia Kannada News

ಪ್ರಪಂಚದ ಭೂಪಟದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವ ನಗರ ಬೆಂಗಳೂರು, ಐಟಿ-ಬಿಟಿ ಸೇರಿದಂತೆ ಅನೇಕ ಧನಾತ್ಮಕ ವಿಚಾರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಗರವೀಗ ಗೋಹತ್ಯೆ, ಗೋಮಾಂಸ ಭಕ್ಷಣೆಯಂತಹ ಹಿಂಸಾತ್ಮಕ ಕಾರ್ಯಗಳಿಗೆ ಸುದ್ಧಿಯಾಗುತ್ತಿರುವುದು ಮಾತ್ರ ದುಃಖದ ಸಂಗತಿ.

ಕೆಂಪೇಗೌಡರು ಗೋವಿನ ಮೂಲಕ ನಿರ್ಮಿಸಿದ ಬೆಂಗಳೂರು ನಗರದಲ್ಲಿ ಗೋಮಾಂಸ ಭಕ್ಷಣೆಯನ್ನು ವೈಭವೀಕರಿಸುವ, ಗೋಮಾಂಸ ಭಕ್ಷಣೆಗೆ ಪ್ರಚೋದನೆ ನೀಡುವ Beef Festಗಳು ಆಯೋಜನೆಗೊಳ್ಳುತ್ತಿರುವುದು ಗೋಪ್ರೇಮಿಗಳ ಮನನೋಯಿಸುವ ಕಾರ್ಯ ಮಾತ್ರ ಆಗಿರದೇ, ನಾಡಪ್ರಭು ಕೆಂಪೇಗೌಡರನ್ನು ಅವಮಾನಿಸುವ ಕಾರ್ಯವೂ ಹೌದು! [ಬೀಫ್ ಫೆಸ್ಟ್, ಕವಯಿತ್ರಿಗೆ ಮುಸ್ಲಿಂರಿಂದಲೇ ಮಂಗಳಾರತಿ]

beef fest in the land of kempe gowda founded bengaluru

ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರು ಎಂಬುದು ಸರ್ವವಿಧಿತವಾದರೂ, ಇತಿಹಾಸದ ಪುಟವನ್ನು ತಿರುವಿ ನೋಡಿದಾಗ "ನಮ್ಮ ಬೆಂಗಳೂರು ಉದಯವಾದದ್ದು ಗೋವಿನಿಂದ" ಎಂಬ ಮಹತ್ತರ ವಿಚಾರವನ್ನು ಕಾಣಬಹುದಾಗಿದೆ.

ಕ್ರಿ.ಶ 1537 ರಲ್ಲಿ ನಾಡಪ್ರಭು ಕೆಂಪೇಗೌಡರು ಗೋವಿಗೆ ಹೊನ್ನಾರು ಕಟ್ಟುವ ಆಚರಣೆಯಿಂದ ಬೆಂಗಳೂರು ನಗರದ ನಿರ್ಮಾಣಕ್ಕೆ ಚಾಲನೆ ನೀಡಿದರು ಮಾತ್ರವಲ್ಲ, ನಾಲ್ಕು ಜೋಡಿ ಎತ್ತುಗಳಿಗೆ ಹೊನ್ನಾರು ಕಟ್ಟಿ ದೊಡ್ಡಪೇಟೆ, ಚಿಕ್ಕಪೇಟೆ ರಸ್ತೆಗಳು ಸಂಧಿಸುವ ಪ್ರದೇಶದಿಂದ ನಾಲ್ಕು ದಿಕ್ಕುಗಳಿಗೆ ಸಾಗುವಂತೆ ಆಜ್ಞೆ ಮಾಡುತ್ತಾರೆ.[ಬೀಫ್ ಫೆಸ್ಟಿವಲ್ ಗೆ ಅನುಮತಿ ನೀಡಿಲ್ಲ: ಬೆಂಗಳೂರು ಪೊಲೀಸ್]

ಅವುಗಳು ನಿಲ್ಲುವ ಜಾಗವನ್ನು ಗುರುತಿಸಿ, ಅಲ್ಲಿಯವರೆಗೆ ಬೆಂಗಳೂರು ನಗರವನ್ನಾಗಿಸುವ ಸಂಕಲ್ಪ ಮಾಡುತ್ತಾರೆ. ಹೀಗೆ ನಾಲ್ಕು ದಿಕ್ಕಿಗೆ ಸಾಗಿದ ಎತ್ತುಗಳು ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರದಲ್ಲಿ ಯಲಹಂಕ ಹಾಗೂ ದಕ್ಷಿಣದಲ್ಲಿ ಆನೇಕಲ್ ವರೆಗೆ ಸಾಗಿ ನಿಂತವು.

ಅವುಗಳನ್ನೇ ಬೆಂಗಳೂರು ನಗರದ ಗಡಿಯನ್ನಾಗಿಸಿ, ನಗರಕ್ಕೆ ಕೋಟೆ ಕಟ್ಟಲಾಯಿತು. ಹೀಗೆ ಗೋವಿನಿಂದ ಬೆಂಗಳೂರಿನ ಉದಯವಾಯಿತು! ನಾಡಪ್ರಭು ಕೆಂಪೇಗೌಡರಿಗೆ ಗೋವಿನ ಕುರಿತಾಗಿ ಇದ್ದ ಪೂಜ್ಯ ಭಾವ ಇತಿಹಾಸದಲ್ಲಿ ದಾಖಲಾಯಿತು.

ಹಾಗೆಯೇ, ಪ್ರಪಂಚದಲ್ಲಿಯೇ ಅತಿದೊಡ್ಡ ಬಸವನ ಮೂರ್ತಿಯಾದ ನಮ್ಮ ಬೆಂಗಳೂರಿನ 'ದೊಡ್ದ ಬಸವ' ನಗರ ನಿರ್ಮಾತೃ ಕೆಂಪೇಗೌಡರಿಂದಲೇ ಸ್ಥಾಪಿತವಾಗಿದ್ದು, ಬಸವನ ಆ ದೊಡ್ಡ ಮೂರ್ತಿಯೇ ಕೆಂಪೇಗೌಡರಿಗೆ ಗೋಸಂತತಿಯ ಮೇಲಿದ್ದ ಭಾವವನ್ನು ಸೂಚಿಸುತ್ತದೆ. [ಪುಣ್ಯಕೋಟಿ ಭಕ್ಷಕರನ್ನು ಹುರಿದು ಬೆಂಡೆತ್ತಿದ ಟ್ವಿಟ್ಟಿಗರು]

ಈ ಕಾರಣಗಳಿಂದಾಗಿ, ಗೋಮಾಂಸ ಆರೋಗ್ಯಕ್ಕೆ ಮಾರಕ, ಗವ್ಯೋತ್ಪನ್ನಗಳು ಆರೋಗ್ಯಕ್ಕೆ ಪೂರಕ ಎಂಬ ವೈಜ್ಞಾನಿಕ ಅಂಶಗಳನ್ನು ಪಕ್ಕಕ್ಕಿಟ್ಟು ನೋಡಿದರೂ, ಬೆಂಗಳೂರಿನ ಮಟ್ಟಿಗಂತೂ ಗೋಹತ್ಯೆ - ಗೋಮಾಂಸ ಭಕ್ಷಣೆ ಸರ್ವಥಾ ನಿಷಿದ್ಧವೇ ಸರಿ.

ನಾಡಿನ ಜನತೆಯ ಕ್ಷೇಮಕ್ಕಾಗಿ ಸೊಸೆಯನ್ನೇ ಬಲಿದಾನನೀಡಿ ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರು! Beef Fest ಗಳನ್ನು ಆಯೋಜಿಸುವ ಮೂಲಕ ಅಂತಹ ಕೆಂಪೇಗೌಡರ ಭಾವನೆಯನ್ನೇ ಬಲಿಕೊಟ್ಟರೆ..?

English summary
What is the connection between Kempegowda, the founder of Bengaluru, and Cows, which is hot topic of the day due to ban on sale of cows for the sake of beef? There is an interesting story behind it. Read this story written by Sandesh Talakalakoppa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X