ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀಚಿಯವರ 'ನನ್ನ ಭಯಾಗ್ರಫಿ' ಆಧಾರಿತ ನಾಟಕ 'ಮಾನಸಪುತ್ರ'

|
Google Oneindia Kannada News

ಕನ್ನಡ ಸಾಹಿತ್ಯಲೋಕ ಕಂಡ ವಿಶಿಷ್ಟ ಹಾಸ್ಯ ಬರಹಗಾರ, ಚಿಂತಕ ಬೀಚಿ (ರಾಯಸಂ ಭೀಮಸೇನ ರಾವ್) ಅವರ ಜೀವನಾಧಾರಿತ ಕನ್ನಡ ನಾಟಕ 'ಮಾನಸಪುತ್ರ' ಏಪ್ರಿಲ್ 13ರಂದು ಬೆಂಗಳೂರಿನಲ್ಲಿ ಪ್ರದರ್ಶನ ಕಾಣುತ್ತಿದೆ. 'ಕಲಾವಿಲಾಸಿ' ತಂಡ ಈ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.

ಪ್ರಭಾತ್ ಕಲಾಪೂರ್ಣಿಮಾದಲ್ಲಿ 'ನನ್ನ ಕಥೆ' ಏಕಾಂಕ ನಾಟಕಪ್ರಭಾತ್ ಕಲಾಪೂರ್ಣಿಮಾದಲ್ಲಿ 'ನನ್ನ ಕಥೆ' ಏಕಾಂಕ ನಾಟಕ

ನಾಟಕದ ಹೆಸರು : ಮಾನಸಪುತ್ರ
ಆಧಾರ : ಬೀಚಿಯವರ 'ನನ್ನ ಭಯಾಗ್ರಫಿ' ಮತ್ತು ಇತರೆ ಅನುಭವಗಳು
ರಚನೆ - ನಿರ್ದೇಶನ : ಬಸವರಾಜ ಎಮ್ಮಿಯವರ
ಅಭಿನಯಿಸುವ ತಂಡ : ಕಲಾವಿಲಾಸಿ
ದಿನಾಂಕ ಮತ್ತು ಸಮಯ : 13 ಏಪ್ರಿಲ್ 2019, ಶನಿವಾರ. ಸಂಜೆ 7.00 ಕ್ಕೆ
ಸ್ಥಳ : ಸೇವಾಸದನ. 14ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು
ನಾಟಕದ ಅವಧಿ : 80 ನಿಮಿಷಗಳು.
ಪ್ರವೇಶ ದರ : 100 ರು.

 Beechi autobiography based Kannada play in Bengaluru

ನಾಟಕದ ಕುರಿತು:

"ಮಾನಸ ಪುತ್ರ" ನಾಟಕವು ಹಾಸ್ಯ ಬರಹಗಾರ ಚಿಂತಕ ಬೀಚಿಯವರ ಜೀವನಾಧಾರಿತ ನಾಟಕವಾಗಿರುತ್ತದೆ. ಪ್ರಮುಖವಾಗಿ ಬೀಚಿಯವರ ಆತ್ಮಚರಿತ್ರೆ ಹಾಗೂ ಅವರ ಇತರೆ ಸಾಹಿತ್ಯವನ್ನು ಆಧರಿಸಿ ಈ ನಾಟಕವನ್ನು ರಚಿಸಲಾಗಿದ್ದು, ಇಡಿಯಾಗಿ ಹಲವು ಭಾವಗಳುಳ್ಳ ನಾಟಕವು ಸಾಹಿತಿಯ ಬದುಕಿನ ಒಳ ನೋಟವನ್ನು ಪ್ರೇಕ್ಷಕರಿಗೆ ಕೊಡುತ್ತದೆ.

ಬಸವೇಶ್ವರನಗರದಲ್ಲಿ ಮಾದರಿ ಮಾದಯ್ಯನ ಕಾಣಿರಿ, ಉಘೇ ಎನ್ನಿ!ಬಸವೇಶ್ವರನಗರದಲ್ಲಿ ಮಾದರಿ ಮಾದಯ್ಯನ ಕಾಣಿರಿ, ಉಘೇ ಎನ್ನಿ!

ನಾಟಕದ ಪ್ರಮುಖ ಆಕರ ಗ್ರಂಥವಾಗಿರುವ "ನನ್ನ ಭಯಾಗ್ರಫಿ" ಕೃತಿಯು ಸಾಮಾನ್ಯವಾಗಿ ನಮಗೆ ಕಾಣ ಸಿಗುವ ಒಂದು ಕ್ರಮಬದ್ದ ಜೀವನ ಚರಿತ್ರೆಯಂತೆ ಕಂಡು ಬರುವುದಿಲ್ಲ. ಬದಲಿಗೆ ತಮ್ಮ ಅಸಂಖ್ಯ ಅನುಭವಗಳ ಪ್ರಾಮಾಣಿಕ ಸಂಗ್ರಹದಂತೆ ಲೇಖಕರು ಆತ್ಮಚರಿತ್ರೆಯನ್ನು ಓದುಗರ ಮುಂದೆ ಇಡುತ್ತಾರೆ. ನಾಟಕವನ್ನೂ ಅದೇ ಆಶಯದಲ್ಲಿ ಕಟ್ಟಿ ಸಾಹಿತಿಯ ಗತ ಜೀವನವನ್ನು ರಂಗದ ಮೇಲಿನ ಬೆಳಕು ಭಾವಗಳ ಮೂಲಕ ಒರೆಹಚ್ಚಿ ನೋಡುಗರಿಗೆ ಪುನರ್ ಪರಿಚಯಿಸಲು ಪ್ರಯತ್ನಿಸಲಾಗಿದೆ.

 Beechi autobiography based Kannada play in Bengaluru

ತಂಡದ ಕುರಿತು:

"ಕಲಾವಿಲಾಸಿ" - ಕಲೆಯಲ್ಲಿ ಸುಖವನ್ನು ಕಾಣುವ ಬಯಕೆಯಲ್ಲಿ ಕಟ್ಟಿರುವ ಕಲಾ ತಂಡ. ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರರಾಗಿದ್ದುಕೊಂಡು ಕಲೆಯ ಕಡೆಗೆ ಅಪಾರ ಒಲವುಳ್ಳ, ರಂಗಭೂಮಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸುಮಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ನಾಡಿನ ವಿವಿಧ ಭಾಗದ ಯುವಕರು ಸೇರಿ ಕಟ್ಟಿರುವ ಕಲಾತಂಡ ಇದಾಗಿರುತ್ತದೆ. ಪಿ. ಲಂಕೇಶರ ಸ್ಟೆಲ್ಲಾ ಎಂಬ ಹುಡುಗಿ ನಾಟಕ, ಪಥಿಕ, ಮಂಥನ ಎನ್ನುವ ಕಿರು ಚಿತ್ರಗಳು, ಪಸರಿಸಲಿ ಕನ್ನಡ ಎನ್ನುವ ಹಾಡಿನ ನಿರ್ದೇಶನ ಹಾಗೂ ಕನ್ನಡ ರಂಗಭೂಮಿಯ ಕೆಲವು ಪ್ರಮುಖ ನಾಟಕಗಳಲ್ಲಿ ಕೆಲಸ ಮಾಡಿರುವ ಸಣ್ಣ ಅನುಭವ ತಂಡದ ಸದಸ್ಯರಿಗೆ ಇರುತ್ತದೆ.

 Beechi autobiography based Kannada play in Bengaluru

ಕನ್ನಡ ಕಲಾ ರಂಗದ ಶ್ರೀಮಂತಿಕೆಗೆ ಪೂರಕವಾಗುವಂತೆ ಕನ್ನಡತನವನ್ನು ಬಿಂಬಿಸುವ ಕೆಲಸವನ್ನು ಮಾಡುವ ಗುರಿಯನ್ನು ಕಲಾವಿಲಾಸಿ ಹೊಂದಿರುತ್ತದೆ.

English summary
Beechi (Rayasam Bheemasena Rao) autobiography based Kannada play will be staged in Bengaluru on 13th April at Sevasadana. ಬೀChi was one of the finest humorists in the Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X