ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಉತ್ತರ ವಿ.ವಿ: ಸಂದಿಗ್ಧತೆಯಲ್ಲಿ ಬಿ.ಎಡ್ ವಿದ್ಯಾರ್ಥಿಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಪರೀಕ್ಷೆ ನಡೆಸಲು ಮುಂದಾಗಿರುವ ನಿರ್ಧಾರದಿಂದ ಬಿ.ಎಡ್ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರೀಕ್ಷೆಗೆ ಶುಲ್ಕ ಪಾವತಿಸಲು ಗುರುವಾರ ಅಂತಿಮ ದಿನ ಎಂದು ವಿ.ವಿ. ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿರುವ ವಿದ್ಯಾರ್ಥಿ ಪೋರ್ಟಲ್ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ.

ಪರೀಕ್ಷಾ ಶುಲ್ಕ ಪಾವರಿಗೆ ಸೆ. 10 ಕೊನೆಯ ದಿನ ಎಂದು ವಿಶ್ವವಿದ್ಯಾಲಯ ಪ್ರಕಟಣೆ ಹೊರಡಿಸಿತ್ತು. ತನ್ನ ವಿದ್ಯಾರ್ಥಿ ಪೋರ್ಟಲ್‌ಗೆ ಲಾಗಿನ್ ಆಗಿ ಶುಲ್ಕ ಪಾವತಿ ಮಾಡುವಂತೆ ಸೂಚನೆಯಲ್ಲಿ ತಿಳಿಸಿತ್ತು. ಆದರೆ ಕೊನೆಯ ದಿನಾಂಕದ ಗಡುವು ಬಂದರೂ ಆ ಪೋರ್ಟಲ್ ಬಳಕೆಗೆ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ.

BEd Students Of Bengaluru North University Facing Issues With Payment Of Fee For Exam

ಲಾಕ್‌ಡೌನ್ ಕಾರಣದಿಂದ ಮೂರನೇ ಸೆಮೆಸ್ಟರ್‌ನ ಎರಡು ವಿಷಯದ ಪರೀಕ್ಷೆಗಳು ಇನ್ನೂ ಬಾಕಿ ಇವೆ. ಹಿಂದಿನ ಸೆಮೆಸ್ಟರ್‌ನ ಪರೀಕ್ಷೆ, ಫಲಿತಾಂಶ, ಮರುಮೌಲ್ಯಮಾಪನದ ಪ್ರಕ್ರಿಯೆಗಳು ಮುಗಿದ ಬಳಿಕವೇ ಮುಂದಿನ ಸೆಮೆಸ್ಟರ್‌ಗೆ ಅವಕಾಶ ನೀಡುವಂತೆ ಪೋರ್ಟಲ್ ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ. ಆದರೆ ಮೂರನೇ ಸೆಮೆಸ್ಟರ್ ಪರೀಕ್ಷೆಗಳೇ ಬಾಕಿ ಇರುವಾಗ ನಾಲ್ಕನೆಯ ಸೆಮೆಸ್ಟರ್ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಯಾವ ಆಧಾರದಲ್ಲಿ ಪ್ರಕಟಣೆ ಹೊರಡಿಸಿದೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

Recommended Video

ಚಿತ್ರೋದ್ಯಮ ಬಂದ್ ? ಇವರಿಗೆಲ್ಲ ತುಂಬಾ loss! | Shivarajkumar | Filmibeat Kannada

English summary
Bengaluru North University students said they are unable to make payment of exam fees via students portal even the deadline of Sep 10 has come.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X