ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸದ ತೇಜಸ್ವಿ ಸೂರ್ಯ ಈ ಪ್ರಶ್ನೆಗಳನ್ನು ನೀವು ಕೇಳಬೇಕಿತ್ತು!

|
Google Oneindia Kannada News

ಬೆಂಗಳೂರು, ಮೇ 05; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೋವಿಡ್ ರೋಗಿಗಳು ಬೆಡ್ ಸಿಗುತ್ತಿಲ್ಲ ಎಂದು ಪರದಾಡುತ್ತಿದ್ದಾರೆ. ಬಿಬಿಎಂಪಿ ವಾರ್ ರೂಂ ಮೂಲಕ ಬೆಂಗಳೂರು ನಗರದಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಬಹಿರಂಗಗೊಳಿಸಿದ್ದಾರೆ.

ಕೋವಿಡ್ ಸೋಂಕು ತಗುಲಿ ಹೋಂ ಐಸೋಲೇಷನ್‌ನಲ್ಲಿರುವ ವ್ಯಕ್ತಿಗಳ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹೇಗೆ ಬೆಡ್ ಬುಕ್ ಆಗುತ್ತದೆ? ಎಂಬ ಸತ್ಯವನ್ನು ತೇಜಸ್ವಿ ಸೂರ್ಯ ಬಿಚ್ಚಿಟ್ಟಿದ್ದರು. ಕರ್ನಾಟಕ ಸರ್ಕಾರ ಬೆಡ್ ಬ್ಲಾಕಿಂಗ್ ದಂಧೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸಿಸಿಬಿ ತನಿಖೆಗೆ ಆದೇಶ ನೀಡಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಬೆಡ್ ಬ್ಲಾಕಿಂಗ್; ತೇಜಸ್ವಿಸೂರ್ಯಗೆ ಸಿದ್ದರಾಮಯ್ಯ ಪ್ರಶ್ನೆಗಳು! ಬೆಡ್ ಬ್ಲಾಕಿಂಗ್; ತೇಜಸ್ವಿಸೂರ್ಯಗೆ ಸಿದ್ದರಾಮಯ್ಯ ಪ್ರಶ್ನೆಗಳು!

ಮಾಜಿ ಸಚಿವ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಸಂಸದ ತೇಜಸ್ವಿ ಸೂರ್ಯಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಬೆಡ್ ಬ್ಲಾಕಿಂಗ್ ದಂಧೆ ಮತ್ತು ಬಿಬಿಎಂಪಿ ವೈಫಲ್ಯದ ಬಗ್ಗೆ ತುಂಬ ಚೆನ್ನಾಗಿ ಬಿಚ್ಚಿಟ್ಟಿದ್ದೀರಿ. ಆದರೆ ತಾವು ಕೇವಲ ಬೆಡ್ ಬ್ಲಾಕಿಂಗ್ ಬಗ್ಗೆ ಮಾತನಾಡಿದ್ದೀರ ಎಂದು ಹೇಳಿದ್ದಾರೆ. ಇದರ ಜೊತೆಗೆ ವೆಂಟಿಲೇಟರ್, ಆಕ್ಸಿಜನ್ ಸಿಲೆಂಡರ್, ರೆಮಿಡಿಸಿವಿರ್ ಮತ್ತು ಕೋವಿಡ್ ಲಸಿಕೆ ಬಗ್ಗೆ ತಾವು ಅಗತ್ಯವಾಗಿ ಮಾತನಾಡಬೇಕಿತ್ತು ಮತ್ತು ಈ ಕೆಳಗಿನ ಪ್ರಶ್ನೆಗಳನ್ನು ಕೇಳಬೇಕಿತ್ತು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಬೆಡ್ ಹಗರಣ ಬಯಲಿಗೆಳೆದ ತೇಜಸ್ವಿಗೆ ಕಂಗ್ರಾಟ್ಸ್ ಎಂದ ಡಿಕೆ ಶಿವಕುಮಾರ್ ಬೆಡ್ ಹಗರಣ ಬಯಲಿಗೆಳೆದ ತೇಜಸ್ವಿಗೆ ಕಂಗ್ರಾಟ್ಸ್ ಎಂದ ಡಿಕೆ ಶಿವಕುಮಾರ್

ನೀವು ಅಧಿಕಾರಿಗಳ ಮೇಲೆ, ಏಜನ್ಸಿ ಬಗ್ಗೆ ಮಾತಡಿದ್ದೀರಿ. ಆದರೆ ಇದೆಲ್ಲಾ ಹೋಗಿ ಸೇರುವುದು ನಿಮ್ಮ ಬುಡಕ್ಕೆ. ಅಂದರೆ ಬಿಜೆಪಿಯ ಬುಡಕ್ಕೆ. ಅದರ ಶಾಸಕರ ಸಂಸದರ ಬುಡಕ್ಕೆ. ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರುವಾಗ ನಿಮ್ಮ ಪ್ರಶ್ನೆಗಳೆಲ್ಲಾ ಯಾರಿಗೆ ?, ಅಧಿಕಾರಿಗಳ ಮೇಲೆ ಎಲ್ಲಾ ಆಪಾದನೆ ಹೊರಿಸಿ ಕೈ ತೊಳೆದುಕೊಳ್ಳಲು ಅವರು ನಿಮ್ಮ ಗುಲಾಮರಲ್ಲ.

ಆಸ್ಪತ್ರೆಗಳಲ್ಲಿ ಬೆಡ್ ಲಾಕ್ ವಿಚಾರ, ಸಿಎಂ ಯಡಿಯೂರಪ್ಪ ಹೇಳಿದ್ದೇನು? ಆಸ್ಪತ್ರೆಗಳಲ್ಲಿ ಬೆಡ್ ಲಾಕ್ ವಿಚಾರ, ಸಿಎಂ ಯಡಿಯೂರಪ್ಪ ಹೇಳಿದ್ದೇನು?

ತಾವು ಚೀರಾಡಬೇಕಾದುದ್ದು ಕೇಂದ್ರ ಮತ್ತು ರಾಜ್ಯದ ರಾಜಕಾರಣಿಗಳ ಮೇಲೆ. ನಿಮಗೆ ಅನುಕೂಲವಾಗುವ ಮತ್ತು ಅನುಕೂಲ ಎನಿಸುವ ಮಾತಿಗಿಂತ ಜನರಿಗೆ ಅನುಕೂಲವಾಗುವ ಮಾತುಗಳನ್ನು ದಯವಿಟ್ಟು ಆಡಿ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ತೇಜಸ್ವಿ ಸೂರ್ಯಗೆ ಪ್ರಶ್ನೆಗಳು

ತೇಜಸ್ವಿ ಸೂರ್ಯಗೆ ಪ್ರಶ್ನೆಗಳು

ಬಿಬಿಎಂಪಿಯಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ. ನೀವು ತರಾಟೆಗೆ ತೆಗೆದುಕೊಳ್ಳಬೇಕಾಗಿರುವುದು ಅಧಿಕಾರಿಗಳ ಜೊತೆ ನಿಮ್ಮ ಬಿಜೆಪಿಯವರನ್ನ. ಯಾವ ಏಜನ್ಸಿಗೆ ಕೊಡಬೇಕೆಂಬುದು ಬಿಜೆಪಿಯ ಯಾವುದೋ ಪ್ರಭಾವಿ ರಾಜಕಾರಣಿಯ ಪರಿಚಯಸ್ಥರಿಗೆ ನೀಡಿರಲಾಗಿರುತ್ತದೆ. ಆ ಬಗ್ಗೆ ತನಿಖೆ ಆಗಲೇಬೇಕು. ಈ ಹಣ ಹೋಗಿ ಸೇರುವುದು ಎಲ್ಲಿಗೆ? ಎಂಬುದು ಮೊದಲು ಗೊತ್ತಾಗಬೇಕು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸರ್ಕಾರ ಯಾಕೆ ವಿಫಲವಾಗಿದೆ?

ಸರ್ಕಾರ ಯಾಕೆ ವಿಫಲವಾಗಿದೆ?

ರಾಜ್ಯದಲ್ಲಿ ಎಷ್ಟು ಜನ ಬೆಡ್ ಇಲ್ಲದೆ ಒದ್ದಾಡುತ್ತಿದ್ದಾರೊ ಅದಕ್ಕೂ ದುಪ್ಪಟ್ಟು ಜನ ಆಮ್ಲಜನಕ ಇಲ್ಲದೆ ಸಾಯುತ್ತಿದ್ದಾರೆ. ಅದನ್ನು ಪೂರೈಸಬೇಕಾಗಿರುವುದು ಸರ್ಕಾರ. ಸರ್ಕಾರ ಯಾಕೆ ವಿಫಲವಾಗಿದೆ ? ಇದರ ಬಗ್ಗೆ ಮಾತನಾಡಿ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆ

ರಾಜ್ಯದಲ್ಲಿ ಆಕ್ಸಿಜನ್ ಕೊರತೆ

ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕ ಸಿಲೆಂಡರ್‌ಗಳಿಗೆ ಇಲ್ಲಿ ಕೊರತೆ ಇದ್ದಾಗ್ಯೂ ಗುಜರಾತ್‌ಗೆ ಯಾಕೆ ಕಳುಹಿಸಲಾಗುತ್ತಿದೆ? ಉತ್ತರ ನೀಡಿ.

ನಿನ್ನೆ ಚಾಮರಾಜನಗರದಲ್ಲಿ ನಡೆದ 28 ಸೋಂಕಿತರ ಸಾವಿಗೆ ನೇರವಾಗಿ ಸರ್ಕಾರ ಕಾರಣವೇ ಹೊರತು ಅಧಿಕಾರಿಗಳಲ್ಲ. ಬಳ್ಳಾರಿಯಿಂದ ಬರಬೇಕಿದ್ದ ಲಿಕ್ವಿಡ್ ಆಮ್ಲಜನಕ ಸಮಯಕ್ಕೆ ಬರದೇ ಇದ್ದಿದ್ದು ಮತ್ತು ರಾಜಕಾರಣಿಗಳಿಂದಾಗಿ ಅದೆಲ್ಲೊ ಬೇರೆ ಕಡೆ ಪೂರೈಕೆ ಆಗುತ್ತಿರುವ ಕಾರಣ ಸರ್ಕಾರ ಜನರನ್ನು ಕೊಂದಿದ್ದರ ಕುರಿತು ಸಹ ಮಾತನಾಡಿ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ನಮ್ಮ ರಾಜ್ಯಕ್ಕೆ ಎಷ್ಟು ಮಂಜೂರಾಗಿವೆ

ನಮ್ಮ ರಾಜ್ಯಕ್ಕೆ ಎಷ್ಟು ಮಂಜೂರಾಗಿವೆ

ಪಿ.ಎಂ ಕೇರ್ಸ್ ನಿಧಿ ಬಳಕೆ ಮಾಡಿ ದೇಶದಲ್ಲಿ ನಿರ್ಮಿಸುತ್ತೇವೆ ಎಂದು ಹೇಳಲಾದ 551 ಆಮ್ಲಜನಕದ ಘಟಕದಲ್ಲಿ ನಮ್ಮ ರಾಜ್ಯಕ್ಕೆ ಎಷ್ಟು ಮಂಜೂರಾಗಿವೆ. ಯಾವಾಗ ಸೇವೆಗೆ ಲಭ್ಯವಾಗುತ್ತವೆ ತಿಳಿಸಿ.

ಬೆಡ್ ಸಿಕ್ಕಾಗ್ಯೂ ಆಮ್ಲಜನಕ ಇಲ್ಲದಿದ್ದರೆ ಮನೆಯಲ್ಲಿ ಮಲಗಿ ಸಾಯುವುದಕ್ಕು ಆಸ್ಪತ್ರೆಯಲ್ಲಿ ಮಲಗಿ ಸಾಯುವುದಕ್ಕು ಯಾವ ವ್ಯತ್ಯಾಸ ಇಲ್ಲ ಎಂದು ಇಂದು ವಿಕ್ಟೋರಿಯಾ ಆಸ್ಪತ್ರೆ ಸ್ಥಿತಿಯನ್ನು ನೋಡಿ ಸಿದ್ದರಾಯಯ್ಯ, ಕಲ್ಬುರ್ಗಿ ಜಿಲ್ಲಾಸ್ಪತ್ರೆ ಆಮ್ಲಜನಕ ಕೊರತೆ ನೋಡಿ ಪ್ರಿಯಾಂಕ ಖರ್ಗೆ ಈ ಪ್ರಶ್ನೆ ಎತ್ತಿದ್ದಾರೆ.
ಬೆಡ್ ನೀಡಿ ಆದ ಮೇಲೆ ಜನರನ್ನು ಸಾಯಿಸುತ್ತಿರುವುದರ ಬಗ್ಗೆ ಉತ್ತರ ನೀಡಿ ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

ಲಸಿಕೆ ಪೂರೈಕೆ ಆಗಲಿಲ್ಲ

ಲಸಿಕೆ ಪೂರೈಕೆ ಆಗಲಿಲ್ಲ

ಆಮ್ಲಜನಕದ ನೀಡುವ ಯಂತ್ರಗಳನ್ನು ಪ್ರತಿ ಜಿಲ್ಲೆಗೆ ತಲಾ 1000 ನೀಡುತ್ತೀವಿ ಎಂದಿದ್ದೀರಲ್ಲ? ಅವು ಎಲ್ಲಿವೆ?.

45 ವರ್ಷದ ಒಳಗಿನವರಿಗೆ ಲಸಿಕೆ ನೀಡಲು ತಯಾರಿಯೆ ಮಾಡಿಕೊಳ್ಳದೆ ಬಹು ಪ್ರಚಾರ ಪಡೆದು ಕಾಂಗ್ರೆಸ್ ನಾಯಕನನ್ನು ಬಿಜೆಪಿ ಕರ್ನಾಟಕ ಅಧಿಕೃತ ಅಕೌಂಟ್ ಮೂಲಕ ಅಣಕಿಸಿ ಉಚಿತ ಲಸಿಕೆ ಹಾಕಿಸಿಕೊಳ್ಳಲು ಆಹ್ವಾನ ಮಾಡಿ ನಿಮ್ಮ ಮರ್ಯಾದೆ ಹರಾಜು ಮಾಡಿಕೊಂಡಿದ್ದಲ್ಲದೆ ಲಸಿಕೆ ಪೂರೈಕೆ ಮಾಡಲು ಆಗಲಿಲ್ಲವಲ್ಲ. ನಿಮ್ಮ ರಾಜಕಾರಣಿಗಳು ಹೊಣೆಗೇಡಿಗಳು ಎಂಬುದು ಸಾಬೀತಾಗಿದೆ. ಆ ಬಗ್ಗೆ ಮಾತನಾಡಿ ಎಂದು ಹೇಳಿದ್ದಾರೆ.

Recommended Video

ಆಸ್ಪತ್ರೆಯಲ್ಲಿ ನಡೆಯುತ್ತಿರುವ ದಂಧೆಯ ವಿರುದ್ಧ ಸಿಡಿದೆದ್ದ ತೇಜಸ್ವಿ ಸೂರ್ಯ | Oneindia Kannada
ಜೈಲಿಗೆ ಹಾಕಿಸುತ್ತಾರಾ?

ಜೈಲಿಗೆ ಹಾಕಿಸುತ್ತಾರಾ?

ಚಾಮರಾಜನಗರದಲ್ಲಿ ಸತ್ತವರ ಸಂಖ್ಯೆಯ ಬಗ್ಗೆ ಸುಳ್ಳು ಮಾಹಿತಿ ನೀಡಿ, ಕೇವಲ 3 ಸಾವು ಆಮ್ಲಜನಕದ ಕೊರತೆಯಿಂದ ಆಗಿದ್ದು ಎಂದು ಸುಳ್ಳು ರಿಪೋರ್ಟ್ ಬರೆಸುವ ರಾಜಕಾರಣಿಗಳನ್ನು ಮುಖ್ಯಮಂತ್ರಿ ಒದ್ದು ಜೈಲಿಗೆ ಹಾಕಿಸುತ್ತಾರಾ? ಆ ಬಗ್ಗೆ ಮಾತನಾಡಿ.

ಚಿಕಿತ್ಸೆ ಮಾಡಲು ವೈದ್ಯರು, ವೈದ್ಯಕೀಯ ಸಿಬ್ಬಂದಿ, ಲಸಿಕೆ, ವೆಂಟಿಲೇಟರ್, ಸಿಲೆಂಡರ್ ಇರದಿರುವಾಗ ಬೆಡ್ ನೀಡಿ ಏನು ಮಾಡುತ್ತೀರಿ ಎಂದು ಸರ್ಕಾರಕ್ಕೆ ಪ್ರಶ್ನಿಸಿ. ಅಧಿಕಾರಿಗಳು ಇದರ ಹೊಣೆ ಅಲ್ಲ. ನೇಮಕಾತಿ ಮಾಡಬೇಕಿರುವುದು ಸರ್ಕಾರ. ನೇಮಕ ಮಾಡಿಕೊಳ್ಳದ ರಾಜಕಾರಣಿಗಳನ್ನು ಮುಖ್ಯಮಂತ್ರಿ ಒದ್ದು ಜೈಲಿಗೆ ಅಟ್ಟುವರೆ ಕೇಳಿ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

English summary
Bengaluru South MP Tejasvi Surya exposed the bed blocking racket at the BBMP war rooms. Congress leader Ramalinga Reddy questions to Tejasvi Surya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X