ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್‌ನಲ್ಲಿ ಚಿಟ್ಟೆ ಪಾರ್ಕ್: ಅಳಿವಿನಂಚಿನ ಚಿಟ್ಟೆಗಳನ್ನು ಉಳಿಸಲು ಕ್ರಮ

By Nayana
|
Google Oneindia Kannada News

ಬೆಂಗಳೂರು, ಮೇ 21: ಹಸಿರಿನಿಂದ ತುಂಬಿರುವ ಲಾಲ್‌ಬಾಗ್‌ನ್ನು ಇನ್ನಷ್ಟು ಅಂದವಾಗಿ ಮಾಡಲು ಬರುತ್ತಿವೆ ಚಿಟ್ಟೆಗಳು, ಲಾಲ್‌ಬಾಗ್‌ನಲ್ಲಿ ಚಿಟ್ಟೆ ಉದ್ಯಾನವನ್ನು ನಿರ್ಮಿಸಲು ತೋಟಗಾರಿಕಾ ಇಲಾಖೆ ನಿರ್ಧರಿಸಿದೆ.

ಅಳಿವಿನಂಚಿನಲ್ಲಿರುವ ವಿವಿಧ ಪ್ರಬೇಧಗಳ ಚಿಟ್ಟೆ ಸಂತತಿ ಉಳಿದಲು ಈ ಕ್ರಮಕ್ಕೆ ಮುಂದಾಗಿದೆ. ಸಿದ್ದಾಪುರ ಗೇಟ್‌ ಬಳಿ ಲಾಲ್‌ಬಾಗ್‌ಗೆ ಬರುವ ವಾಹನಗಳಿಗೆ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿ ವಿವಾದಕ್ಕೊಳಗಾಗಿದ್ದ ಸುಮಾರು 3 ಎಕರೆ ಜಮೀನಿನಲ್ಲಿ ಚಿಟ್ಟೆ ಪಾರ್ಕ್ ನಿರ್ಮಾಣಕ್ಕೆ ನಿರ್ಧರಿಸಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ.

ಮೇ 27ಕ್ಕೆ ಮಾವು ಅಭಿವೃದ್ಧಿ ನಿಗಮದಿಂದ 'ಮ್ಯಾಂಗೊ ಪಿಕ್ಕಿಂಗ್ ಟೂರಿಸಂ'ಮೇ 27ಕ್ಕೆ ಮಾವು ಅಭಿವೃದ್ಧಿ ನಿಗಮದಿಂದ 'ಮ್ಯಾಂಗೊ ಪಿಕ್ಕಿಂಗ್ ಟೂರಿಸಂ'

ಚಿಟ್ಟೆ ಸಂತತಿಯಲ್ಲಿ 100ಕ್ಕೂ ಹೆಚ್ಚು ಪ್ರಬೇಧಗಳಿದ್ದು , ರೇಷ್ಮೆ ಹುಳು, ಹಿಪ್ಪು ನೇರಳೆ ಸೊಪ್ಪು ತಿನ್ನುವಂತೆ ಪ್ರತಿಯೊಂದು ಪ್ರಬೇಧದ ಚಿಟ್ಟೆಯೂ ಒಂದೊಂದು ರೀತಿಯ ಸೊಪ್ಪು ತಿಂದು ಜೀವಿಸುತ್ತಿದ್ದು, ಜೀವ ವಿಜ್ಞಾನಿಗಳು ಸಂಶೋಧನೆ ನಡೆಸಿ ಚಿಟ್ಟೆಗಳಿಗೆ ಅಗತ್ಯವಿರುವ ಸೊಪ್ಪಿನ ಪತ್ತೆ ಹಚ್ಚಿ ನೆಡುವ ಮೂಲಕ ಚಿಟ್ಟೆಗಳ ಸಂತತಿ ಬೆಳೆಸುವ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ.

Beautiful Butterfly park in Lalbagh soon!

ಚಿಟ್ಟೆಗಳ ಸಂತತಿಗೆ ಸಂಬಂಧಿಸಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ವೈಜ್ಞಾನಿಕ ಸಂಶೋಧನೆ ನಡೆಯುತ್ತಿದೆ. ಅಂತಹ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಚಿಟ್ಟೆಗಳು ನೆಲೆಸುವ ವಾತಾವರಣ ಸೃಷ್ಟಿಸುವುದು ಹಾಗೂ ಅದಕ್ಕೆ ಅಗತ್ಯವಾದ ಆಹಾರ ಒದಗಿಸುವ ಕಾರ್ಯವೂ ನಡೆಯುತ್ತಿದೆ.

English summary
Department of horticulture is decided to construct a butterfly park in Lalbagh botanical garden and around 100 different species of butterflies will be seen in this park soon. It will be more attractive park in the city, the department expected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X