ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ನಿಂದ ಬಂದ ದಂಪತಿಗೆ ಆತಂಕ ತರಿಸಿದ ಓಲಾ ಚಾಲಕನ ಕತ್ತಲ ಹಾದಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 1: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಕಡೆಗೆ ತೆರಳಲು ಓಲಾ ಬುಕ್ ಮಾಡಿದ ದಂಪತಿಗಳಿಗೆ ಶಾಕ್ ಕಾದಿತ್ತು.

ಇತ್ತೀಚೆಗೆ ಏರ್‌ಪೋರ್ಟ್‌ನಿಂದ ರಸ್ತೆಯಲ್ಲಿ ಸಾಕಷ್ಟು ಕಹಿ ಘಟನೆಗಳು ನಡೆದಿವೆ. ಪ್ರಯಾಣಿಕರು ತೋರಿಸಿದ ರಸ್ತೆಯಲ್ಲಿ ಕಾರು ಓಡಿಸದೇ ಇರುವುದು, ಅತಿಯಾದ ವೇಗದಲ್ಲಿ ಕಾರು ಚಲಾಯಿಸುವುದು, ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗುತ್ತಿವೆ.

ಓಲಾ ವಿರುದ್ಧ ಮುಷ್ಕರ ನಡೆಸಲು ಮುಂದಾದ ಚಾಲಕರ ಒಕ್ಕೂಟ ಓಲಾ ವಿರುದ್ಧ ಮುಷ್ಕರ ನಡೆಸಲು ಮುಂದಾದ ಚಾಲಕರ ಒಕ್ಕೂಟ

ಅದೇ ರೀತಿ ಈಗ ನಡೆದಿರುವ ಘಟನೆ ಕ್ಯಾಬ್‌ಗಳನ್ನು ಬುಕ್ ಮಾಡುವುದಕ್ಕೇ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕತ್ರಿಗುಪ್ಪೆ ನಿವಾಸಿ ನಿವೃತ್ತ ವಿಜ್ಞಾನಿ ನಾಗೇಂದ್ರ, ಅವರ ಪತ್ನಿ ಚೂಡಾಮಣಿ ಎನ್ನುವವರು ರಾತ್ರಿ 9 ಗಂಟೆ ಸುಮಾರಿಗೆ ಸ್ನೇಹಿತರೊಬ್ಬರನ್ನು ಕಳುಹಿಸಿಕೊಡಲು ಏರ್‌ಪೋರ್ಟ್‌ ಗೆ ಹೋಗಿದ್ದರು.ಬಳಿಕ ಸುಮಾರು 10 ಗಂಟೆಗೆ ಓಲಾ ಕ್ಯಾಬ್ ಬುಕ್ ಮಾಡಿದ ದಂಪತಿ, ಕಾರು ಹತ್ತಿ ಹೋಗುತ್ತಿದ್ದರು.

Be carefull before booking ola cab in kia

ಕ್ಯಾಬ್ ಹತ್ತಿ ಐದು ನಿಮಿಷ ಆಗಿತ್ತಷ್ಟೇ. ಅಷ್ಟರಲ್ಲಿ ಮಂಕಿ ಕ್ಯಾಪ್ ಹಾಕಿದ್ದ ಚಾಲಕ, ಮುಖ್ಯ ರಸ್ತೆ ಬಿಟ್ಟು ಬೇಗೂರು ರಸ್ತೆಯ ನಿರ್ಜನ ಪ್ರದೇಶದ ಡೇಂಜರ್ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿದ್ದ ಎಂದು ತಿಳಿಸಿದ್ದಾರೆ.

ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್ ಯುವತಿಗೆ ಅಶ್ಲೀಲ ವಿಡಿಯೋ ತೋರಿಸಿದ ಓಲಾ ಚಾಲಕ ಮಿಸ್ಸಿಂಗ್: ಪೊಲೀಸರ ತಲಾಶ್

ಮುಖ್ಯ ರಸ್ತೆಯಲ್ಲಿಯೇ ಹೋಗಿ ಎಂದರೆ ಅಥವಾ ತಿರುಗಿ ಏರ್‌ಪೋರ್ಟ್‌ಗೆ ಬಿಟ್ಟುಬಿಡಿ ಎಂದು ಎಷ್ಟೇ ಮನವಿ ಮಾಡಿದರೂ ಚಾಲಕ ಕೇಳಲಿಲ್ಲ, ಮುಖ್ಯ ರಸ್ತೆಯಲ್ಲಿ ಹೋದರೆ ಟೋಲ್ ಕಟ್ಟಬೇಕು, ಸುಮ್ಮನೆ ಕುಳಿತುಕೊಳ್ಳಿ ಎಂದು ಬಾಯಿ ಮುಚ್ಚಿಸಿದ್ದ.

ಕ್ಯಾಬ್ ಚಾಲಕರಿಂದ ಕಿರುಕುಳ: ಮಹಿಳಾ ಚಾಲಕರಿಗೆ ಹೆಚ್ಚಿದ ಬೇಡಿಕೆ ಕ್ಯಾಬ್ ಚಾಲಕರಿಂದ ಕಿರುಕುಳ: ಮಹಿಳಾ ಚಾಲಕರಿಗೆ ಹೆಚ್ಚಿದ ಬೇಡಿಕೆ

ಅಲ್ಲಿದ್ದ ಎಮರ್ಜೆನ್ಸಿ ಬಟನ್ ಒತ್ತಿ ಸಹಾಯಕ್ಕೆ ಬರುವಂತೆ ಕೇಳಿಕೊಂಡರೂ ಕೂಡ ಅಧಿಕಾರಿಗಳು ಆತನ ಪರವಾಗಿಯೇ ಮಾತನಾಡಿದ್ದರು. ಬಳಿಕ ಕತ್ತಲಲ್ಲೇ ಕಾರು ಇಳಿದು ಬಸ್‌ಹತ್ತಿ ನೆಮ್ಮದಿಯಿಂದ ಮನೆ ಸೇರಿದೆವು. ಅಷ್ಟೇ ಅಲ್ಲದೆ ಮನೆಗೆ ಡ್ರಾಪ್ ಮಾಡಲಾಗಿದೆ ಎಂದು ಮೆಸೇಜ್ ಮಾಡಿ 861 ರೂ ಹಣ ನೀಡುವಂತೆ ಬಿಲ್ ಕಳುಹಿಸಿದ್ದರು. ಹಣ ಉಳಿಸಲು ನಿರ್ಜನ ಪ್ರದೇಶದಲ್ಲಿ ಪ್ರಯಾಣ ಮಾಡುತ್ತಾರೆ ಯಾವುದೇ ಕಾರಣಕ್ಕೂ ಓಲಾ ಕ್ಯಾಬ್ ಬುಕ್ ಮಾಡುವ ಮುನ್ನ ಆಲೋಚಿಸಿ ಎಂದು ದಂಪತಿ ಕೇಳಿಕೊಂಡಿದ್ದಾರೆ.

English summary
Ola cab driver and irresponsible behavior of the customer care is scaring for passengers. Incident happened during Kempegowda international airport pickup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X