ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗಾಗಿ ಹೊಸ ಮಾಸ್ಟರ್‌ಪ್ಲ್ಯಾನ್ ಸಿದ್ಧಪಡಿಸುತ್ತಿರುವ ಬಿಡಿಎ

|
Google Oneindia Kannada News

ಬೆಂಗಳೂರು,ಜನವರಿ 22: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರಿಗಾಗಿ ಹೊಸ ಮಾಸ್ಟರ್‌ಪ್ಲ್ಯಾನ್ ಸಿದ್ಧಪಡಿಸುತ್ತಿದೆ.

ಈ ಮೊದಲು ತಿರಸ್ಕರಿಸಲಾಗಿದ್ದ ಕಂಪನಿಯೇ ಮತ್ತೊಂದು ಮಾಸ್ಟರ್‌ಪ್ಲ್ಯಾನ್ ಸಿದ್ಧಪಡಿಸಿದೆ.

ಇದೀಗ ತಿರಸ್ಕೃತಗೊಂಡಿದ್ದ ಕಂಪನಿಯಿಂದಲೇ ಮತ್ತೊಂದು ಪ್ಲ್ಯಾನ್ ತಯಾರಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅವರು ಆರ್‌ಎಂಪಿಯನ್ನು 4ಜಿ ವಿನಾಯಿತಿಯೊಂದಿಗೆ ರೂಪಿಸಿದ್ದರು.

ಈ ಪರಿಷ್ಕೃತ ಯೋಜನೆಯಲ್ಲಿ ಮೆಟ್ರೋ, ಬಿಎಂಟಿಸಿಯು ಅಡಕವಾಗಲಿದೆ. ಕಳೆದ ವರ್ಷ ಬಿಎಸ್ ಯಡಿಯೂರಪ್ಪ ಸರ್ಕಾರವು ಪರಿಷ್ಕೃತ ಮಾಸ್ಟರ್ ಪ್ಲ್ಯಾನ್‌ನ್ನು ಕೈಬಿಟ್ಟಿದ್ದರು. ಈ ಯೋಜನೆಯು 2019ರಲ್ಲಿ ಬಿಡಿಎಯಿಂದ ಅನುಮತಿ ಪಡೆದಿತ್ತು.

BDA To Prepare Fresh Master Plan For Bengaluru

ಈ ವರದಿ ಸಿದ್ಧಪಡಿಸಲು 3 ವರ್ಷವನ್ನು ತೆಗೆದುಕೊಳ್ಳಲಾಗಿತ್ತು.ಜನರಿಂದಲೂ 14,000 ಆಕ್ಷೇಪಣೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು.

2031ರ ಮಹಾ ಯೋಜನೆ ರೂಪಿಸಲು 2011-12ರ ನಕ್ಷೆಗಳು, ಫೋಟೊಗಳು ಮತ್ತು ಇತರೆ ಅಂಕಿ ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಪ್ರಸ್ತುತ ಬಳಸಲಾಗಿರುವ ಸ್ಥಳಗಳಲ್ಲಿ ಹಲವು ಬದಲಾವಣೆ, ಬೆಳವಣಿಗೆಗಳು ಆಗಿವೆ. ಹಾಗಾಗಿ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ ಎಂದು ಹೇಳಿ ಮಹಾಯೋಜನೆಗೆ ನೀಡಲಾಗಿದ್ದ, ಅನುಮೋದನೆಯನ್ನು ಹಿಂಪಡೆಯಲಾಗಿ್ತತು.

Recommended Video

ಸಿದ್ದು ನರಿ ಬುದ್ದಿ ನೋಡಿ ರಾಹುಲ್ ಶಾಕ್!! | Oneindia Kannada

2015ರ ಪರಿಷ್ಕೃತ ಯೋಜನೆಯು ಸಾಕಷ್ಟು ಲೋಪದೋಷಗಳಿಂದ ಕೂಡಿತ್ತು, ವಾಸ್ತವ ಮತ್ತು ಯೋಜನೆಯ ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದ ಕಾರಣ ಯೋಜನೆ ಅನುಷ್ಠಾನವಾಗಿದ್ದು ಶೇ.15ರಿಂದ 20ರಷ್ಟು ಮಾತ್ರ. ಬೆಂಗಳೂರಿನ ಪರಿಸ್ಥಿತಿ 2031ರ ವೇಳೆಗೆ ಮತ್ತಷ್ಟು ಹದಗೆಡಲಿದೆ, ಜನಸಂಖ್ಯೆಯೂ ದುಪ್ಪಟ್ಟಾಗಲಿದೆ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕು.

English summary
The BDA is all set to re start the exercise of preparing a fresh master plan for the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X