ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2007ರ ಮಾದರಿಯ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ ಮುಂದಾದ ಬಿಡಿಎ

|
Google Oneindia Kannada News

ಬೆಂಗಳೂರು, ಜನವರಿ 19: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2007ರಲ್ಲಿ ರೂಪಿಸಿದ್ದ ಪೆರಿಫೆರಲ್ ರಿಂಗ್ ರಸ್ತೆಯ ಯೋಜನೆಯ ಪ್ರಕಾರ ಕಾಮಗಾರಿ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

2007ರಲ್ಲಿ ಇದ್ದಂತಹ ಮಾದಿರಿಯಲ್ಲೇ ಈ ಯೋಜನೆ ಮುಂದುವರೆಯಲಿದೆ ಹೀಗಾಗಿ 2010ರ ಡಿಪಿಆರ್‌ನ್ನು ಕೈಬಿಡಲಾಗಿದೆ.

ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಸಾರ್ವಜನಿಕರಿಂದ ಹಾಗೂ ಇತರೆ ರಿಯಲ್ ಎಸ್ಟೇಟ್ ಅಭಿವೃದ್ಧಿ ಕಾಮಗಾರಿಗಳಿಂದ ಹಣ ಹೊಂದಿಸುವ ಸರ್ಕಾರದ ಯೋಜನೆ ವಿಫಲವಾಗಿದೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ? ಬೆಂಗಳೂರು-ಮೈಸೂರು ದಶಪಥ ರಸ್ತೆ ವಿಸ್ತರಣೆ, ಎಲ್ಲಿಯವರೆಗೆ?

ಇದರಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2010ರ ಯೋಜನೆ ಕೈಬಿಟ್ಟು 2007ರ ಮಾದಿರಿಯಲ್ಲೇ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ನಿರ್ಧರಿಸಿದೆ.

2007ರಲ್ಲಿ ಎಷ್ಟು ಹಣವನ್ನು ಮೀಸಲಿಡಲಾಗಿತ್ತು?

2007ರಲ್ಲಿ ಎಷ್ಟು ಹಣವನ್ನು ಮೀಸಲಿಡಲಾಗಿತ್ತು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2007ರಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 17,061 ಕೋಟಿ ರೂ ಮೀಸಲಿಟ್ಟಿತ್ತು. ಆದರೆ ಮೊದಲಿನ ಯೋಜನೆ ಕೈಬಿಟ್ಟು 2010ರಲ್ಲಿ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು

ಫೆಬ್ರವರಿಯಲ್ಲಿ ಹೊಸ ಟೆಂಡರ್

ಫೆಬ್ರವರಿಯಲ್ಲಿ ಹೊಸ ಟೆಂಡರ್

ಫೆಬ್ರವರಿ ಮೊದಲ ವಾರದಲ್ಲಿ ಹೊಸ ಟೆಂಡರ್ ಕರೆಯಲಾಗುತ್ತದೆ. ಮೂರು ವರ್ಷಗಳ ಡೆಡ್‌ಲೈನ್ ನೀಡಲಾಗುತ್ತಿದೆ. 2010ರ ಯೋಜನೆಗೆ ಹಣ ಒದಗಿಸಲು ಬಿಡಿಎಗೆ ಕಷ್ಟವಾಗಿತ್ತು ಹಾಗಾಗಿ ಟೆಂಡರ್ ಕೈಬಿಡಲಾಗಿತ್ತು. ಇದೀಗ ದೀರ್ಘಾವಧಿ ಸಾಲ ತೆಗೆದುಕೊಂಡು ಯೋಜನೆ ಆರಂಭಿಸಲಾಗುತ್ತಿದೆ.

66.2 ಕಿ.ಮೀ ಪೆರಿಫೆರಲ್ ರಿಂಗ್ ರೋಡ್

66.2 ಕಿ.ಮೀ ಪೆರಿಫೆರಲ್ ರಿಂಗ್ ರೋಡ್

ಒಟ್ಟು 66.2 ಕಿ.ಮೀ ಉದ್ದದ ಷಟ್ಪಥ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. 2007ರಲ್ಲಿ ಹೇಳಲಾಗಿದ್ದ ಒಟ್ಟು ಕಿ.ಮೀಗಿಂತ 700 ಮೀಟರ್ ವಿಸ್ತರಣೆ ಮಾಡಲಾಗುತ್ತಿದೆ.

ಯಾವ್ಯಾವ ಪ್ರದೇಶವನ್ನು ಹಾದುಹೋಗಲಿದೆ?

ಯಾವ್ಯಾವ ಪ್ರದೇಶವನ್ನು ಹಾದುಹೋಗಲಿದೆ?

ಔಟರ್ ರಿಂಗ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ವರ್ತೂರು, ವೈಟ್‌ಫೀಲ್ಡ್, ಹೊಸಕೋಟೆ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಈ ಯೋಜನೆಗೆ 1810 ಎಕರೆ ವಿಸ್ತೀರ್ಣ ಬೇಕಾಗತ್ತದೆ.

English summary
BDA has finalised that the Rs 17,061-crore Peripheral Ring Road (PRR) project will be built based on the alignment it had readied in 2007.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X